Mega Constellation Project: ಬಾಹ್ಯಾಕಾಶಕ್ಕೆ 13 ಸಾವಿರ Satellite ಗಳನ್ನು ಕಳುಹಿಸಲು ಮುಂದಾದ ಡ್ರ್ಯಾಗನ್, ಬೆಚ್ಚಿಬಿದ್ದ ಜಗತ್ತು

China's Ambitious Project - ಈ ಕುರಿತು ಹೇಳಿಕೊಂಡಿರುವ China, ಇದು ತನ್ನ 5G Mobile Internet ಬಿಡುಗಡೆಯ ಒಂದು ಭಾಗವಾಗಿದೆ ಎಂದು ಹೇಳಿದೆ. ಆದರೆ, ಇಡೀ ವಿಶ್ವವೇ ಚೀನಾದ (China) ಈ ಮಹತ್ವಾಕಾಂಕ್ಷೆಯ ಯೋಜನೆಯಿಂದ ಇದೀಗ ಆತಂಕಕ್ಕೆ ಒಳಗಾಗಿದೆ.

Written by - Nitin Tabib | Last Updated : Jan 28, 2022, 02:55 PM IST
  • ಬಾಹ್ಯಾಕಾಶಕ್ಕೆ 13 ಸಾವಿರ ಸ್ಯಾಟಲೈಟ್ ಗಳನ್ನು ಕಳುಹಿಸಲು ಮುಂದಾದ ಚೀನಾ
  • SpaceX Starlink 5G ಮೊಬೈಲ್ ಇಂಟರ್ನೆಟ್ ರೋಲ್‌ ಔಟ್‌ನ ಭಾಗವಾಗಿದೆ ಎಂದ ಚೀನಾ
  • ಚೀನಾದ ಈ ಮಹತ್ವಾಕಾಂಕ್ಷೆ ಯೋಜನೆಗೆ ಬೆಚ್ಚಿ ಬಿದ್ದ ವಿಶ್ವ.
Mega Constellation Project: ಬಾಹ್ಯಾಕಾಶಕ್ಕೆ 13 ಸಾವಿರ Satellite ಗಳನ್ನು ಕಳುಹಿಸಲು ಮುಂದಾದ ಡ್ರ್ಯಾಗನ್, ಬೆಚ್ಚಿಬಿದ್ದ ಜಗತ್ತು title=
Mega Constellation Project (Representational Image)

China - ಬಾಹ್ಯಾಕಾಶ ಜಗತ್ತಿನಲ್ಲಿ ಡ್ರ್ಯಾಗನ್ (Dragon) ತನ್ನ ಬಲ ಹೆಚ್ಚಿಸಿಕೊಳ್ಳುತ್ತಲೇ ಇದೆ. ಚೀನಾದ ಮಹತ್ವಾಕಾಂಕ್ಷೆಯ ಹೆಜ್ಜೆಗಳು ಇದೀಗ ಇಡೀ ಜಗತ್ತಿಗೆ ಅಪಾಯವನ್ನುಂಟುಮಾಡುತ್ತಿವೆ. ಚೀನಾ ಆಕಾಶದಲ್ಲಿ ತನ್ನ ಕಣ್ಗಾವಲು ಹೆಚ್ಚಿಸಲು ಯತ್ನಿಸುತ್ತಿದೆ ಎಂದು ವಿಶ್ವದ (World Countries) ಹಲವು ದೇಶಗಳು ಆತಂಕ ವ್ಯಕ್ತಪಡಿಸಿವೆ. ಚೀನಾದ ಈ ಮೆಗಾ ಉಪಗ್ರಹ ಉಡಾವಣಾ ಯೋಜನೆಯು ಭಾರತದ ಸಮಸ್ಯೆಗಳನ್ನು ಹೆಚ್ಚಿಸಬಹುದು.

ಚೀನಾ 13000 ಸಾವಿರ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ. ಈ ಉಪಗ್ರಹ ಜಾಲವು SpaceX Starlink ನಂತೆ ಇರಲಿದೆ. ಈ ಉಪಗ್ರಹ ನೆಟ್‌ವರ್ಕ್ SpaceX Starlink 5G ಮೊಬೈಲ್ ಇಂಟರ್ನೆಟ್ ರೋಲ್‌ಔಟ್‌ನ ಭಾಗವಾಗಿದೆ ಎಂದು ಚೀನಾ ಹೇಳಿದೆ.

ಚೀನಾ ತನ್ನ ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಹೆಚ್ಚಿಸಲು ಬಯಸಿದೆ. ಚೀನಾದ ಈ ಯೋಜನೆ ಬಗ್ಗೆ ಇದೀಗ ವಿಶ್ವವೇ ಅನುಮಾನವ್ಯಕ್ತಪಡಿಸುತ್ತಿದೆ. ಚೀನಾ ಬಾಹ್ಯಾಕಾಶದಲ್ಲಿ ಬೇಹುಗಾರಿಕೆಗೆ ಸಿದ್ಧತೆ ನಡೆಸುತ್ತಿದೆ ಎಂದು ಹಲವು ದೇಶಗಳು ತಮ್ಮ ಅಸಮಾಧಾನ ಹೊರಹಾಕಿವೆ. ಚೀನಾ ಮುಂದಿನ 5 ವರ್ಷಗಳ ಅವಧಿಗೆ ತನ್ನ ಬಾಹ್ಯಾಕಾಶ ಯೋಜನೆಯನ್ನು ಸಿದ್ಧಪಡಿಸುತ್ತಿದೆ.

ಡ್ರ್ಯಾಗನ್ ಮಾಡಲು ಹೊರಟಿದ್ದಾದರು ಏನು?
ವರ್ಷ 2020ರಲ್ಲಿ ಚೀನಾ ಇಂಟರ್ನೆಟ್ ಉಪಗ್ರಹಗಳ ನ್ಯಾಷನಲ್ ನೆಟ್ವರ್ಕ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದು. ಇದಕ್ಕೆ 'GW' ಹೆಸರನ್ನು ಇಡಲಾಗಿದೆ. ಈ ಪ್ರಾಜೆಕ್ಟ್ ನಲ್ಲಿ ಒಟ್ಟು 12, 992 ಉಪಗ್ರಹಗಳಿದ್ದವು. . ಈ ಉಪಗ್ರಹಗಳು 310 ಮೈಲುಗಳ ದೂರದಿಂದ 711 ಮೈಲುಗಳವರೆಗೆ ಕಕ್ಷೆಯಲ್ಲಿ ಸುತ್ತಲಿವೆ. ಈ ಯೋಜನೆಯು 2026 ರವರೆಗೆ ಇರಲಿವೆ. ಈ ಸಂವಹನದ ಮೂಲಕ ಭೂಮಿಯ ವೀಕ್ಷಣೆ (Earth Observation) ಮತ್ತು ನ್ಯಾವಿಗೇಷನ್ (Earth Navigation) ಉಪಗ್ರಹಗಳ ಒಂದೇ ಜಾಲ ಬೇಕಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದ ಸಂಸ್ಥೆಗಳು ಯೋಜನೆಯ ಅಭಿವೃದ್ಧಿಗಾಗಿ, ಚಾಂಗ್‌ಕಿಂಗ್‌ನಲ್ಲಿ ಒಪ್ಪಂದಕ್ಕೂ ಕೂಡ ಸಹಿ ಹಾಕಿವೆ.

ಇದನ್ನೂ  ಓದಿ-The Gate Of Hell: ಈ ದೇವಾಲಯಕ್ಕೆ ‘ನರಕದ ದ್ವಾರ’ ಎನ್ನುತ್ತಾರೆ, ಯಾರು ಹೋದರೂ ಸಾಯುತ್ತಾರಂತೆ!

Mega Constellation ನತ್ತ ಸಾಗುತ್ತಿದೆಯೇ ಚೀನಾ?
ನಿಜ ಹೇಳುವುದಾದರೆ ಚೀನಾ ಮೆಗಾ ಕಾನ್ಸ್ಟಾಲೇಶನ್ ನತ್ತ ಸಾಗುತ್ತಿದೆ. ಭೂಮಿಯ ವಿವಿಧ ಭಾಗಗಳನ್ನು ಕವರ್ ಮಾಡಲು ಸಾವಿರಾರು ಉಪಗ್ರಹಗಳು ಒಟ್ಟಿಗೆ ಕಾರ್ಯ ನಿರ್ವಹಿಸಲು ಸಾಧ್ಯವಾದರೆ ಅದನ್ನು ಮೆಗಾ ಕಾನ್ಸ್ಟಾಲೇಶನ್ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಇಂಟರ್ನೆಟ್ ಸೇವೆಗಳನ್ನು ಸುಧಾರಿಸಲು ಉಪಗ್ರಹಗಳು ನೆಲದಿಂದ ಹಲವು ನೂರು ಮೈಲುಗಳಷ್ಟು ಎತ್ತರದಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಚೀನಾದ ಈ ಬೃಹತ್ ನೆಟ್ವರ್ಕ್ ಯೋಜನೆಯಿಂದ ಇಡೀ ಜಗತ್ತೇ ಆತಂಕಕ್ಕೆ ಒಳಗಾಗಿದೆ. ಈ ಕ್ರಮದಿಂದ ಚೀನಾ ಇತರ ದೇಶಗಳ ಮೇಲೆಯೂ ಸಹ ಕಣ್ಣಿಡಬಹುದು. ಚೀನಾ ಕೂಡ ಬೇಹುಗಾರಿಕೆ ಘಟನೆಗಳನ್ನು ನಡೆಸಬಹುದು. ಇಷ್ಟು ಎತ್ತರದಲ್ಲಿ ಚೀನಾದ ಚಟುವಟಿಕೆಗಳನ್ನು ಪತ್ತೆಹಚ್ಚುವುದು ಜಗತ್ತಿಗೆ ಮತ್ತಷ್ಟು ಜಟಿಲವಾಗಲಿದೆ.

ಇದನ್ನೂ ಓದಿ-Coronavirus New Symptom: Omicron ರೂಪಾಂತರಿಯ ಹೊಸ ಲಕ್ಷಣ ಪತ್ತೆ, ಇದೀಗ ಶರೀರದ ಈ ಭಾಗದ ಮೇಲೆ ದಾಳಿ ಇಡುತ್ತಿದೆ ವೈರಸ್

ಚೀನಾ ಈಗಾಗಲೇ ತನ್ನ ಭೂ ವೀಕ್ಷಣಾ ಉಪಗ್ರಹವನ್ನು ಉಡಾವಣೆ ಮಾಡಿದೆ. ಚೀನಾದ ಈ ಉಪಗ್ರಹವನ್ನು ಗಾಫೆನ್  (Gaofen) ಎಂದು ಕರೆಯಲಾಗುತ್ತದೆ. ಈ ಉಪಗ್ರಹ ಸಮುದ್ರದ ಚಂಡಮಾರುತಗಳು, ಪರಿಸರ ಮತ್ತು ಜಲ ಸಂರಕ್ಷಣೆಯ ಮೇಲೆ ಕಣ್ಣಿಟ್ಟಿವೆ ಎಂದು ಚೀನಾ ಜಗತ್ತಿಗೆ ಹೇಳುತ್ತಿದೆ. ನವೆಂಬರ್‌ನಲ್ಲಿ ಪ್ರಾರಂಭಿಸಲಾದ ಯೋಜನೆಯ ಬಗ್ಗೆ ಚೀನಾ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಚೀನಾ ಯಾವುದೇ ಬೇಹುಗಾರಿಕೆ ಯೋಜನೆಯನ್ನು ಕಾರ್ಯಗತಗೊಳಿಸುತ್ತಿಲ್ಲವಲ್ಲ ಎಂದು ವಿಶ್ವದ ಹಲವು ದೇಶಗಳು ಆತಂಕ ಹೊರಹಾಕಿವೆ.

ಇದನ್ನೂ ಓದಿ-Strangest Insurance Claims: 300 ವರ್ಷಗಳ ಇತಿಹಾಸದಲ್ಲೇ ವಿಚಿತ್ರ Insurance Claim, ಗ್ರಾಹಕರ ಹಕ್ಕು ಮಂಡನೆಗೆ ಬೆಚ್ಚಿಬಿದ್ದ ಕಂಪನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News