ಅಫ್ಘಾನಿಸ್ತಾನದ ಪಂಜಶೀರ ಪ್ರಾಂತ್ಯಕ್ಕೆ ನುಗ್ಗಿದ ತಾಲಿಬಾನ್, 350 ತಾಲಿಬಾನಿಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿದ Northern Alliance

ನಿನ್ನೆ ರಾತ್ರಿ ಖವಾಕ್ ಪ್ರದೇಶದ ಮೇಲೆ ದಾಳಿ ಮಾಡಲು ಬಂದ 350 ತಾಲಿಬಾನಿಗಳನ್ನು ಕೊಲ್ಲಲಾಗಿದೆ. ಅಲ್ಲದೆ,  40 ಕ್ಕೂ ಹೆಚ್ಚು ಜನರನ್ನು ಸೆರೆಹಿಡಿಯಲಾಗಿದೆ ಎಂದು Northern Alliance ಟ್ವೀಟ್ ಮೂಲಕ ತಿಳಿಸಿದೆ. 

Written by - Ranjitha R K | Last Updated : Sep 1, 2021, 03:22 PM IST
  • 350 ತಾಲಿಬಾನ್ ಗಳನ್ನು ಹತ್ಯೆಗೈದಿರುವುದಾಗಿ ಹೇಳಿದ Northern Alliance
  • 40 ಕ್ಕೂ ಹೆಚ್ಚು ತಾಲಿಬಾನಿಗಳನ್ನು ಬಂಧಿಸಿರುವುದಾಗಿ ಹೇಳಿದ Northern Alliance
  • ಸಂಪೂರ್ಣವಾಗಿ ಅಫ್ಘಾನಿಸ್ತಾನ ತೊರೆದ ಅಮೆರಿಕನ್ ಸೇನೆ
ಅಫ್ಘಾನಿಸ್ತಾನದ ಪಂಜಶೀರ ಪ್ರಾಂತ್ಯಕ್ಕೆ ನುಗ್ಗಿದ ತಾಲಿಬಾನ್, 350 ತಾಲಿಬಾನಿಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿದ Northern Alliance  title=
350 ತಾಲಿಬಾನ್ ಗಳನ್ನು ಹತ್ಯೆಗೈದಿರುವುದಾಗಿ ಹೇಳಿದ Northern Alliance (photo zee news)

ಕಾಬೂಲ್ : ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ (Kabul) ಸೇರಿದಂತೆ ಬಹುತೇಕ ಎಲ್ಲಾ ಪ್ರಾಂತ್ಯಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಆದರೆ,  ಪಂಜಶೀರ್ ಪ್ರಾಂತ್ಯವು (Panjshir Province)  ತಾಲಿಬಾನಿಗಳಿಗೆ ಇನ್ನೂ ಸವಾಲಾಗಿ ಉಳಿದಿದೆ. ಈ ಮಧ್ಯೆ, ತಾಲಿಬಾನ್ (Taliban) ಅಫ್ಘಾನಿಸ್ತಾನದ ಪಂಜಶೀರ್  ಪ್ರಾಂತ್ಯವನ್ನು ಪ್ರವೇಶಿಸಿರುವುದಾಗಿ ಹೇಳಿಕೊಂಡಿದೆ. ಅಲ್ಲದೆ, ಶುತಾರ್ ಜಿಲ್ಲೆಯನ್ನು ವಶಪಡಿಸಿಕೊಂಡಿಸಿರುವುದಾಗಿಯೂ ಹೇಳಿದೆ. ಇದೇ ವೇಳೆ, ದೊಡ್ಡ ಸಂಖ್ಯೆಯಲ್ಲಿ ತಾಲಿಬಾನಿಗಳನ್ನು ಕೊಂದಿರುವುದಾಗಿ Northern Alliance ಹೇಳಿಕೊಂಡಿದೆ.

350 ತಾಲಿಬಾನಿಗಳ ಹತ್ಯೆ : 
ಈ ಬಗ್ಗೆ ಟ್ವೀಟ್ ಮಾಡಿರುವ Northern Alliance, 350 ತಾಲಿಬಾನಿಗಳು (Taliban) ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿಕೊಂಡಿದೆ. 'ನಿನ್ನೆ ರಾತ್ರಿ ಖವಾಕ್ ಪ್ರದೇಶದ ಮೇಲೆ ದಾಳಿ ಮಾಡಲು ಬಂದ 350 ತಾಲಿಬಾನಿಗಳನ್ನು ಕೊಲ್ಲಲಾಗಿದೆ. ಅಲ್ಲದೆ,  40 ಕ್ಕೂ ಹೆಚ್ಚು ಜನರನ್ನು ಸೆರೆಹಿಡಿಯಲಾಗಿದೆ ಎಂದು Northern Alliance ಟ್ವೀಟ್ (tweet) ಮೂಲಕ ತಿಳಿಸಿದೆ. 

ಇದನ್ನೂ ಓದಿ : ಇಂದು ಅಥವಾ ನಾಳೆ ಅಫ್ಘಾನಿಸ್ತಾನದಲ್ಲಿ ‘ತಾಲಿಬಾನ್ 2.0’ ಹೊಸ ಸರ್ಕಾರ..!

ಅಫ್ಘಾನಿಸ್ತಾನ ತೊರೆದ ಯುಎಸ್ ಪಡೆಗಳು :
ಯುಎಸ್ ಪಡೆಗಳು ಸೋಮವಾರ ರಾತ್ರಿ ಕಾಬೂಲ್‌ನಿಂದ ಹೊರ ನಡೆದಿವೆ. ಅಮೇರಿಕ ಸೇನೆ ಕಾಬೂಲ್ ಬಿಟ್ಟು ಹೋಗುತ್ತಿದ್ದಂತೆಯೇ, ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣವನ್ನು (Kabul airport) ವಶಪಡಿಸಿಕೊಂಡವು. ಆಗಸ್ಟ್ 31 ರ ರಾತ್ರಿ, ಅಮೇರಿಕ ಸೇನೆಯ ಕೊನೆಯ ಪಡೆ ಅಫ್ಘಾನಿಸ್ತಾನವನ್ನು ತೊರೆದಿದೆ.  ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿರುವ ಬಗ್ಗೆ ಅಧ್ಯಕ್ಷ ಜೋ ಬಿಡೆನ್ (Joe Biden) ಹೇಳಿಕೆ ನೀಡಿದ್ದಾರೆ. 20 ವರ್ಷಗಳ ಯುಎಸ್ ಮಿಲಿಟರಿ ಅಸ್ತಿತ್ವವು ಅಫ್ಘಾನಿಸ್ತಾನದಲ್ಲಿ ಕೊನೆಗೊಂಡಿದೆ ಎಂದು ಅವರು ಹೇಳಿದ್ದಾರೆ. 

ತಾಲಿಬಾನಿಗಳ ಸಂಭ್ರಮಾಚರಣೆ : 
ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಅಮೆರಿಕದ ಸೈನ್ಯವನ್ನು ಹಿಂತೆಗೆದುಕೊಂಡಿರುವುದನ್ನು,  ಅಫ್ಘಾನಿಸ್ತಾನದ ಸ್ವಾತಂತ್ರ್ಯದೊಂದಿಗೆ ಜೋಡಿಸಿದ್ದಾನೆ. ಇಂದು ದೇಶವು ಸಂಪೂರ್ಣವಾಗಿ ಸ್ವತಂತ್ರವಾಯಿತು ಎಂದು ಹೇಳಿದ್ದಾರೆ.  ಕಾಬೂಲ್ ವಿಮಾನ ನಿಲ್ದಾಣವನ್ನು ತಾಲಿಬಾನ್ ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ ಸಂಭ್ರಮಾಚರಣೆ (Taliban celebration) ನಡೆಸಿದ್ದಾರೆ.   ಗಾಳಿಯಲ್ಲಿ ಗುಂಡು ಹಾರಿಸಿ, ರಾಕೆಟ್ ಗಳನ್ನು ಸಿಡಿಸಿ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : Taliban On Kashmir: ಕಾಶ್ಮೀರದ ಕುರಿತು ತಾಲಿಬಾನ್ ಹೇಳಿಕೆ, ಪಾಕಿಸ್ತಾನಕ್ಕೆ ದೊಡ್ಡ ಹೊಡೆತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News