Israel-Hamas War Death Rate: "ಇಸ್ರೇಲ್ ದಾಳಿಯಿಂದ ಸತ್ತವರ ಸಂಖ್ಯೆ 8,000 ಮೀರಿದೆ. ಅವರಲ್ಲಿ ಅರ್ಧದಷ್ಟು ಮಕ್ಕಳು" ಎಂದು ಹಮಾಸ್ ಆರೋಗ್ಯ ಸಚಿವಾಲಯ ಹೇಳಿದೆ. ಶನಿವಾರ ಮುಂಜಾನೆ ಬಿಡುಗಡೆಯಾದ ಕೊನೆಯ ಎಣಿಕೆಯಲ್ಲಿ 7,703 ಸಾವುಗಳು ಸಂಭವಿಸಿವೆ.


COMMERCIAL BREAK
SCROLL TO CONTINUE READING

ಇದೆಲ್ಲದರ ಮಧ್ಯ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವು ಶನಿವಾರ ಹೊಸ ಹಂತವನ್ನು ತಲುಪಿದೆ. ಇಸ್ರೇಲ್ ಗಾಜಾ ಪಟ್ಟಿಯೊಂದಿಗಿನ ಎಲ್ಲಾ ಸಂವಹನಗಳನ್ನು ಕಡಿತಗೊಳಿಸಿ, ತನ್ನ ಬಾಂಬ್ ದಾಳಿಯನ್ನು ಮುಂದುವರೆಸಿದೆ. ಸದ್ಯ ಭೂದಾಳಿಯನ್ನು ವಿಸ್ತರಿಸುವುದಾಗಿ ತಿಳಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯುದ್ಧವು ಇಸ್ರೇಲ್ ಅಸ್ತಿತ್ವಕ್ಕಾಗಿ ನಡೆಯುವ ಯುದ್ಧವಾಗಿದ್ದು, ಸದ್ಯಕ್ಕೆ ಕದನ ವಿರಾಮ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.‌


ಇದನ್ನೂ ಓದಿ-ಗಾಜಾದಲ್ಲಿ ಪತ್ರಕರ್ತರಿಗೆ ಸುರಕ್ಷತೆಯ ಭರವಸೆ ಇಲ್ಲ! ಇಸ್ರೇಲ್ ಸೇನೆಯ ಘೋಷಣೆ


ಯುದ್ಧದಲ್ಲಿ ಹಮಾಸ್‌ನ ಭಯೋತ್ಪಾದಕ ಆಡಳಿತವನ್ನು ಸೋಲಿಸುತ್ತೇವೆ ಮತ್ತು ಸುಮಾರು 230 ಒತ್ತೆಯಾಳುಗಳನ್ನು ರಕ್ಷಿಸುತ್ತೇವೆ ಎಂದು ಇಸ್ರೇಲ್ ಸೇನೆಯು ದೇಶದ ಜನರಿಗೆ ಭರವಸೆ ನೀಡಿದೆ. ಅದರಂತೆ, ಗಾಜಾ ಪಟ್ಟಿಯನ್ನು ಸುತ್ತುವರಿದ ಸೇನೆಯು ವೈಮಾನಿಕ ದಾಳಿ ಮತ್ತು ನೆಲದ ದಾಳಿಯನ್ನು ತೀವ್ರಗೊಳಿಸಿದೆ.


ಗಾಜಾದಲ್ಲಿ ಇಂಟರ್ನೆಟ್ ಮತ್ತು ಟೆಲಿಫೋನ್ ಸೇರಿದಂತೆ ದೂರಸಂಪರ್ಕ ಸೇವೆಗಳ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಬಿಲಿಯನೇರ್ ಎಲೋನ್ ಮಸ್ಕ್ ಅವರು ತಮ್ಮ ಸ್ಟಾರ್ ಲಿಂಕ್ ಕಂಪನಿಯ ಮೂಲಕ ಗಾಜಾದಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸಲು ಸಿದ್ಧ ಎಂದಿದ್ದು, ಈ ಹೇಳಿಕೆಯನ್ನು ಇಸ್ರೇಲ್ ತೀವ್ರವಾಗಿ ಖಂಡಿಸಿದೆ. ಇದರ ತರುವಾಯ, ಪ್ಯಾಲೇಸ್ಟಿನಿಯನ್ ಸರ್ಕಾರವು ಗಾಜಾದಲ್ಲಿ ಇಂಟರ್ನೆಟ್ ಸೇವೆಯನ್ನು ಪುನಃಸ್ಥಾಪಿಸಲಾಗಿದೆ ಎಂದು ವರದಿ ಮಾಡಿದೆ. 


ಇದನ್ನೂ ಓದಿ-Photos: ಭಾರತದ ರೈಲುಗಳಿಗೆ ಹೋಲಿಸಿದರೆ ಪಾಕಿಸ್ತಾನದ ರೈಲುಗಳ ಸ್ಥಿತಿ ಹೇಗಿದೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.