ವಾಷಿಂಗ್ಟನ್: ಅಮೆರಿಕಾದ ವಾಷಿಂಗ್ಟನ್ನ ಟಕೋಮಾ ಪಟ್ಟಣದ ಬಳಿ ವೇಗವಾದ ಆಮ್ಟ್ರಾಕ್ ರೈಲು(ಹೈ ಸ್ಪೀಡ್ ರೈಲು) ಹಳಿತಪ್ಪಿ ಅಪಘಾತಕ್ಕಿಡಾಗಿದೆ. ರೈಲು ಹಳಿತಪ್ಪಿದ ಕಾರಣ ಕೆಲವು ಬೋಗಿಗಳು ಸೇತುವೆಯ ಕೆಳಗುರುಳಿದವು. ಈ ಸಮಯದಲ್ಲಿ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕೆಲವು ವಾಹನಗಳ ಮೇಲೆ ಬೋಗಿಗಳು ಉರುಳಿದ ಕಾರಣ ಕಾರುಗಳು ಜಖಂ ಗೊಂಡಿವೆ. ಮಾಹಿತಿಯ ಪ್ರಕಾರ, ಅಪಘಾತದ ಸಮಯದಲ್ಲಿ ರೈಲು ವೇಗವು 129 ಕಿಮೀ ಪ್ರತಿ ಗಂಟೆಗೆ. ಸುಮಾರು 13 ಕಾರುಗಳು ಕೂಡ ಅಪಘಾತದಲ್ಲಿ ತೊಂದರೆಗೀಡಾಗಿದೆ ಎಂದು ತಿಳಿದು ಬಂದಿದೆ.



COMMERCIAL BREAK
SCROLL TO CONTINUE READING

ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಯಾಣಿಕ ರೈಲನ್ನು ಯುಎಸ್ ನ್ಯಾಶನಲ್ ರೈಲ್ರೋಡ್ ಪ್ಯಾಸೆಂಜರ್ ಕಾರ್ಪೋರೇಷನ್ ನಿರ್ವಹಿಸುತ್ತದೆ. ಸಿಯಾಟಲ್ ಮತ್ತು ಪೋರ್ಟ್ಲ್ಯಾಂಡ್, ಒರೆಗಾನ್ಗಳನ್ನು ಸಂಪರ್ಕಿಸುವ ಮಾರ್ಗದಲ್ಲಿ ಚಲಿಸುವ ಈ ರೈಲು ಹೊಸ ಹೈ ಸ್ಪೀಡ್ ರೈಲು ಸೇವೆಯ ಭಾಗವಾಗಿದೆ. ರೈಲು ದುರ್ಘಟನೆಗೀಡಾದ ಸಂದರ್ಭದಲ್ಲಿ ರೈಲಿನಲ್ಲಿ 78 ಪ್ರಯಾಣಿಕರು ಮತ್ತು ಐದು ಸಿಬ್ಬಂದಿ ಇದ್ದರು ಎಂದು ತಿಳಿದುಬಂದಿದೆ.


ಅಪಘಾತದ ನಿಖರವಾದ ಕಾರಣವನ್ನು ಕಂಡುಹಿಡಿಯಲಾಗಲಿಲ್ಲ. ಎಪಿ ಅಧಿಕಾರಿಗಳು, ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿದ್ದ ಜನರು ಡುಪೋಂಟ್ ಬಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.