Plane: ಈ ಹಳ್ಳಿಯಲ್ಲಿ ಪ್ರತಿಯೊಬ್ಬರ ಬಳಿಯಲ್ಲೂ ಇದೇ ತಮ್ಮದೇ ವಿಮಾನ!
ಜಗತ್ತಿನಲ್ಲಿ ಸಂಚರಿಸಲು ಇಷ್ಟಪಡುವ ಜನರು ಸಾಮಾನ್ಯವಾಗಿ ಅನನ್ಯ ಸ್ಥಳಗಳನ್ನು ಹುಡುಕುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಮನೆಯಲ್ಲಿಯೇ ವಿಮಾನ ಹೊಂದಿರುವ ಗ್ರಾಮದ ಜನತೆ ಬಗ್ಗೆ ತಿಳಿಸಲಿದ್ದೇವೆ. ಅಮೆರಿಕದ ಫ್ಲೋರಿಡಾ ರಾಜ್ಯದ ಸ್ಪ್ರೂಸ್ ಕ್ರೀಕ್ ಗ್ರಾಮದ ಜನರು ತಮ್ಮದೇ ಆದ ಚಾರ್ಟರ್ಡ್ ವಿಮಾನಗಳನ್ನು ಹೊಂದಿದ್ದಾರೆ.
ನವದೆಹಲಿ: ಸಾಮಾನ್ಯವಾಗಿ ಎಲ್ಲರಿಗೂ ತಮ್ಮದೇ ಸ್ವಂತ ಮನೆಯ ಜೊತೆಗೆ ಮನೆ ಮುಂದೆ ಒಂದು ಕಾರು ಇದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದೆನಿಸುತ್ತದೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಪ್ರತಿಯೊಬ್ಬರ ಮನೆ ಮುಂದೆ ಕಾರಿನ ಬದಲು ವಿಮಾನ ನಿಲ್ಲುತ್ತದೆ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು.
ವಾಸ್ತವವಾಗಿ ಇಲ್ಲಿ ವಿಮಾನದಲ್ಲಿ ಪ್ರಯಾಣಿಸುವುದು ತುಂಬಾ ಸರಳವಾಗಿದ್ದು, ಇಲ್ಲಿನ ನಿವಾಸಿಗಳು ತಮ್ಮ ಕೆಲಸಕ್ಕಾಗಿ ಕಾರುಗಳು ಅಥವಾ ಬೈಕುಗಳನ್ನು ಬಳಸುವುದಿಲ್ಲ, ಬದಲಿಗೆ ವಿಮಾನವನ್ನು ಬಳಸುತ್ತಾರೆ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬಂತೆ ವಿಶ್ವದಾದ್ಯಂತ ಸಂಚರಿಸಲು ಇಷ್ಟಪಡುವ ಜನರು ಸಾಮಾನ್ಯವಾಗಿ ಅನನ್ಯ ಸ್ಥಳಗಳನ್ನು ಹುಡುಕುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ವಿಮಾನ ಹೊಂದಿರುವ ಈ ಗ್ರಾಮವು ಸಹ ವಿಶಿಷ್ಟವಾಗಿದೆ. ಈ ಗ್ರಾಮ ಯಾವ ದೇಶದಲ್ಲಿದೆ. ಅಲ್ಲಿನ ವಿಶೇಷತೆ ಏನೆಂದು ತಿಳಿಯಲು ಮುಂದೆ ಓದಿ...
ಅಮೆರಿಕದ ವಿಶಿಷ್ಟ ಗ್ರಾಮ :
ಇಂದಿಗೂ, ವರನು ತನ್ನ ವಧುವನ್ನು ಕರೆದೊಯ್ಯಲು ಹೆಲಿಕಾಪ್ಟರ್ ಮೂಲಕ ಬಂದಾಗ ಅಕ್ಕ-ಪಕ್ಕದವರು ಕೂಡ ಬಹಳ ಅಚ್ಚರಿಯಿಂದ ಬಾಯಿಯ ಮೇಲೆ ಬೆರಳಿಟ್ಟುಕೊಂಡು ಈ ದೃಶ್ಯವನ್ನು ನೋಡಲು ಧಾವಿಸುತ್ತಾರೆ. ಆದರೆ ಫ್ಲೋರಿಡಾ ಸ್ಟೇಟ್ ಆಫ್ ಅಮೇರಿಕಾದಲ್ಲಿ (US) ನೆಲೆಗೊಂಡಿರುವ ಈ ಸ್ಪ್ರೂಸ್ ಕ್ರೀಕ್ (Spruce Creek) ಹಳ್ಳಿಯ ಜನರು ತಮ್ಮದೇ ಆದ ವಿಮಾನಗಳನ್ನು ಹೊಂದಿದ್ದಾರೆ. ಅವರು ತಮ್ಮ ಯಾವುದೇ ಕೆಲಸಗಳಿಗೆ ಮನೆಯಿಂದ ಹೊರಡುವಾಗ ವಿಮಾನದಲ್ಲಿ ಹೋಗಿ ಬರುತ್ತಾರೆ.
ಇದನ್ನೂ ಓದಿ - Air Travel Guidelines: ವಿಮಾನಯಾನದ ವೇಳೆ ಈ ತಪ್ಪುಗಳನ್ನು ಮಾಡದಿರಿ
ಗ್ಯಾರೇಜ್‌ಗಳ ಬದಲು ಮನೆಗಳಲ್ಲಿ ಹ್ಯಾಂಗರ್‌ಗಳು :
ಎಕ್ಸ್‌ಪ್ರೆಸ್.ಕೊ.ಯುಕ್‌ನ (express.co.uk) ವರದಿಯ ಪ್ರಕಾರ, ಸ್ಪ್ರೂಸ್ ಕ್ರೀಕ್‌ನಲ್ಲಿ ಸುಮಾರು 5,000 ಜನರು ವಾಸಿಸುತ್ತಿದ್ದಾರೆ, ಅಲ್ಲಿ 1 ಸಾವಿರಕ್ಕೂ ಹೆಚ್ಚು ಮನೆಗಳಿವೆ. ಮನೆಗಳ ಸಾಮಾನ್ಯ ವೈಶಿಷ್ಟ್ಯದ ಬಗ್ಗೆ ಹೇಳುವುದಾದರೆ ಸುಮಾರು 700 ಮನೆಗಳಲ್ಲಿ ಕಾರ್ ಗ್ಯಾರೇಜ್‌ಗಳ ಬದಲಿಗೆ ಖಾಸಗಿ ಹ್ಯಾಂಗರ್‌ಗಳಿವೆ. ವಿಮಾನ (Aeroplane) ಮತ್ತು ಚಾಪರ್‌ಗಳನ್ನು (Choppers) ನಿಲ್ಲಿಸಿರುವ ಸ್ಥಳವನ್ನು ಹ್ಯಾಂಗರ್ ಎಂದು ಹೇಳಲಾಗುತ್ತದೆ. ಇಲ್ಲಿ ಜನರು ಗ್ಯಾರೇಜ್‌ಗಳನ್ನು ನಿರ್ಮಿಸುವ ಬದಲು ಹ್ಯಾಂಗರ್‌ಗಳನ್ನು ನಿರ್ಮಿಸಲು ಬಯಸುತ್ತಾರೆ. ಅನನ್ಯ ಗ್ರಾಮವು ಓಡುದಾರಿ ಅಂದರೆ ರನ್ ವೇಯನ್ನು ಸಹ ಹೊಂದಿದೆ, ಇದರಿಂದ ಎಲ್ಲಾ ಚಾರ್ಟರ್ಡ್ ವಿಮಾನಗಳು ಹೊರಡುತ್ತವೆ.
ವಾಸ್ತವವಾಗಿ, ಇಲ್ಲಿ ಹೆಚ್ಚಿನ ಜನರು ವೃತ್ತಿಯಲ್ಲಿ ಪೈಲಟ್‌ಗಳಾಗಿದ್ದಾರೆ, ಆದ್ದರಿಂದ ಮನೆ-ಮನೆಗೆ ವಿಮಾನ ಇರುವುದು ಸಾಮಾನ್ಯವಾಗಿದೆ. ಇಲ್ಲಿನ ಮೂಲ ನಿವಾಸಿಗಳು ವಿಮಾನವನ್ನು ತುಂಬಾ ಇಷ್ಟಪಡುತ್ತಾರೆ, ಅವರು ವಾರಾಂತ್ಯದಲ್ಲಿ ಅಂದರೆ ಶನಿವಾರ ತಮ್ಮ ಗ್ರಾಮದ ಓಡುದಾರಿಯಲ್ಲಿ ಒಟ್ಟುಗೂಡುತ್ತಾರೆ, ಮತ್ತು ಸ್ಥಳೀಯ ವಿಮಾನ ನಿಲ್ದಾಣಕ್ಕೆ ಒಟ್ಟಿಗೆ ಹೋಗುತ್ತಾರೆ. ಅವರು ಒಟ್ಟಿಗೆ ಉಪಹಾರ ಕೂಟವನ್ನು ಏರ್ಪಡಿಸುತ್ತಾರೆ ಮತ್ತು ಈ ಪದ್ಧತಿಯನ್ನು ಸ್ಯಾಟರ್ಡೇ ಮಾರ್ನಿಂಗ್ ಗಾಗಲ್ (Saturday Morning Gaggle) ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ- Flight Emergency Landing : ಕಳ್ಳ ಬೆಕ್ಕಿಗೆ ಹೆದರಿ ಎಮರ್ಜೆನ್ಸಿ ಲ್ಯಾಂಡ್ ಆದ ವಿಮಾನ.!
'ಎರಡನೇ ವಿಶ್ವ ಯುದ್ಧದೊಂದಿಗೆ ಸಂಬಂಧಗಳು' :
ಯುಎಸ್ನಲ್ಲಿ ಇಂತಹ ಖಾಸಗಿ ವಿಮಾನಗಳು ಹೇರಳವಾಗಿರುವ ಅನೇಕ ಹಳ್ಳಿಗಳು ಮತ್ತು ವಸಾಹತುಗಳಿವೆ. ಅರಿ ಜೋನಾ, ಕೊಲೊರಾಡೋ ಮತ್ತು ಟೆಕ್ಸಾಸ್‌ನಲ್ಲಿ ಇಂತಹ ಅನೇಕ ಪ್ರದೇಶಗಳಿವೆ. ಅಲ್ಲಿ ದೊಡ್ಡ ಫ್ಲೈ-ಇನ್ ಸಮುದಾಯವಿದೆ. ಅಂದರೆ, ಅನೇಕ ಜನರು ತಮ್ಮದೇ ಆದ ವಿಮಾನಗಳನ್ನು ಹೊಂದಿದ್ದಾರೆ. ವಿಶೇಷವೆಂದರೆ ಈ ವಿಶಿಷ್ಟ ಮತ್ತು ಹೈಟೆಕ್ ಪ್ರದೇಶಗಳು ಎರಡನೆಯ ಮಹಾಯುದ್ಧದೊಂದಿಗೆ ಸಂಬಂಧ ಹೊಂದಿವೆ. ಹೋರಾಟದ ಅಂತ್ಯದ ನಂತರ, ಈ ಕಾರ್ಯತಂತ್ರದ ಪ್ರದೇಶಗಳು ವಿಭಿನ್ನ ರೀತಿಯಲ್ಲಿ ಅಭಿವೃದ್ಧಿ ಹೊಂದಿದವು. ಸ್ಪ್ರೂಸ್ ಕ್ರೀಕ್ ಬಗೆಗಿನ ಇನ್ನೊಂದು ವಿಶೇಷವೆಂದರೆ ಇಲ್ಲಿ ಹೆಚ್ಚಿನ ಜನರು ತಮ್ಮದೇ ಆದ ವಿಮಾನಗಳನ್ನು ಹೊಂದಿದ್ದಾರೆ. ಆದ್ದರಿಂದ ಈ ಗಣ್ಯ ಗ್ರಾಮವು ಮುಖ್ಯಾಂಶಗಳಲ್ಲಿ ಉಳಿದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.