ನವದೆಹಲಿ: ಜಾಗತಿಕ ಕರೋನಾ ವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್‌ನಿಂದ ಇಡೀ ಜಗತ್ತೆ ತಲ್ಲಣಗೊಂಡಿರುವ ಈ ಸಮಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈಗ ಮತ್ತೊಂದು ಆಘಾತಕಾರಿ ಭವಿಷ್ಯವನ್ನು ನುಡಿದಿದೆ.


COMMERCIAL BREAK
SCROLL TO CONTINUE READING

ಓಮಿಕ್ರಾನ್ ನಂತರದಲ್ಲಿ ಇನ್ನೊಂದು ರೂಪಾಂತರಿ ವೈರಸ್ ಬರುವುದರ ಬಗ್ಗೆ ಊಹೆ ಮಾಡಿರುವ ವಿಜ್ಞಾನಿಗಳು ಕರೋನಾ ವೈರಸ್‌ನ ಇತ್ತೀಚಿನ ರೂಪಾಂತರವಾದ ಓಮಿಕ್ರಾನ್‌ಗಿಂತ ಅದು ಅತ್ಯಂತ ಸಾಂಕ್ರಾಮಿಕ ಮತ್ತು ವೇಗವಾಗಿ ಹರಡುವ ತಳಿಯಾಗಿರುತ್ತದೆ ಎಂದಿದ್ದಾರೆ.


ಇದನ್ನೂ ಓದಿ: Mega Constellation Project: ಬಾಹ್ಯಾಕಾಶಕ್ಕೆ 13 ಸಾವಿರ Satellite ಗಳನ್ನು ಕಳುಹಿಸಲು ಮುಂದಾದ ಡ್ರ್ಯಾಗನ್, ಬೆಚ್ಚಿಬಿದ್ದ ಜಗತ್ತು


ವಿಶ್ವ ಆರೋಗ್ಯ ಸಂಸ್ಥೆ (WHO) ಕರೋನದ ಹೊಸ ರೂಪಾಂತರವು ಓಮಿಕ್ರಾನ್‌ಗಿಂತ ಹೆಚ್ಚು ಸಾಂಕ್ರಾಮಿಕವಾಗಿರಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.ಯಾವುದೇ ರೀತಿಯ ಕೋವಿಡ್ ಸುರಕ್ಷತಾ ನಿಯಮಗಳನ್ನು ಸಡಿಲಿಸಬೇಡಿ ಎಂದು WHO ಮನವಿ ಮಾಡಿದೆ, ಕರೋನಾದ ಮುಂದಿನ ರೂಪಾಂತರವು ಓಮಿಕ್ರಾನ್‌ಗಿಂತ ಹೆಚ್ಚು ಸಾಂಕ್ರಾಮಿಕವಾಗಿರಬಹುದು ಎಂದು ಹೇಳಿದೆ.ಭವಿಷ್ಯದ ರೂಪಾಂತರಗಳು ಕಡಿಮೆ ಮಾರಕವಾಗುತ್ತವೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂಬ ಆತಂಕವನ್ನು ವ್ಯಕ್ತಪಡಿಸಿದೆ.


ಇದನ್ನೂ ಓದಿ: One Cut Two Cut Trailer Out Now : ಡ್ಯಾನಿಶ್ ಸೇಟ್ ಅಭಿನಯದ ಕನ್ನಡ ಕಾಮಿಡಿ-ಸಾಹಸ


WHOದ ಕರೋನವೈರಸ್‌‌ನ ತಾಂತ್ರಿಕ ಮುಖ್ಯಸ್ಥರಾಗಿರುವ ಮಾರಿಯಾ ವ್ಯಾನ್ ಕೆರ್ಖೋವ್, ಮುಂದಿನ ರೂಪಾಂತರಿ ತಳಿ ಹೆಚ್ಚು ಮಾರಣಾಂತಿಕವಾಗಿದೆಯೇ ಎಂಬ ನಿಜವಾದ ಪ್ರಶ್ನೆಗೆ ವಿಜ್ಞಾನಿಗಳು ಸಂಶೋಧನೆಗಳ ಮೂಲಕ ಉತ್ತರಿಸಬೇಕಾಗಿದೆ ಎಂದು ಹೇಳಿದರು. ಓಮಿಕ್ರಾನ್ ವೈರಸ್ ಹಿಂದಿನ ತಳಿಗಳಿಗಿಂತ ಕಡಿಮೆ ಮಾರಕ ಎಂದು ನಂಬಲಾಗಿದೆ ಎಂದು ವ್ಯಾನ್ ಕೆರ್ಖೋವ್ ಹೇಳಿದರು, ಆದರೆ ಅನೇಕ ದೇಶಗಳಲ್ಲಿ ಸೋಂಕಿತ ಜನರು ಆರೋಗ್ಯ ಸೇವೆಗಳನ್ನು ಪಡೆಯಲು ಸಾಲುಗಟ್ಟಿ ನಿಲ್ಲುವಂತೆ ಮಾಡಿದ್ದು ಮುಂದಿನ ರೂಪಾಂತರಿ ಅತ್ಯಂತ ಮಾರಕವು ಆಗಬಹುದು ಎಂದಿದ್ದಾರೆ.


ಇದೇ ಸಮಯದಲ್ಲಿ ಅವರು ಭವಿಷ್ಯದ ರೂಪಾಂತರಗಳು ಕಡಿಮೆ ಮಾರಕವಾಗಿರುತ್ತವೆ ಮತ್ತು ಜನರು ಕಡಿಮೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ನಾವು ಭಾವಿಸಬಾರದು ಎಂದು ಮತ್ತು ಈ ಸಮಯದಲ್ಲಿ ಜನರು ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕು. ನಾವು ಯಾವಾಗಲೂ ಮಾಸ್ಕ್ ಧರಿಸಲು ಅಥವಾ ದೈಹಿಕ ಅಂತರವನ್ನು ಅನುಸರಿಸಲು ಸಾಧ್ಯವಿಲ್ಲ ಆದರೆ ಈ ಸಮಯದಲ್ಲಿ ನಾವು ಈ ನಿಯಮಗಳನ್ನು ಅನುಸರಿಸಲೆಬೇಕು ಎಂದು ಎಲ್ಲಾ ದೇಶಗಳ ಪ್ರಮುಖರಿಗೆ ಕರೆ ನೀಡಿದ್ದಾರೆ.


ಇದನ್ನೂ ಓದಿ: ನೀವು ಕೂಡ ತಡರಾತ್ರಿ ಆಹಾರ ಸೇವಿಸುತ್ತೀರಾ? ಮಾರಣಾಂತಿಕ ಕಾಯಿಲೆಗೆ ಕಾರಣವಾದೀತು ಎಚ್ಚರ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.