ನವದೆಹಲಿ: ಅಫ್ಘಾನಿಸ್ತಾನದ ಪಂಜ್‌ಶಿರ್ ಕಣಿವೆಯಲ್ಲಿ ತಾಲಿಬಾನ್ ಮತ್ತು ಪ್ರತಿರೋಧ ಪಡೆಗಳ ನಡುವೆ ಶನಿವಾರ ಹೊಸ ಕಾದಾಟ ವರದಿಯಾಗಿದೆ.ಇದೇ ವೇಳೆ ತಾಲಿಬಾನ್ ನೂತನ ಸರ್ಕಾರ ರಚನೆಗೆ ಸಿದ್ದತೆ ನಡೆಸುತ್ತಿದೆ.


COMMERCIAL BREAK
SCROLL TO CONTINUE READING

ವರದಿಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ರಚಿಸಲು ತಾಲಿಬಾನ್ ಸಭೆ ಮುಕ್ತಾಯಗೊಂಡಿದೆ ಮತ್ತು ಎರಡು ಮೂರು ದಿನಗಳಲ್ಲಿ ತನ್ನ ಸದಸ್ಯರನ್ನು ಘೋಷಿಸಲಿದೆ ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಹೇಳಿದರು.


ಇದನ್ನೂ ಓದಿ: ಇಂದು ಅಥವಾ ನಾಳೆ ಅಫ್ಘಾನಿಸ್ತಾನದಲ್ಲಿ ‘ತಾಲಿಬಾನ್ 2.0’ ಹೊಸ ಸರ್ಕಾರ..!


ಯುಎಸ್ ಪಡೆ ಹಿಂತೆಗೆದುಕೊಳ್ಳುವಿಕೆಯ ನಂತರ ದೇಶವನ್ನು ಯಾರು ಮುನ್ನಡೆಸುತ್ತಾರೆ ಎಂದು ಘೋಷಿಸುವ ಮೊದಲು ಪಂಜ್‌ಶಿರ್ ಪ್ರತಿರೋಧವನ್ನು ತೊಡೆದುಹಾಕಲು ನಿರ್ಧರಿಸಿದಂತೆ ಕಾಣುತ್ತದೆ.ಸೋವಿಯತ್ ಒಕ್ಕೂಟದ ಆಕ್ರಮಣ ಮತ್ತು 1996-2001ರ ತಾಲಿಬಾನ್‌ನ ಮೊದಲ ಆಡಳಿತದ ವಿರುದ್ಧ ಪಂಜಶೀರ್ ಪ್ರತಿರೋಧ ಒಡ್ಡುತ್ತಲೇ ಬಂದಿದೆ.ಈ ಹಿನ್ನಲೆಯಲ್ಲಿ ಈಗ ತಾಲಿಬಾನ್ ಪಂಜಶೀರ್ ಪ್ರತಿರೋಧವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ.


ಇದನ್ನೂ ಓದಿ:ಅಫ್ಘಾನಿಸ್ತಾನದ ಪಂಜಶೀರ ಪ್ರಾಂತ್ಯಕ್ಕೆ ನುಗ್ಗಿದ ತಾಲಿಬಾನ್, 350 ತಾಲಿಬಾನಿಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿದ Northern Alliance


ತಾಲಿಬಾನ್ (Taliban) ವಿರೋಧಿ ಸೇನೆ ಮತ್ತು ಮಾಜಿ ಅಫ್ಘಾನ್ ಭದ್ರತಾ ಪಡೆಗಳಿಂದ ಕೂಡಿದ-ರಾಷ್ಟ್ರೀಯ ಪ್ರತಿರೋಧ ಮುಂಭಾಗ (NRF) ಎಂದು ಕರೆಯಲ್ಪಡುವ ಹೋರಾಟಗಾರರು ಕಾಬೂಲ್‌ನ 80 ಕಿಲೋಮೀಟರ್ ಉತ್ತರದಲ್ಲಿರುವ ಕಣಿವೆಯಲ್ಲಿ ಮಹತ್ವದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ.


ಇದನ್ನೂ ಓದಿ:Taliban On Kashmir: ಕಾಶ್ಮೀರದ ಕುರಿತು ತಾಲಿಬಾನ್ ಹೇಳಿಕೆ, ಪಾಕಿಸ್ತಾನಕ್ಕೆ ದೊಡ್ಡ ಹೊಡೆತ


ಇನ್ನೊಂದೆಡೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ಸೆಪ್ಟೆಂಬರ್ 13 ರಂದು ಅಫ್ಘಾನಿಸ್ತಾನದ ಉನ್ನತ ಮಟ್ಟದ ಸಭೆಯನ್ನು ಜಿನೀವಾದಲ್ಲಿ ಆಯೋಜಿಸಲಿದ್ದು, ದೇಶಕ್ಕೆ ಮಾನವೀಯ ನೆರವಿನ ಬಗ್ಗೆ ಗಮನಹರಿಸಲು ಸಜ್ಜಾಗಿದ್ದಾರೆ.ವಿಶ್ವಸಂಸ್ಥೆಯು ಈಗಾಗಲೇ ಅಫ್ಘಾನಿಸ್ತಾನದ ಕೆಲವು ಭಾಗಗಳಿಗೆ ಮಾನವೀಯ ವಿಮಾನಗಳನ್ನು ಪುನರಾರಂಭಿಸಿದೆ, ದೇಶದ ಧ್ವಜ ವಾಹಕ ಅರಿಯಾನಾ ಅಫಘಾನ್ ಏರ್‌ಲೈನ್ಸ್ ಶುಕ್ರವಾರ ದೇಶೀಯ ವಿಮಾನಯಾನವನ್ನು ಪುನರಾರಂಭಿಸಿತು 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.