Donald Trump: ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಬ್ಬ ಮಹಿಳೆಯಿಂದ ಲೈಂಗಿಕ ಕಿರುಕುಳ!

Sexual Harassment Case: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡೊನಾಲ್ಡ್​ ಟ್ರಂಪ್​ ನನ್ನ ಮೇಲೆ ಬಿದ್ದು ಬಲವಂತವಾಗಿ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು ಎಂದು ಜೆಸ್ಸಿಕಾ ಆರೋಪಿಸಿದ್ದಾರೆ.

Written by - Puttaraj K Alur | Last Updated : May 3, 2023, 04:18 PM IST
  • ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಬ್ಬ ಮಹಿಳೆಯಿಂದ ಲೈಂಗಿಕ ಕಿರುಕುಳ ಆರೋಪ
  • ಟ್ರಂಪ್​ ನನ್ನ ಮೇಲೆ ಬಿದ್ದು ಬಲವಂತವಾಗಿ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು
  • ವಿಮಾನದಲ್ಲಿ ಟ್ರಂಪ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರೆಂದ ಜೆಸ್ಸಿಕಾ ಲೀಡ್ಸ್
Donald Trump: ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಬ್ಬ ಮಹಿಳೆಯಿಂದ ಲೈಂಗಿಕ ಕಿರುಕುಳ!  title=
ಟ್ರಂಪ್ ವಿರುದ್ಧ ಮತ್ತೊಂದು ಲೈಂಗಿಕ ಕಿರುಕುಳ ಆರೋಪ

ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮತ್ತೊಬ್ಬ ಮಹಿಳೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. 1979ರಲ್ಲಿ ಟ್ರಂಪ್ ವಿಮಾನದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರೆಂದು 81 ವರ್ಷದ ಜೆಸ್ಸಿಕಾ ಲೀಡ್ಸ್ ನ್ಯೂಯಾರ್ಕ್‌ನ ನ್ಯಾಯಾಧೀಶರ ಮುಂದೆ ಸಾಕ್ಷ್ಯ ಹೇಳಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡೊನಾಲ್ಡ್​ ಟ್ರಂಪ್​ ನನ್ನ ಮೇಲೆ ಬಿದ್ದು ಬಲವಂತವಾಗಿ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು ಎಂದು ಜೆಸ್ಸಿಕಾ ಆರೋಪಿಸಿದ್ದಾರೆ. ನ್ಯೂಯಾರ್ಕ್​ ಸಿಟಿಯಲ್ಲಿ ಫಸ್ಟ್​ ಕ್ಲಾಸ್​ನಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದಾಗ ಟ್ರಂಪ್ ತನ್ನ ಸ್ಕರ್ಟ್​ ಮೇಲೆ ಕೈಯಾಡಿಸಿದ್ದರು. ಬಳಿಕ ನನ್ನನ್ನು ಚುಂಬಿಸಲು ಪ್ರಯತ್ನಿಸಿದ್ದರು. ಆಗ ನಾನು ತಪ್ಪಿಸಿಕೊಂಡು ವಿಮಾನದ ಹಿಂಭಾಗಕ್ಕೆ ಓಡಿದ್ದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Us shoot news: ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ.. 5 ಜನರ ಹತ್ಯೆ

ನ್ಯೂಯಾರ್ಕ್​ನ ಲಾಗಾರ್ಡಿಯಾ ಏರ್​ಪೋರ್ಟ್​ಗೆ ಬ್ರಾನಿಫ್ ಏರ್​ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆಗ ಇಬ್ಬರೂ ಅಕ್ಕಪಕ್ಕ ಕುಳಿತುಕೊಂಡಿದ್ದೇವು. ಟ್ರಂಪ್ ಆಗ ತಾನು ರಿಯಲ್ ಎಸ್ಟೇಟ್ ಡೆವಲಪರ್ ​ಎಂದು ತಮ್ಮನ್ನು ಪರಿಚಯಿಸಿಕೊಂಡಿದ್ದರು.

ನನ್ನ ಮತ್ತು ಟ್ರಂಪ್ ಬಳಿ ಯಾವುದೇ ಮಾತುಕತೆ ಇರಲಿಲ್ಲ. ಆದರೆ ಅವರು ನನ್ನನ್ನು ತಮ್ಮತ್ತ ಸೆಳೆದು ಚುಂಬಿಸಲು ಪ್ರಯತ್ನಿಸಿದರು. ಆಗ ದೂರು ನೀಡಿದರೂ ಪ್ರಯೋಜನವಾಗುತ್ತಿರಲಿಲ್ಲ. ಹೀಗಾಗಿ ನಾನು ಯಾರಿಗೂ ಹೇಳದೆ ಮೌನವಾಗಿದ್ದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Pakistan: 76 ಶಾಲೆಗಳು ಪಾಕಿಸ್ತಾನಿ ಸೇನಾ ವಶಕ್ಕೆ.. ಮಿಲಿಟರಿ ಪೋಸ್ಟ್‌ಗಳನ್ನಾಗಿ ಮಾಡಿದ ಪಾಕ್‌ ಆರ್ಮಿ!

ಈ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ಮತ್ತೊಬ್ಬ ಮಹಿಳೆಯೂ ಸಾಕ್ಷಿ ಹೇಳುವ ಸಾಧ್ಯತೆ ಇದೆ. ಮಹಿಳೆಯರು ತಮ್ಮ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಮತ್ತು ಲೈಂಗಿಕ ದುರ್ನಡತೆಯ ಆರೋಪಗಳನ್ನು ಟ್ರಂಪ್ ನಿರಾಕರಿಸಿದ್ದಾರೆ. ಈ ಆರೋಪ ರಾಜಕೀಯ ಪ್ರೇರಿತವಾಗಿದ್ದು, ತನ್ನ ಇಮೇಜ್‌ಗೆ ಕಳಂಕ ತರುವ ಸಂಚಿದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News