ನವದೆಹಲಿ: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಕಳೆದೊಂದು ತಿಂಗಳಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಹಣಕಾಸಿನ ವಿಚಾರವಾಗಿ ಹತಾಶ ಪರಿಸ್ಥಿತಿಯಲ್ಲಿದೆ. ಹೀಗಿರುವಾಗ ಬರೋಬ್ಬರಿ 6 ಕೋಟಿ ರೂ.ಗಿಂತಲೂ ಹೆಚ್ಚು ಹಣವನ್ನು ತನ್ನ ಶತ್ರುದೇಶ ತಜಕಿಸ್ತಾನ(Tajikistan)ಕ್ಕೆ ತಪ್ಪಾಗಿ ವರ್ಗಾವಣೆ ಮಾಡಿ ಇಕ್ಕಟ್ಟಿಗೆ ಸಿಲುಕಿದೆ. ವಾಪಸ್ ಆ ಹಣ ಪಡೆಯಲು ತಾಲಿಬಾನ್(Taliban) ಇದೀಗ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಆದರೆ ತಜಕಿಸ್ತಾನ್ ಮಾತ್ರ ಈ ಹಣವನ್ನು ಹಿಂದಿರುಗಿಸಲು ನಿರಾಕರಿಸಿದೆ. ಹೀಗಾಗಿ ತಾಲಿಬಾನ್ ಗೆ ಈಗ ಏನು ಮಾಡುವುದು ಎಂಬುದರ ಬಗ್ಗೆ ದಿಕ್ಕೇ ತೋಚದಂತಾಗಿದೆ.


COMMERCIAL BREAK
SCROLL TO CONTINUE READING

ಆಫ್ಘನ್ ರಾಯಭಾರ ಕಚೇರಿಗೆ ತಪ್ಪಾಗಿ $8 ಮಿಲಿಯನ್ ಹಣ ವರ್ಗಾವಣೆ


ತಜಕಿಸ್ತಾನದ ರಾಜಧಾನಿ ದುಶಾನ್ಬೆ ಮೂಲದ ಅವೆಸ್ಟಾ(Avesta) ಹೆಸರಿನ ವೆಬ್‌ಸೈಟ್ ತಾಲಿಬಾನ್ $8 ಮಿಲಿಯನ್ ಹಣವನ್ನು ತಜಕಿಸ್ತಾನದ ಅಫ್ಘಾನ್ ರಾಯಭಾರ ಕಚೇರಿಗೆ ವರ್ಗಾಯಿಸಿದೆ ಎಂದು ಹೇಳಿಕೊಂಡಿದೆ. ಇದು ಭಾರತೀಯ ಕರೆನ್ಸಿಯಲ್ಲಿ ಸುಮಾರು 60 ಮಿಲಿಯನ್ ಆಗಿದೆ.


ಇದನ್ನೂ ಓದಿ: Omicron: ಬ್ರಿಟನ್‌ನಲ್ಲಿ ಮತ್ತೊಮ್ಮೆ ಕರೋನಾ ವಿನಾಶ, ಒಂದು ದಿನದಲ್ಲಿ 10,000 ಕ್ಕೂ ಹೆಚ್ಚು ಹೊಸ ಪ್ರಕರಣ ದಾಖಲು


ಜನರ ಕಲ್ಯಾಣಕ್ಕಾಗಿ ಹಣ ಕಳುಹಿಸಲಾಗಿದೆ


ಈ ಹಣವನ್ನು ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ(Ashraf Ghani) ಅವರು ತಜಕಿಸ್ತಾನ್‌ನಲ್ಲಿರುವ ಆಫ್ಘನ್ ರಾಯಭಾರ ಕಚೇರಿಯ ಜನರ ಕಲ್ಯಾಣಕ್ಕಾಗಿ ಎತ್ತಿ ಇಡಲಾಗಿತ್ತು. ತಜಕಿಸ್ತಾನದಲ್ಲಿ ನಿರಾಶ್ರಿತರಾಗಿ ವಾಸಿಸುವ ಮಕ್ಕಳಿಗೆ ಶಾಲಾ ಶಿಕ್ಷಣ ನೀಡಲು ಈ ಹಣವನ್ನು ಖರ್ಚು ಮಾಡಬೇಕಿತ್ತು. ಘನಿ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದಾಗ ತಾಲಿಬಾನ್ ಒಪ್ಪಂದವನ್ನು ರದ್ದುಗೊಳಿಸಿತು. ಆದರೆ ತಪ್ಪಾಗಿ ಈ ಮೊತ್ತವನ್ನು ತಜಕಿಸ್ತಾನಕ್ಕೆ ವರ್ಗಾಯಿಸಲಾಗಿದೆ.


ಕೆಲ ವಾರಗಳ ಹಿಂದಷ್ಟೇ ಈ ಮೊತ್ತವನ್ನು ವರ್ಗಾಯಿಸಲಾಗಿತ್ತು. ಕೆಲ ಮೂಲಗಳ ಪ್ರಕಾರ ತಾಲಿಬಾನ್ ಸರ್ಕಾರ ತಪ್ಪಾಗಿ ಕಳುಹಿಸಿರುವುದು $4 ಮಿಲಿಯನ್ ಎಂದು ಹೇಳಿಕೊಂಡಿವೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಿದ್ದಿಲ್ಲ. ತಾಲಿಬಾನ್ ಮಾತ್ರ $8 ಮಿಲಿಯನ್ ಹಣವು ತಪ್ಪಾಗಿ ಶತ್ರುದೇಶಕ್ಕೆ ವರ್ಗಾವಣೆ(Transfers Money)ಯಾಗಿದೆ ಎಂದು ಹೇಳುತ್ತಿದ್ದು, ಅದನ್ನು ವಾಪಸ್ ಪಡೆಯುವ ಸಕಲ ಪ್ರಯತ್ನವನ್ನು ಮಾಡುತ್ತಿದೆ.


ಇದನ್ನೂ ಓದಿ: Pakistan: ಹಿಂದೂ ದೇವಾಲಯದ ಮೇಲೆ ಮತ್ತೆ ದಾಳಿ, ಸುತ್ತಿಗೆಯಿಂದ ದೇವಿಯ ವಿಗ್ರಹ ಒಡೆದ ಮತಾಂಧರು..!


ಹಣ ವಾಪಸ್ ಮಾಡುವುದಿಲ್ಲವೆಂದ ತಜಕಿಸ್ತಾನ


ವರದಿಯ ಪ್ರಕಾರ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ(Taliban Govt.)ವು ನವೆಂಬರ್‌ನಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆಗ ತಾಲಿಬಾನ್ ಆಡಳಿತ ತನ್ನ ಹಣಕಾಸಿನ ಸ್ಥಿತಿಗತಿ ಬಗ್ಗೆ ಪರಿಶೀಲಿಸಿತ್ತು. ತಪ್ಪಾಗಿ ವರ್ಗಾವಣೆಯಾಗಿರುವ ಹಣದ ಬಗ್ಗೆ ತಾಲಿಬಾನ್ ತಲೆಕೆಡಿಸಿಕೊಂಡಿದೆ. ಈ ಹಣವನ್ನು ತಜಕಿಸ್ತಾನದಿಂದ ಹಿಂತಿರುಗಿಸುವಂತೆ ಕೇಳಿದಾಗ ಸಾರಾಸಗಟಾಗಿ ನಿರಾಕರಿಸಲಾಗಿದೆ. ಈ ಮೊತ್ತವನ್ನು ಈಗಾಗಲೇ ಖರ್ಚು ಮಾಡಲಾಗಿದೆ ಎಂದು ತಜಕಿಸ್ತಾನ್ ಸರ್ಕಾರ ಉತ್ತರಿಸಿದೆ. ನಾವು ಶಾಲೆಗಳನ್ನು ನಿರ್ಮಿಸದಿದ್ದರೂ ರಾಯಭಾರ ಕಚೇರಿಯ ಶಿಕ್ಷಕರು ಮತ್ತು ಸಿಬ್ಬಂದಿಗೆ ಈ ಮೊತ್ತವನ್ನು ಖರ್ಚು ಮಾಡಿದ್ದೇವೆಂದು ತಾಲಿಬಾನ್ ಸರ್ಕಾರಕ್ಕೆ ಉತ್ತರ ನೀಡಿದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.