ನವದೆಹಲಿ: ಜಗತ್ತಿನೆಲ್ಲೆಡೆ ಕೊರೊನಾ ಪ್ರಕರಣಗಳು ಇನ್ನೇನು ಇಳಿಕೆಯಾಗುತ್ತಿರುವ ಸಂದರ್ಭದಲ್ಲಿಯೇ ಈ ಮಾಹಾಮಾರಿ ಇನ್ನೂ ಮುಗಿದಿಲ್ಲ ಅದು ರೂಪಾಂತರಗೊಳ್ಳುತ್ತಿದೆ ಸುಮಾರು 110 ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.ಈ ಹೆಚ್ಚಳಕ್ಕೆ ಮುಖ್ಯವಾಗಿ ಓಮಿಕ್ರಾನ್ ನ ಎರಡು ಉಪ-ರೂಪಾಂತರಗಳು ಕಾರಣ ಎಂದು ಅದು ಹೇಳಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿಷಕಾರಿ ಅನಿಲ ಸೋರಿಕೆ: 13 ಮಂದಿ ದುರ್ಮರಣ.. ನೂರಾರು ಜನರಿಗೆ ಗಾಯ


ಅಮೆರಿಕಾದಲ್ಲಿ BA.4 ಮತ್ತು BA.5 ರೂಪಾಂತರಗಳು ಅರ್ಧದಷ್ಟು ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅದು ಹೇಳಿದೆ. ಜೂನ್ 25 ಕ್ಕೆ ಒಟ್ಟು ಕೊರೊನಾವೈರಸ್ ಪ್ರಕರಣಗಳಲ್ಲಿ BA.5 ಶೇಕಡಾ 36.6 ರಷ್ಟಿದ್ದರೆ, BA.4 ಶೇಕಡಾ 15.7 ರಷ್ಟಿದೆ, ಒಟ್ಟಾರೆಯಾಗಿ ಅಮೇರಿಕಾದಲ್ಲಿ ಸುಮಾರು ಶೇ 52 ರಷ್ಟು ಹೊಸ ಪ್ರಕರಣಗಳನ್ನು ಹೊಂದಿದೆ.


ಇದನ್ನೂ ಓದಿ : FIR Against BJP leader: ಬಿಜೆಪಿ ಮುಖಂಡನ ವಿರುದ್ದ ಎಫ್‌ಐಆರ್‌ ದಾಖಲು


“ಸಾಂಕ್ರಾಮಿಕ ರೋಗವು ರೂಪಾಂತರಗೊಳ್ಳುತ್ತಿದೆ, ಇದ್ದಿದ್ದರಲ್ಲಿ ನಾವು ಅಲ್ಪಮಟ್ಟಿಗೆ ಪ್ರಗತಿ ಸಾಧಿಸಿದ್ದೇವೆ, ಆದರೆ ಅದು ಇನ್ನೂ ಕೂಡ ಕಡಿಮೆಯಾಗಿಲ್ಲ, ಇನ್ನೊಂದೆಡೆಗೆ ಜೀನೋಮಿಕ್ ಅನುಕ್ರಮಗಳು ಕ್ಷೀಣಿಸುತ್ತಿರುವುದರಿಂದ ವೈರಸ್ ಅನ್ನು ಪತ್ತೆಹಚ್ಚುವ ಸಾಮರ್ಥ್ಯವು ಈಗ ಅಪಾಯದಲ್ಲಿದೆ' ಎಂದು ಘೆಬ್ರೆಯೆಸಸ್ ಹೇಳಿದ್ದಾರೆ.


ಮೇಲಾಗಿ ಕಡಿಮೆ ಆದಾಯವನ್ನು ಹೊಂದಿರುವ ದೇಶಗಳಲ್ಲಿ ನಿಧಾನಗತಿಯಲ್ಲಿ ಲಸಿಕೆ ಕಾರ್ಯಕ್ರಮ ನಡೆಯುತ್ತಿರುವುದರಿಂದ ಈ ದೇಶಗಳಲ್ಲಿ ಈಗ ವೈರಸ್ ಹೆಚ್ಚಳದಿಂದಾಗಿ ಅಪಾಯದ ಭೀತಿ ಎದುರಾಗಿದೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.