ಈ ಬಾರಿ ಬಕ್ರೀದ್ ದಿನ ಪಾಕ್-ಭಾರತ ನಡುವೆ ಸಿಹಿ ತಿಂಡಿ ವಿನಿಮಯವಿಲ್ಲ !
ಈದ್ ಅಲ್-ಅಧಾ ಪ್ರಯುಕ್ತ ಪ್ರತಿವರ್ಷ ನಡೆಯುತ್ತಿದ್ದ ಭಾರತ ಮತ್ತು ಪಾಕ್ ನಡುವಿನ ಸಿಹಿತಿಂಡಿ ವಿನಿಮಯಕ್ಕೆ ಈ ಬಾರಿ ಕಡಿವಾಣ ಬಿದ್ದಿದೆ. ಈ ವಿಷಯವನ್ನು ಸೋಮವಾರದಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ನವದೆಹಲಿ: ಈದ್ ಅಲ್-ಅಧಾ ಪ್ರಯುಕ್ತ ಪ್ರತಿವರ್ಷ ನಡೆಯುತ್ತಿದ್ದ ಭಾರತ ಮತ್ತು ಪಾಕ್ ನಡುವಿನ ಸಿಹಿತಿಂಡಿ ವಿನಿಮಯಕ್ಕೆ ಈ ಬಾರಿ ಕಡಿವಾಣ ಬಿದ್ದಿದೆ. ಈ ವಿಷಯವನ್ನು ಸೋಮವಾರದಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರತಿವರ್ಷ ಈದ್ ಅಲ್-ಅಧಾ ಪ್ರಯುಕ್ತ ಬಿಎಸ್ಎಫ್ ಮತ್ತು ಪಾಕಿಸ್ತಾನ ರೇಂಜರ್ಸ್ ನಡುವೆ ಅಂತರರಾಷ್ಟ್ರೀಯ ಗಡಿಯಲ್ಲಿ ಸಿಹಿತಿಂಡಿಗಳ ವಿನಿಯಮ ನಡೆಯಿತ್ತಿತ್ತು. ಆದರೆ ಭಾರತವು ಇತ್ತೀಚಿಗೆ ಕಾಶ್ಮೀರಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿ ರಾಜ್ಯವನ್ನು ಜಮ್ಮುಮತ್ತು ಕಾಶ್ಮೀರ ಹಾಗೂ ಲಡಾಖ್ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿತ್ತು, ಈ ಹಿನ್ನಲೆಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಈಗ ಉಲ್ಬಣಗೊಂಡಿದೆ.
ಭಾರತದ ಕ್ರಮಕ್ಕೆ ಪ್ರತಿಯಾಗಿ ಈಗ ಪಾಕ್ ಈಗ ರೈಲು ಸಂಚಾರವನ್ನು ಸ್ಥಗಿತಗೊಳಿಸಿದ್ದಲ್ಲದೆ, ದ್ವೀಪಕ್ಷಿಯ ಹಾಗೂ ವ್ಯಾಪಾರ ಸಂಬಂಧವನ್ನು ಸ್ಥಗಿತಗೊಳಿಸಿದೆ. ಜಮ್ಮು, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿರುವ ಅಂತರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಭದ್ರತಾ ಪಡೆಗಳು ಪ್ರತಿ ವರ್ಷ ಈ ಹಬ್ಬದಂದು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದಲ್ಲದೆ ಸಿಹಿ ತಿಂಡಿಗಳನ್ನು ವಿತರಿಸಲಾಗುತ್ತಿತ್ತು. ಆದರೆ ಈ ಭಾರಿ ಉಭಯ ದೇಶಗಳ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನಲೆಯಲ್ಲಿ ಈ ಬಾರಿ ಕಾರ್ಯಕ್ರಮ ನಡೆಯಲಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 3,000 ಕಿ.ಮೀಟರ್ ದುದ್ದಕ್ಕೂ ನಿಯೋಜಿಸಲಾಗಿರುವ ಎರಡು ಪಡೆಗಳು ಪ್ರಮುಖ ಹಬ್ಬಗಳಾದ ಈದ್, ಹೋಳಿ, ದೀಪಾವಳಿಗಳಂದು ಪರಸ್ಪರ ಶುಭಾಶಯ ಮತ್ತು ಸಿಹಿ ತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ.