ನವದೆಹಲಿ: World's Most Expensive Coin - ಜಗತ್ತಿನಲ್ಲಿ ಅನೇಕ ಅಪರೂಪದ ವಸ್ತುಗಳಿವೆ, ಅವುಗಳ ಬೆಲೆ ನಿಮ್ಮನ್ನು ಕೂಡ ಆಶ್ಚರ್ಯಚಕಿತಗೊಳಿಸುತ್ತವೆ. ಜಗತ್ತಿನಲ್ಲಿ ಇಂತಹ ಅನೇಕ ರೀತಿಯ ನಾಣ್ಯಗಳಿದ್ದು, ಇವು ಅಂಟಿಕ ವಸ್ತುಗಳ ಸಂಗ್ರಹ ಹವ್ಯಾಸಿಗಳ ಆಯ್ಕೆಯಾಗಿವೆ. ಅನೇಕ ನಾಣ್ಯಗಳು ಅದರ ಮಾಲೀಕರನ್ನು ಕೋಟ್ಯಾಧೀಶರನ್ನಾಗಿಸಿವೆ. ವಾಸ್ತವದಲ್ಲಿ ಅನೇಕ ಜನರು ಈ ಅಪರೂಪದ ವಸ್ತುಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ ಮತ್ತು ಇದಕ್ಕಾಗಿ ಅವರು ದೊಡ್ಡ ಮೊತ್ತವನ್ನು ಪಾವತಿಸಲು ಸಿದ್ಧರಾಗಿರುತ್ತಾರೆ.

COMMERCIAL BREAK
SCROLL TO CONTINUE READING

ನಾಣ್ಯಗಳ ಸಂಗ್ರಹ (Coin Auction)
ಜಗತ್ತಿನಲ್ಲಿ ಹಲವು ಜನರಿಗೆ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಇರುತ್ತದೆ. ಕೆಲವು ನಾಣ್ಯಗಳು ಅತ್ಯಂತ ದುಬಾರಿ ಬೆಲೆಗೆ ಹರಾಜಿನಲ್ಲಿ ಮಾರಾಟವಾಗುತ್ತವೆ. ಆದರೆ, ಮುಖಬೆಲೆಯ ಲೆಕ್ಕಾಚಾರದಲ್ಲಿ ಅವುಗಳ ಮೌಲ್ಯವು ತುಂಬಾ ಕಡಿಮೆಯಾಗಿರುತ್ತದೆ. ಹಾಗಾದರೆ ಬನ್ನಿ ಇದುವರೆಗೆ ಅತ್ಯಂತ ದುಬಾರಿ ಬೆಲೆಗೆ (Most Valuable Coin) ಮಾರಾಟವಾದ ನಾಣ್ಯದ ಕುರಿತು ಮಾಹಿತಿಯನ್ನು ಪಡೆದುಕೊಳ್ಳೋಣ.

144,17,95,950  ರೂ.ಗೆ ಹರಾಜಾಗಿದೆ ಈ ನಾಣ್ಯ
ವಿಶ್ವದ ಅತ್ಯಂತ ದುಬಾರಿ ನಾಣ್ಯವೆಂದರೆ 1933 ಡಬಲ್ ಈಗಲ್ ಚಿನ್ನದ ನಾಣ್ಯ (1933 Double Eagle gold coin). ಇದು ಅಮೇರಿಕನ್ (American coin) ನಾಣ್ಯವಾಗಿದ್ದು, ಇಂದಿನ ವಿನಿಮಯ ದರದ ಪ್ರಕಾರ ಇದರ ಮುಖಬೆಲೆಯು ಕೇವಲ $ 20 (ರೂ. 1,525.71) ಆಗಿದೆ.ಆದರೆ, ಹರಾಜು ಪ್ರಕ್ರಿಯೆಯ ವೇಳೆ ಈ ನಾಣ್ಯಕ್ಕೆ ದೊರೆತ ಬೆಲೆ ಕೇಳಿದರೆ ನೀವೂ ಕೂಡ ಒಂದು ಕ್ಷಣ ಅವಾಕ್ಕಾಗುವಿರಿ.


ಇದನ್ನೂ ಓದಿ-Costliest Camel Video: ಇದುವೇ ವಿಶ್ವದ ಅತ್ಯಂತ ದುಬಾರಿ ಒಂಟೆ, ಎಷ್ಟು ಕೋಟಿಗೆ ಮಾರಾಟವಾಗಿದೆ ಗೊತ್ತಾ?

ಕಳೆದ ವರ್ಷ ಈ ನಾಣ್ಯದ ಹರಾಜು ಪ್ರಕ್ರಿಯೆ ನಡೆದಿದೆ
ಕಳೆದ ವರ್ಷ ಸೋಥೆಬಿ  (Sotheby’s) ಇದನ್ನು ನ್ಯೂಯಾರ್ಕ್‌ನಲ್ಲಿ ಈ ನಾಣ್ಯದ ಹರಾಜು ಪ್ರಕ್ರಿಯೆ ನಡೆಸಿದೆ. ಈ ನಾಣ್ಯಕ್ಕೆ ಹರಾಜಿನಲ್ಲಿ 144,17,95,950 ($ 18.9) ಬಿಡ್ ಮಾಡಲಾಗಿದೆ. ಅಂದರೆ, ಈ ನಾಣ್ಯವನ್ನು 144, 17, 95, 950 ರೂ.ಗೆ ಮಾರಾಟಗೊಂಡಿದೆ. ಈ ಹಿಂದೆ ಜುಲೈ 8, 2021 ರಂದು ಇದೇ ನಾಣ್ಯವನ್ನು 138 ಕೋಟಿ ರೂ.ಗೆ ಮಾರಾಟ ಮಾಡಲಾಗಿತ್ತು. ಹಾಡಾದರೆ ಈ ನಾಣ್ಯದ ವಿಶೇಷತೆಯಾದರು ಏನು? ಎಂಬ ಪ್ರಶ್ನೆ ನಿಮ್ಮ ಮನದಲ್ಲಿಯೂ ಕೂಡ ಮೂಡಿರಬಹುದು. ಈ ಅಮೂಲ್ಯ ನಾಣ್ಯದ ಒಂದು ಬದಿಯಲ್ಲಿ ಅಮೆರಿಕದ ಲೇಡಿ ಲಿಬರ್ಟಿ ಚಿತ್ರವಿದ್ದರೆ, ಇನ್ನೊಂದು ಬದಿಯಲ್ಲಿ ಅಮೆರಿಕನ್ ಈಗಲ್ ಮುದ್ರಿಸಲಾಗಿದೆ.


ಇದನ್ನೂ ಓದಿ-Affair With Five Woman: ಐದು ಹೆಂಗಸರ ಜೊತೆಗೆ ಅಫೈರ್, ಗೊತ್ತಾದ್ಮೇಲೆ ಆಗಿದ್ದೇನು ತಿಳಿಯಲು ಸುದ್ದಿ ಓದಿ

1933 ಡಬಲ್ ಈಗಲ್ ಇದು ಚಲಾವಣೆಯ ಉದ್ದೇಶಕ್ಕಾಗಿ ಅಮೆರಿಕಾದಲ್ಲಿ ಟಂಕಿಸಲಾದ ಕೊನೆಯ ಚಿನ್ನದ ನಾಣ್ಯವಾಗಿದೆ. ಆದರೆ, ಅದನ್ನು ಚಲಾವಣೆಗೆ ತರಲಾಗಿರಲಿಲ್ಲ. ಆಗಿನ ಅಮೆರಿಕ ಅಧ್ಯಕ್ಷ ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಅವರು ಆ ಸಮಯದಲ್ಲಿ ದೇಶದಲ್ಲಿ ಚಿನ್ನದ ನಾಣ್ಯಗಳ ಚಲಾವಣೆಯನ್ನು ನಿಷೇಧಿಸಿದ್ದರು ಮತ್ತು ಅದರ ನಂತರ ಅವರು ಟಂಕಿಸಲಾಗಿದ್ದ ಎಲ್ಲಾ ನಾಣ್ಯಗಳನ್ನು ನಾಶಮಾಡಲು ಆದೇಶಿಸಿದ್ದರು. 1933ರ ಡಬಲ್ ಈಗಲ್ ಮಾದರಿಯನ್ನು ಮಾತ್ರ US ಸರ್ಕಾರವು ಖಾಸಗಿ ಮಾಲೀಕತ್ವಕ್ಕಾಗಿ ಕಾನೂನುಬದ್ಧವಾಗಿ ಅನುಮೋದಿಸಿತ್ತು. ಸೋಥೆಬೈಸ್ 1933 ಡಬಲ್ ಈಗಲ್ ಅನ್ನು 'ಹೋಲಿ ಗ್ರೇಲ್ ಆಫ್ ಕಾಯಿನ್ಸ್' (Holy Grail Of Coins) ಎಂದು ಕರೆದಿದೆ.


ಇದನ್ನೂ ನೋಡಿ-



(Disclaimer - ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)