ನವದೆಹಲಿ : ದಂಪತಿಯ ಡ್ಯಾನ್ಸ್ ವಿಡಿಯೋಗಳು (Couple Dance Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ಆಗಾಗ ವೈರಲ್ ಆಗುತ್ತಿರುತ್ತವೆ. ಇದರಲ್ಲಿ, ದಂಪತಿಯ ಕೆಮೆಸ್ಟ್ರಿ, ಬ್ಯಾಲೆನ್ಸ್, ಪ್ರೀತಿ ಎಲ್ಲವೂ ಕಾಣಸಿಗುತ್ತದೆ. ಪ್ರತಿಯೊಬ್ಬರೂ ಪ್ರತಿಯೊಂದು ವಿಷಯದಲ್ಲೂ 100 ಪ್ರತಿಶತ ಪರಿಪೂರ್ಣರಾಗಿರಲು ಸಾಧ್ಯವಿಲ್ಲ. ನೃತ್ಯದ ವಿಷಯದಲ್ಲೂ ಹಾಗೆಯೇ. ಇನ್ನು ಕೆಲವರಿಗೆ ಎಷ್ಟೇ ಚೆನ್ನಾಗಿ ಡಾನ್ಸ್ ಬರುತ್ತಿದ್ದರೂ ಅಲ್ಲಿ ಆಗುವ ಸಣ್ಣ ತಪ್ಪು, ಎಲ್ಲವನ್ನೂ ಎಡವಟ್ಟು ಮಾಡಿಬಿಡುತ್ತದೆ.  ಈ ಜೋಡಿ ಜೊತೆ ನಡೆದದ್ದು ಕೂಡಾ ಇದೇ.. 


COMMERCIAL BREAK
SCROLL TO CONTINUE READING

ಮೋಜಿನೊಂದಿಗೆ ದಂಪತಿಗಳ ಪ್ರವೇಶ :
ಸಾಮಾಜಿಕ ಮಾಧ್ಯಮ ಸೈಟ್ ಇನ್‌ಸ್ಟಾಗ್ರಾಮ್‌ನಲ್ಲಿ (Instagram)ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ (Viral Video) ಜೋಡಿಯೊಂದು ಬಹಳ ಉತ್ಸಾಹದಿಂದ ಕಾರ್ಯಕ್ರಮದ ವೇದಿಕೆಗೆ ನಗುತ್ತಾ, ಕುಣಿಯುತ್ತಾ ಎಂಟ್ರಿ ನೀಡುತ್ತದೆ. ಇಬ್ಬರು ಬಹಳ ಸಂತೋಷದಿಂದಲೇ ಡಾನ್ಸ್ ಮಾಡುತ್ತಾ (Couple Dance Video) ಇರುತ್ತಾರೆ. ಇಬ್ಬರ ಕೆಮೆಸ್ಟ್ರಿ ಕೂಡಾ ನೆರೆದಿದ್ದವರ ಮನ ಗೆಲ್ಲುತ್ತದೆ. ಆದರೆ ಇದ್ದಕ್ಕಿದ್ದಂತೆ ನಡೆದದ್ದು ಮಾತ್ರ....


 

 

 

 



 

 

 

 

 

 

 

 

 

 

 

A post shared by hepgul5 (@hepgul5)


 


ಇದನ್ನೂ ಓದಿ:Viral Video: ಪೊದೆಯಿಂದ ಜಿಗಿದ ಹಾವು; ಮಹಿಳೆಗೆ ಏನಾಯ್ತು ನೋಡಿ..!


ಹುಡುಗನ ಬೆನ್ನೆರಿದ ಯುವತಿ : 
ನೃತ್ಯ ಮಾಡುವ ಜೋಡಿ ಉತ್ಸಾಹ ಎಷ್ಟು ಇತ್ತು ಎನ್ನುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಹುಡುಗಿ, ಡ್ಯಾನ್ಸ್ ಮಾಡುತ್ತಲೇ, ಹುಡುಗನ ಬೆನ್ನಿನ ಮೇಲೆ ಏರುತ್ತಾಳೆ (Girl Dance Step). ಇಲ್ಲಿ ಹುಡುಗನ ಬ್ಯಾಲೆನ್ಸ್ ತಪ್ಪುತ್ತದೆ.  ಇಬ್ಬರೂ ಬಿದ್ದು ಬಿಡುತ್ತಾರೆ. ಆದ್ರೆ ಬಿದ್ದ ನಂತರವೂ ಮತ್ತೆ ಎದ್ದು ಇಬ್ಬರೂ ಕುಣಿಯುವುದಕ್ಕೆ ಆರಂಭಿಸುತ್ತಾರೆ. 


ಈ ವೈರಲ್ ಡ್ಯಾನ್ಸ್ ವಿಡಿಯೋವನ್ನು (Dance video) ಇದುವರೆಗೆ 94 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ದಂಪತಿ ಸ್ಥಿತಿಯನ್ನು ನೋಡಿದ ನಂತರ ಎಲ್ಲರೂ ಕಾಮೆಂಟ್ ಬಾಕ್ಸ್‌ನಲ್ಲಿ ತಮಾಷೆಯ ಎಮೋಜಿಯನ್ನು ಹಂಚಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: Viral Video: ಗರ್ಲ್ ಫ್ರೆಂಡ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು ನೀವೇ ನೋಡಿ...


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.