ವುಹಾನ್ನಲ್ಲಿ ಅಂತ್ಯವಾಯಿತೇ ಕೊರೋನಾ ? ಏನ್ ಹೇಳುತ್ತೆ ಚೀನಾ..?
ಜಗತ್ತಿನಲ್ಲಿ ಭೀತಿ ಹುಟ್ಟಿಸಿರುವ ಕೊರೋನಾವೈರಸ್ ಈಗ ಭಾರತದಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಇದುವರೆಗೆ ಭಾರತದಲ್ಲಿ 73 ಪ್ರಕರಣಗಳು ಕಂಡುಬಂದಿದೆ.
ನವದೆಹಲಿ: ಜಗತ್ತಿನಲ್ಲಿ ಭೀತಿ ಹುಟ್ಟಿಸಿರುವ ಕೊರೋನಾವೈರಸ್ ಈಗ ಭಾರತದಲ್ಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಇದುವರೆಗೆ ಭಾರತದಲ್ಲಿ 73 ಪ್ರಕರಣಗಳು ಕಂಡುಬಂದಿದೆ.
ಇಂತಹ ಸಂದರ್ಭದಲ್ಲಿ ಈಗ ಚೀನಾದಲ್ಲಿ ಕೊರೋನಾ ವೈರಸ್ ಹಾವಳಿ ಉತ್ತಂಗ ಕಡಿಮೆಯಾಗಿದೆ ಎಂದು ಚೀನಾದ ಸುದ್ದಿ ಸಂಸ್ಥೆ ಕ್ಸಿನ್ಹುವಾ ಗುರುವಾರ ವರದಿ ಮಾಡಿದೆ.ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ಬೀಜಿಂಗ್‌ನಲ್ಲಿನ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರದಲ್ಲಿ ಹೊಸ ಕರೋನವೈರಸ್ ಪ್ರಕರಣಗಳು ಕ್ಷೀಣಿಸುತ್ತಿವೆ ಎಂದು ಹೇಳಿದ್ದಾರೆ.
ದೇಶದ ಒಟ್ಟಾರೆ ಸಾಂಕ್ರಾಮಿಕ ಪರಿಸ್ಥಿತಿ ಕಡಿಮೆ ಮಟ್ಟದಲ್ಲಿದೆ ಎಂದು ಫೆಂಗ್ ಹೇಳಿದರು.ವುಹಾನ್‌ನಲ್ಲಿನ ಹೊಸ ಕೊರೊನಾವೈರಸ್ ಪ್ರಕರಣಗಳು ಒಂದೇ ಅಂಕೆಗೆ ಇಳಿದಿವೆ ಎಂದು ವರದಿಯಲ್ಲಿ ತಿಳಿದುಬಂದಿದೆ.ಬುಧವಾರ ಈ ಪ್ರದೇಶದಿಂದ ಕೇವಲ ಎಂಟು ಪ್ರಕರಣಗಳು ವರದಿಯಾಗಿದ್ದರೆ,ಹುಬೈ ಹೊರಗಿನ ಚೀನಾದ ಮುಖ್ಯ ಭೂಭಾಗವು ಏಳು ಹೊಸ ಪ್ರಕರಣಗಳನ್ನು ವರದಿ ಮಾಡಿದೆ, ಅವುಗಳಲ್ಲಿ ಆರು ಪ್ರಕರಣಗಳು ವಿದೇಶದಿಂದ ಬಂದಿರುವಂತವುಗಳು ಎಂದು ತಿಳಿದುಬಂದಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕರೋನವೈರಸ್ ಹೊರಹೊಮ್ಮಿದ ಹುಬೈ ಪ್ರಾಂತ್ಯ, ಪ್ರಯಾಣದ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸುತ್ತಿದೆ ಎಂದು ಗುರುವಾರ ಘೋಷಿಸಿತು ಮತ್ತು ಕೆಲವು ಕೈಗಾರಿಕೆಗಳು ತನ್ನ ಎರಡು ನಗರಗಳು ಮತ್ತು ಎರಡು ಕೌಂಟಿಗಳಲ್ಲಿ ಉತ್ಪಾದನೆಯನ್ನು ಪುನರಾರಂಭಿಸಲು ಸಹ ಅವಕಾಶ ನೀಡುತ್ತದೆ ಎನ್ನಲಾಗಿದೆ.ಕೊರೊನಾವೈರಸ್ ಜಾಗತಿಕವಾಗಿ ಶೀಘ್ರವಾಗಿ ಹರಡುತ್ತಿರುವಾಗ, ಕಳೆದ ಏಳು ದಿನಗಳಲ್ಲಿ ಚೀನಾದಲ್ಲಿ ಅದರ ಪ್ರಗತಿಯು ಗಮನಾರ್ಹವಾಗಿ ಕುಂಠಿತಗೊಂಡಿದೆ. ಒಟ್ಟಾರೆಯಾಗಿ, ಚೀನಾದಲ್ಲಿ ಮುಖ್ಯ ಭೂಭಾಗದಲ್ಲಿ 15 ಹೊಸ ಕೊರೊನಾ ವೈರಸ್ ಪ್ರಕರಣಗಳು ಬುಧವಾರ ದಾಖಲಾಗಿದ್ದು, ಇದರ ಹಿಂದಿನ ದಿನ 24 ಪ್ರಕರಣಗಳಿದ್ದವು ಎನ್ನಲಾಗಿದೆ.
ಚೀನಾ ಮುಖ್ಯ ಭೂಭಾಗದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 80,793 ಆಗಿದೆ. ಮಂಗಳವಾರದ ಹೊತ್ತಿಗೆ, 62,793 ಜನರು ಚೇತರಿಸಿಕೊಂಡಿದ್ದಾರೆ. ಬುಧವಾರದ ಅಂತ್ಯದ ವೇಳೆಗೆ, ಚೀನಾದ ಮುಖ್ಯ ಭೂಭಾಗದಲ್ಲಿ ಸಾವಿನ ಸಂಖ್ಯೆ 3,169 ಕ್ಕೆ ತಲುಪಿದೆ.