ನವದೆಹಲಿ: ಕುದುರೆ ಸವಾರಿ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಆಸ್ಟ್ರೇಲಿಯದ ಮಾಡೆಲ್ ಸಿಯೆನ್ನಾ ವೀರ್ (23) ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ. ಏಪ್ರಿಲ್ 2ರಂದು ಸಿಯೆನ್ನಾ ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಮೈದಾನದಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.


COMMERCIAL BREAK
SCROLL TO CONTINUE READING

ಕೂಡಲೇ ಸಿಯೆನ್ನಾರನ್ನು ಚಿಕಿತ್ಸೆಗಾಗಿ ವೆಸ್ಟ್‌ಮೀಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕುದುರೆ ಮೇಲಿಂದ ಬಿದ್ದಿದ್ದ ಅವರಿಗೆ ತೀವ್ರವಾದ ಗಾಯಗಳಾಗಿದ್ದವು. ಹೀಗಾಗಿ ಅವರನ್ನು ವೆಂಟಿಲೇಟರ್‍ನಲ್ಲಿಟ್ಟು ಹಲವು ವಾರಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.


ಇದನ್ನೂ ಓದಿ: Donald Trump: ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಬ್ಬ ಮಹಿಳೆಯಿಂದ ಲೈಂಗಿಕ ಕಿರುಕುಳ!


ಹಲವು ದಿನಗಳಿಂದ ಯಾವುದೇ ಚೇತರಿಕೆ ಕಾಣದ ಹಿನ್ನೆಲೆ ಅವರ ಕುಟುಂಬಸ್ಥರು ಆಕೆಗೆ ಅಳವಡಿಸಿದ್ದ ಕೃತಕ ಉಸಿರಾಟದ ನೆರವನ್ನು ತೆಗೆಯಲು ಹೇಳಿದ್ದಾರೆಂದು ವರದಿಯಾಗಿದೆ. ಕುದುರೆ ಸವಾರಿಯನ್ನು ನೆಚ್ಚಿನ ಹವ್ಯಾಸವನ್ನಾಗಿ ಮಾಡಿಕೊಂಡಿದ್ದ ಸಿಯೆನ್ನಾ, ‘ಕುದುರೆ ಸವಾರಿ ಬಗ್ಗೆ ನನಗೆ ತುಂಬಾ ಪ್ರೀತಿ. ನಾನು 3 ವರ್ಷ ವಯಸ್ಸಿನಿಂದಲೂ ಕುದುರೆ ಸವಾರಿ ಮಾಡುತ್ತಿದ್ದೇನೆ. ಅದು ಇಲ್ಲದೆ ನನ್ನ ಜೀವನವನ್ನು ಊಹಿಸಲು ಸಾಧ್ಯವಿಲ್ಲ’ವೆಂದು ಹೇಳಿಕೊಂಡಿದ್ದರು.



ಆಸ್ಟ್ರೇಲಿಯಾದಲ್ಲಿ ತರಬೇತಿ ನೀಡಲು ಮತ್ತು ಸ್ಪರ್ಧಿಸಲು ನಾನು ವಾರಕ್ಕೆ 2-3 ಬಾರಿ ಸಿಡ್ನಿಗೆ ಪ್ರಯಾಣಿಸುತ್ತೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಕುದುರೆ ಸವಾರಿ ಬಗ್ಗೆ ಹೆಚ್ಚಿನ ವ್ಯಾಮೋಹ ಹೊಂದಿದ್ದ ಸಿಯೆನ್ನಾ ಇದೀಗ ಕೇವಲ 23ನೇ ವಯಸ್ಸಿಗೆ ದುರಂತ ಅಂತ್ಯ ಕಂಡಿದ್ದಾರೆ.


ಇದನ್ನೂ ಓದಿ: Good News! ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ಹೊರಹೋದ ಕೋವಿಡ್ - 19, ಡಬ್ಲ್ಯೂಎಚ್ಓ ಘೋಷಣೆ


2022ರ ಮಿಸ್ ಯೂನಿವರ್ಸ್ ಫೈನಲಿಸ್ಟ್ ಮತ್ತು  ಆಸ್ಟ್ರೇಲಿಯಾದ ಫ್ಯಾಷನ್  ಲೋಕದ ಐಕಾನ್ ಎಂದೇ ಖ್ಯಾತಿ ಹೊಂದಿದ್ದ ಸುಂದರಿ ಸಿಯೆನ್ನಾ ವೀರ್ ದುರಂತ ಸಾವಿಗೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಸಿಯೆನ್ನಾರ ಮಾಡೆಲಿಂಗ್ ಏಜೆನ್ಸಿ ಸ್ಕೂಪ್ ಮ್ಯಾನೇಜ್‌ಮೆಂಟ್ ದುಃಖ ವ್ಯಕ್ತಪಡಿಸಿದ್ದು, Instagramನಲ್ಲಿ ಅವರ ಹಲವಾರು ಫೋಟೋಗಳನ್ನು ಹಂಚಿಕೊಂಡಿದೆ. ‘ನಮ್ಮ ಹೃದಯದಲ್ಲಿ ಎಂದೆಂದಿಗೂ ನೀನು ಶಾಶ್ವತ’ ಅಂತಾ ಕ್ಯಾಪ್ಶನ್ ನೀಡಿ ಸಂತಾಪ ವ್ಯಕ್ತಪಡಿಸಿದೆ. ಸಿಯೆನ್ನಾ ಸಿಡ್ನಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಮನೋವಿಜ್ಞಾನದಲ್ಲಿ ಡಬಲ್ ಪದವಿ ಪಡೆದುಕೊಂಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.