ನವದೆಹಲಿ : ಅಫ್ಘಾನಿಸ್ತಾನದ (Afghanistan) ಅಧಿಕಾರವನ್ನು ವಶಪಡಿಸಿಕೊಂಡಿರುವ ತಾಲಿಬಾನ್, ಮಾನವ ಹಕ್ಕುಗಳು ಮತ್ತು ಅಲ್ಪಸಂಖ್ಯಾತರ ಬಗೆಗಿನ ಕಾಳಜಿಯ ಬಗ್ಗೆ ಮಾತುಗಳನ್ನಾಡುತ್ತಿದೆ. ಆದರೆ ತಾಲಿಬಾನ್  (Taliban) ಕೆಲವು ನಿರ್ಧಾರಗಳು ಈಗಲೂ ಪ್ರಪಂಚದ ನಿದ್ದೆಗೆಡಿಸಿದೆ. 


COMMERCIAL BREAK
SCROLL TO CONTINUE READING

140 ಸಿಖ್ಖರನ್ನು ತಡೆದ ತಾಲಿಬಾನ್  : 
 ಗುರುವಾರ ಅಫ್ಘಾನಿಸ್ತಾನದಿಂದ (Afghanistan) ದೆಹಲಿಗೆ ಬರುತ್ತಿದ್ದ ಸುಮಾರು 140 ಸಿಖ್ಖರನ್ನು ವಿಮಾನ ಹತ್ತದಂತೆ ತಾಲಿಬಾನಿಗಳು  (Taliban) ತಡೆದಿದ್ದಾರೆ. ಈ ಸಿಖ್ಖರು ಶ್ರೀ ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸುತ್ತಿದ್ದರು.  ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅವರನ್ನು ಕಾಬುಲ್ ವಿಮಾನ ನಿಲ್ದಾಣ (Kabul airport) ತಲುಪಲು ಅವಕಾಶ ನೀಡಲಿಲ್ಲ. 


ಇದನ್ನೂ ಓದಿ : ಕಾಶ್ಮೀರವನ್ನು ವಶಪಡಿಸಿಕೊಳ್ಳಲು ತಾಲಿಬಾನ್ ನೆರವಾಗಲಿದೆ ಎಂದ ಪಾಕ್


ಈ ಸಮಾರಂಭದಲ್ಲಿ ಭಾಗಿಯಾಗಬೇಕಿತ್ತು : 
'ಒಂಬತ್ತನೇ ಗುರು ಶ್ರೀ ಗುರು ತೇಗ್ ಬಹದ್ದೂರ್ ಅವರ 400 ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಭಾನುವಾರ ಕೀರ್ತನ ದರ್ಬಾರ್ (Keerthan Darbar) ಅನ್ನು ಆಯೋಜಿಸಲಾಗಿದೆ. ಪ್ರಪಂಚದ ವಿವಿಧ ಭಾಗಗಳಿಂದ ಸಮುದಾಯದ ಸದಸ್ಯರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇದೇ ಸಮಾರಂಭದಲ್ಲಿ ಭಾಗಿಯಾಗಲು ಅಫ್ಘಾನಿಸ್ತಾನದಿಂದ 140 ಜನ ಆಗಮಿಸಬೇಕಿತ್ತು. ಆದರೆ, ಅವರಿಗೆ ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪಲು ಅವಕಾಶ ನೀಡಲಾಗಿಲ್ಲ. 


ಈ ಸಮಾರಂಭದಲ್ಲಿ ಅಫ್ಘಾನ್ ಸಿಖ್ಖರ (Afghan Sikh) ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಭಾರತ ಸರ್ಕಾರವನ್ನು ವಿನಂತಿಸಲಾಗಿತ್ತು.  ಬುಧವಾರ ರಾತ್ರಿ, ಈ ಸಿಖ್ ಯಾತ್ರಿಗಳನ್ನು  15 ಗಂಟೆಗಳಿಗೂ ಹೆಚ್ಚು ಕಾಲ ಕಾಯುವಂತೆ ಮಾಡಿದ್ದರು. ಕೊನೆಗೆ ಎಲ್ಲರನ್ನೂ ವಾಪಸ್ ಕಳುಹಿಸಲಾಯಿತು ಎಂದು, ವಿಕಾಸಪುರಿಯ ಗುರು ನಾನಕ್ ಸಾಹಿಬ್ ಜಿ ಗುರುದ್ವಾರದ ಅಧ್ಯಕ್ಷರಾದ ಗುಲ್ಜಿತ್ ಸಿಂಗ್ ತಿಳಿಸಿದ್ದಾರೆ. 


ಇದನ್ನೂ ಓದಿ : Afghanistan Crisis: ಅಫ್ಘಾನಿಸ್ತಾನದಲ್ಲಿ ಇನ್ನುಂದೆ ಹಾಡುವಂತಿಲ್ಲ, ಕುಣಿಯುವಂತಿಲ್ಲ..!


ತಾಲಿಬಾನ್‌ಗೆ ಮನವಿ : 
ಭಾರತ ವಿಶ್ವ ವೇದಿಕೆ ಅಧ್ಯಕ್ಷ ಪುನಿತ್ ಸಿಂಗ್ ಚಾಂದೋಕ್ ಅವರು ಅಫಘಾನ್ ಹಿಂದೂ ಮತ್ತು ಸಿಖ್ ಯಾತ್ರಿಕರಿಗೆ ಈ ಧಾರ್ಮಿಕ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಇದಕ್ಕಾಗಿ ತಾಲಿಬಾನ್ (Taliban) ನಾಯಕತ್ವಕ್ಕೆ ಮನವಿ ಮಾಡಲಾಗಿದೆ. ಆದರೆ, ಪ್ರಸ್ತುತ, ಈ ಮನವಿಗೆ ತಾಲಿಬಾನ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.