ಜೋರ್ಡಾನ್‌ನ ಅಕಾಬಾ ಬಂದರಿನಲ್ಲಿ ವಿಷಕಾರಿ ಅನಿಲ ಸೋರಿಕೆಯು 13 ಜನರನ್ನು ಬಲಿ ತೆಗೆದುಕೊಂಡಿದೆ. ಅಲ್ಲದೇ ಸುಮಾರು 251 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿಷಕಾರಿ ಅನಿಲವು ಮನೆಗಳಿಗೆ ಪ್ರವೇಶಿಸುವುದನ್ನು ತಡೆಯಲು ಹತ್ತಿರದ ಪ್ರದೇಶಗಳಲ್ಲಿ ವಾಸಿಸುವ ಜನರು ಮನೆಯೊಳಗೆ ಇರಲು ಮತ್ತು ಎಲ್ಲಾ ಕಿಟಕಿಗಳನ್ನು ಮುಚ್ಚಲು ಅಧಿಕಾರಿಗಳು ಕೇಳಿಕೊಂಡಿದ್ದಾರೆ ಎಂದು ರಾಜ್ಯ ದೂರದರ್ಶನ ವರದಿ ಮಾಡಿದೆ.
ಇದನ್ನೂ ಓದಿ: Birmingham explosion: ಬರ್ಮಿಂಗ್ಹ್ಯಾಮ್ನಲ್ಲಿ ಭಾರೀ ಸ್ಫೋಟ
ಸರ್ಕಾರಿ ವಕ್ತಾರರಾದ ಫೈಸಲ್ ಅಲ್-ಶಾಬೌಲ್, ಆರಂಭದಲ್ಲಿ ಐದು ಜನರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಬಳಿಕ ಈ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸುದ್ದಿ ಸಂಸ್ಥೆ ಪೆಟ್ರಾ ಸಾರ್ವಜನಿಕ ಭದ್ರತಾ ನಿರ್ದೇಶನಾಲಯದ ವಕ್ತಾರರನ್ನು ಉಲ್ಲೇಖಿಸಿ, ವಿಷಕಾರಿ ಅನಿಲ ತುಂಬಿದ ಟ್ಯಾಂಕ್ ಸೋರಿಕೆಯಾಗಿದೆ ಎಂದು ಹೇಳಿದರು.
ಪ್ರಕಾಶಮಾನವಾದ ಹಳದಿ ಅನಿಲದ ದೊಡ್ಡ ಮೋಡವು ನೆಲದಾದ್ಯಂತ ಹರಡಿರುವುದನ್ನು ಈ ಸ್ಫೋಟದ ವಿಡಿಯೋದಲ್ಲಿ ಕಾಣಬಹುದು. ವಿಷಕಾರಿ ಅನಿಲ ಸೋರಿಕೆಯಾಗುತ್ತಿದ್ದಂತೆ ಸುತ್ತಲಿದ್ದ ಜನರು ಸುರಕ್ಷತೆಗಾಗಿ ಓಡಿ ಹೋಗುತ್ತಿರುವುದನ್ನು ಸಹ ಕಾಣಬಹುದು. ಗಾಯಾಳುಗಳು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಮಾಧ್ಯಮ ತಿಳಿಸಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಕ್ಲೋರಿನ್ ಎಂಬುದು ಉದ್ಯಮದಲ್ಲಿ ಮತ್ತು ಮನೆಯ ಶುಚಿಗೊಳಿಸುವ ಉತ್ಪನ್ನಗಳಲ್ಲಿ ಬಳಸಲಾಗುವ ರಾಸಾಯನಿಕವಾಗಿದೆ. ಇದು ಸಾಮಾನ್ಯ ತಾಪಮಾನ ಮತ್ತು ಒತ್ತಡದಲ್ಲಿ ಹಳದಿ-ಹಸಿರು ಅನಿಲವಾಗಿದೆ. ಕ್ರೇನ್ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದರಿಂದ ಕ್ಲೋರಿನ್ ರಾಸಾಯನಿಕ ತುಂಬಿದ ಟ್ಯಾಂಕ್ಗಳನ್ನು ಸಾಗಿಸುವಾಗ ಶೇಖರಣಾ ಕಂಟೇನರ್ ಕೆಳಗೆ ಬಿದ್ದಿದೆ. ಇದರಿಂದಾಗಿ ವಿಷಕಾರಿ ಅನಿಲ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹಸುಗಳಿಗಾಗಿ ಬಾಲ್ಯ ವಿವಾಹ! ಇಲ್ಲಿ ವಧು ದಕ್ಷಿಣೆ ರೂಪದಲ್ಲಿ ಸಿಗುತ್ತೆ ಹಸುಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.