Taliban: ಅಫ್ಘಾನ್ ಹುಡುಗಿಯರಿಗೆ ಸಿಹಿ ಸುದ್ದಿ, ಭೀಕರ ದೌರ್ಜನ್ಯದ ನಡುವೆ ಉತ್ತಮ ಕೆಲಸ ಮಾಡಿದ ತಾಲಿಬಾನ್
Afghanistan Latest News: ಅಫ್ಘಾನಿಸ್ತಾನದ ಆಕ್ರಮಣದ ನಂತರ, ತಾಲಿಬಾನ್ ಪ್ರತಿದಿನ ಹೊಸ ತೀರ್ಪುಗಳನ್ನು ನೀಡುವುದನ್ನು ಮುಂದುವರೆಸಿದೆ. ಆದರೆ ಈ ನಡುವೆ ಭಯೋತ್ಪಾದಕ ಸಂಘಟನೆ ತಾಲಿಬಾನ್ ಉತ್ತಮ ನಿರ್ಧಾರ ಕೈಗೊಂಡಿದೆ.
Afghanistan Latest News: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣದ ನಂತರ, ಹುಡುಗಿಯರು ಶಾಲೆಗೆ ಹೋಗುವುದನ್ನು ನಿಷೇಧಿಸಲಾಯಿತು, ಆದರೆ ತಿಂಗಳ ನಂತರ ಇಲ್ಲಿ ಹುಡುಗಿಯರು ಮತ್ತೆ ಶಾಲೆಗೆ ಹೋಗಲು ಸಾಧ್ಯವಾಗುತ್ತದೆ. ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ಬಾಲಕಿಯರ ಶಾಲೆಗಳನ್ನು ತೆರೆಯಲು ಸೂಚನೆಗಳನ್ನು ನೀಡಲಾಗಿದೆ, ಅದರ ಅಡಿಯಲ್ಲಿ 7 ರಿಂದ 12 ನೇ ತರಗತಿಯ ವಿದ್ಯಾರ್ಥಿನಿಯರು ಫಿರೋಜ್‌ಕೋಹ್‌ನಲ್ಲಿರುವ ತಮ್ಮ ಶಾಲೆಗಳಿಗೆ ಹೋಗಲು ಅನುಮತಿಸಲಾಗಿದೆ. ವರದಿಯ ಪ್ರಕಾರ, ಫಿರೋಜ್ಕೊಹ್ ಕೌನ್ಸಿಲ್ ಮಾಡಿದ ಪ್ರಯತ್ನಗಳಿಂದ ಶಾಲೆಗಳನ್ನು ಪುನಃ ತೆರೆಯಲಾಗಿದೆ ಎಂದು ವರದಿಗಳು ತಿಳಿಸಿವೆ.
ವಿದ್ಯಾರ್ಥಿನಿಯರಿಗಾಗಿ ಶಾಲೆಗಳು ಪುನರಾರಂಭ:
ಫಿರೋಜ್‌ಕೋ ಕೌನ್ಸಿಲ್ ಘೋರ್ ಪ್ರಾಂತ್ಯದ ಶಿಕ್ಷಣ ಅಧಿಕಾರಿಗಳನ್ನು ಬಾಲಕಿಯರ ಶಾಲೆಗಳನ್ನು ಪುನಃ (Schools Reopen For Girls) ತೆರೆಯುವಂತೆ ಒತ್ತಾಯಿಸಿತು. ಈ ಬಗ್ಗೆ ಮಾತನಾಡಿರುವ ಫಿರೋಜ್‌ಕೋ ಕೌನ್ಸಿಲ್‌ನ ಮುಖ್ಯಸ್ಥ ಸುಲ್ತಾನ್ ಅಹ್ಮದ್, 'ಘೋರ್‌ನ ಎಲ್ಲಾ ಜಿಲ್ಲೆಗಳಲ್ಲಿ ಬಾಲಕಿಯರಿಗಾಗಿ ಪ್ರೌಢಶಾಲೆಗಳನ್ನು ಪುನರಾರಂಭಿಸಬೇಕೆಂದು ನಾವು ಒಪ್ಪಂದಕ್ಕೆ ಬಂದಿದ್ದೇವೆ' ಎಂದು ಹೇಳಿದರು.
ಇದನ್ನೂ ಓದಿ- HIV AIDS:8 ವರ್ಷಗಳ ಹಿಂದೆ AIDSಗೆ ಗುರಿಯಾದಾಗ ಎಲ್ಲವು The End ಅನಿಸಿತು, ಆದ್ರೆ, ಯಾವುದೇ ಔಷಧಿ ಇಲ್ಲದೆ HIV ಸೋಲಿಸಿದ ಮಹಿಳೆ
ಶಾಲೆಗೆ ಹೋಗಲು ಅನುಮತಿ ನೀಡಿದ ತಾಲಿಬಾನ್:
ಘೋರ್ ಪ್ರಾಂತ್ಯದಲ್ಲಿ ಶಾಲೆಗಳ ಪುನರಾರಂಭದ (School Reopen) ಬಗ್ಗೆ ಸಂತಸ ವ್ಯಕ್ತಪಡಿಸಿದ ನಾಗರಿಕ ಹಕ್ಕುಗಳ ಕಾರ್ಯಕರ್ತ ಹಬೀಬ್ ವಹ್ದತ್, "ಬಾಲಕಿಯರಿಗಾಗಿ ಶಾಲೆಗಳನ್ನು ಪುನರಾರಂಭಿಸಲು ತುಂಬಾ ಸಂತೋಷವಾಗಿದೆ". ಮಹಿಳೆಯರು ಶಿಕ್ಷಣದಿಂದ ವಂಚಿತರಾದರೆ ಸಮಾಜದ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗುವುದಿಲ್ಲ ಎಂದು ಹೇಳಿದರು.
ವಾಸ್ತವವಾಗಿ, ಪಶ್ಚಿಮ ಅಫ್ಘಾನಿಸ್ತಾನದ ಹೆರಾತ್ ಮತ್ತು ಘೋರ್ ಪ್ರಾಂತ್ಯಗಳಲ್ಲಿ, ಪ್ರೌಢ ಶಿಕ್ಷಣಕ್ಕಾಗಿ ಹುಡುಗಿಯರು ಶಾಲೆಗಳಿಗೆ ಹೋಗಲು ಅನುಮತಿಸಲಾಗಿದೆ. ತಾಲಿಬಾನ್ 15 ಆಗಸ್ಟ್ 2021 ರಂದು ಅಫ್ಘಾನಿಸ್ತಾನದ ನಿಯಂತ್ರಣವನ್ನು ತೆಗೆದುಕೊಂಡಿತು, ನಂತರ ಅಫ್ಘಾನಿಸ್ತಾನದಲ್ಲಿ ಹುಡುಗಿಯರು ಶಾಲೆಗೆ ಹೋಗುವುದನ್ನು ನಿಷೇಧಿಸಲಾಯಿತು. ಇಷ್ಟು ಮಾತ್ರವಲ್ಲದೆ ತಾಲಿಬಾನ್‌ಗಳು ಪ್ರತಿದಿನ ವಿವಿಧ ರೀತಿಯ ಆದೇಶಗಳನ್ನು ಹೊರಡಿಸುತ್ತಲೇ ಇರುತ್ತಾರೆ.
ಇದನ್ನೂ ಓದಿ- OMG: ಈ ಕುರ್ಚಿ ಮೇಲೆ ಕುಳಿತ ತಕ್ಷಣ ಸಾವು ಸಂಭವಿಸುತ್ತದೆ, ಅದಕ್ಕೆ ಗೋಡೆಗೆ ನೇತುಹಾಕಲಾಗಿದೆ!
ಮೊದಲು 10 ಅಕ್ಟೋಬರ್ 2021 ರಂದು, ಕುಂದುಜ್, ಬಾಲ್ಖ್ ಮತ್ತು ಸರ್-ಎ-ಪುಲ್ ಪ್ರಾಂತ್ಯಗಳಲ್ಲಿ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ಪುನಃ ತೆರೆಯಲಾಯಿತು. ಈ ಕುರಿತು ಮಾಹಿತಿ ನೀಡಿದ ಪ್ರಾಂತೀಯ ಶಿಕ್ಷಣ ವಿಭಾಗದ ಮುಖ್ಯಸ್ಥ ಜಲೀಲ್ ಸೈಯದ್ ಖಿಲಿ, ಬಾಲಕಿಯರ ಶಾಲೆಗಳನ್ನು ತೆರೆಯಲಾಗಿದ್ದು, ವಿದ್ಯಾರ್ಥಿನಿಯರು ಶಾಲೆಗೆ ಬರಲಾರಂಭಿಸಿದ್ದಾರೆ ಎಂದು ತಿಳಿಸಿದ್ದರು.
ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ಪರಿಸ್ಥಿತಿ:
ಪ್ರಸ್ತುತ, ಅಫ್ಘಾನಿಸ್ತಾನವು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜಪ್ತಿ ಮಾಡಿರುವ ಎಲ್ಲಾ ಬ್ಯಾಂಕ್ ಆಸ್ತಿಗಳನ್ನು ಬಿಡುಗಡೆ ಮಾಡುವಂತೆ ಅಫ್ಘಾನಿಸ್ತಾನ ಹಿಂದಿನ ದಿನ ಅಮೆರಿಕವನ್ನು ಒತ್ತಾಯಿಸಿತ್ತು. ಈ ದೇಶಕ್ಕೆ ಸಹಾಯ ಮಾಡಲು ಯುಎನ್ ಸಾಕಷ್ಟು ಕೊಡುಗೆ ನೀಡಿದ್ದರೂ ಅಷ್ಟೇ ಅಲ್ಲ ಇಲ್ಲಿ ಹಸಿವಿನ ಸಮಸ್ಯೆಯೂ ಹೆಚ್ಚುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ