Five Countries Without Airport: ಈ 5 ದೇಶಗಳಲ್ಲಿ ವಿಮಾನ ನಿಲ್ದಾಣವೇ ಇಲ್ಲ: ಇಲ್ಲಿನ ಜನ ಬೇರೆ ದೇಶಗಳಿಗೆ ಹೋಗೋದು ಹೇಗೆ?
Five Countries Without Airport: ಹೆಚ್ಚಿನ ಜನರು ಇತರ ದೇಶಗಳಿಗೆ ಹೋಗಲು ವಿಮಾನವನ್ನು ಆಯ್ಕೆ ಮಾಡಲು ಕಾರಣ ಇದುವೇ. ಆದರೆ ಒಂದೇ ಒಂದು ವಿಮಾನ ನಿಲ್ದಾಣವೂ ಇಲ್ಲದ ಹಲವಾರು ದೇಶಗಳು ಜಗತ್ತಿನಲ್ಲಿವೆ ಎಂಬುದು ನಿಮಗೆ ತಿಳಿದಿದೆಯೇ? ವಿಮಾನ ನಿಲ್ದಾಣವಿಲ್ಲದ ಐದು ದೇಶಗಳ ಬಗ್ಗೆ ನಾವು ಇಲ್ಲಿ ಹೇಳುತ್ತೇವೆ.
Five Countries Without Airport: ಪ್ರಪಂಚದ ವಿವಿಧ ದೇಶಗಳಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪ್ರಯಾಣಿಸಲು ಎರಡು ವಿಧಾನಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಒಂದು ದೊಡ್ಡ ಹಡಗುಗಳ ಮೂಲಕ ಸಮುದ್ರ ಮಾರ್ಗದಲ್ಲಿ ತೆರಳುವುದು, ಮತ್ತೊಂದು ವಿಮಾನಯಾನದ ಮೂಲಕ ಅಂದರೆ ಅದು ವಾಯು ಮಾರ್ಗವಾಗಿದೆ. ಇದು ಐಷಾರಾಮಿ, ವೇಗದ ಮತ್ತು ಆರಾಮದಾಯಕವೆಂದು ಪರಿಗಣಿಸಲಾಗಿದೆ. ಹೆಚ್ಚಿನ ಜನರು ಇತರ ದೇಶಗಳಿಗೆ ಹೋಗಲು ವಿಮಾನವನ್ನು ಆಯ್ಕೆ ಮಾಡಲು ಕಾರಣ ಇದುವೇ. ಆದರೆ ಒಂದೇ ಒಂದು ವಿಮಾನ ನಿಲ್ದಾಣವೂ ಇಲ್ಲದ ಹಲವಾರು ದೇಶಗಳು ಜಗತ್ತಿನಲ್ಲಿವೆ ಎಂಬುದು ನಿಮಗೆ ತಿಳಿದಿದೆಯೇ? ವಿಮಾನ ನಿಲ್ದಾಣವಿಲ್ಲದ ಐದು ದೇಶಗಳ ಬಗ್ಗೆ ನಾವು ಇಲ್ಲಿ ಹೇಳುತ್ತೇವೆ.
ಇದನ್ನೂ ಓದಿ: Motorola G32: 17 ಸಾವಿರ ಮೌಲ್ಯದ ಸ್ಮಾರ್ಟ್‌ಫೋನ್ 2 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಲಭ್ಯ
1. ಅಂಡೋರಾ:
ಸ್ಪೇನ್ ಮತ್ತು ಫ್ರಾನ್ಸ್ ನಡುವೆ ನೆಲೆಗೊಂಡಿರುವ ಈ ಸಣ್ಣ ದೇಶವು ಪೈರಿನೀಸ್ ಪರ್ವತಗಳಿಂದ ಯುರೋಪಿನ ಉಳಿದ ಭಾಗಗಳಿಂದ ಕಡಿತಗೊಂಡಿದೆ. ಈ ದೇಶವು ಸಂಪೂರ್ಣವಾಗಿ ಪರ್ವತಗಳ ಮೇಲೆ ನೆಲೆಸಿದೆ. ಇದರ ಎತ್ತರವು 3000 ಅಡಿಗಳಷ್ಟಿದೆ. ಹೀಗಾಗಿ ಈ ದೇಶವು ತನ್ನದೇ ಆದ ಕಾರ್ಯಾಚರಣೆಯ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಇಲ್ಲಿಗೆ ಬರಲು ಹತ್ತಿರದ ವಿಮಾನ ನಿಲ್ದಾಣವೆಂದರೆ ಕ್ಯಾಟಲೋನಿಯಾದ ಅಂಡೋರಾ-ಲಾ ಸಿಯು ವಿಮಾನ ನಿಲ್ದಾಣ. ಇದು ಸುಮಾರು 30 ಕಿಲೋಮೀಟರ್ ದೂರದಲ್ಲಿದೆ.
2. ಲಿಚ್ಟೆನ್‌ಸ್ಟೈನ್
ಲಿಚ್ಟೆನ್‌ಸ್ಟೈನ್ ಪ್ರಿನ್ಸಿಪಾಲಿಟಿಯು ಪರ್ವತ ಪ್ರದೇಶಗಳ ಮಧ್ಯದಲ್ಲಿದೆ. ಇದರ ವಿಸ್ತೀರ್ಣ 160 ಚದರ ಕಿಲೋಮೀಟರ್. ಲಿಚ್ಟೆನ್‌ಸ್ಟೈನ್‌ನ ಸಂಪೂರ್ಣ ಪರಿಧಿಯು 75 ಕಿಲೋಮೀಟರ್‌ಗಳು. ಅದರ ಸಂಕೀರ್ಣ ಸ್ಥಳದಿಂದಾಗಿ, ವಿಮಾನ ನಿಲ್ದಾಣ ನಿರ್ಮಾಣ ಇಲ್ಲಿ ಸಾಧ್ಯವಿಲ್ಲ. ಇಲ್ಲಿಂದ ಪ್ರಯಾಣಬೆಳೆಬೇಕಾದರೆ 120 ಕಿ.ಮೀ ದೂರದಲ್ಲಿರುವ ಜ್ಯೂರಿಚ್ ವಿಮಾನ ನಿಲ್ದಾಣಕ್ಕೆ ಬಸ್ ಅಥವಾ ಕ್ಯಾಬ್ ಮೂಲಕ ಹೋಗಬೇಕು.
3. ವ್ಯಾಟಿಕನ್ ಸಿಟಿ
ವ್ಯಾಟಿಕನ್ ಸಿಟಿ ಪ್ರಪಂಚದಲ್ಲೇ ಅತ್ಯಂತ ಚಿಕ್ಕ ರಾಷ್ಟ್ರ ಎಂದು ಹೇಳಲಾಗುತ್ತದೆ. ಈ ದೇಶದ ವಿಸ್ತೀರ್ಣ 0.44 ಚದರ ಕಿಲೋಮೀಟರ್. ಈ ದೇಶವು ರೋಮ್ ನಡುವೆ ಇದೆ. ಇದಕ್ಕೆ ಸಮುದ್ರ ಮಾರ್ಗವಾಗಲಿ ಅಥವಾ ವಾಯು ಮಾರ್ಗವಾಗಲಿ ಇಲ್ಲ. ವಿಮಾನದಲ್ಲಿ ಪ್ರಯಾಣಿಸಲು, ಜನರು ಫ್ಯೂಮಿಸಿನೊ ಮತ್ತು ಸಿಯಾಂಪಿನೊ ವಿಮಾನ ನಿಲ್ದಾಣಗಳಿಗೆ ಹೋಗಬೇಕು, ಅಲ್ಲಿಗೆ ರೈಲಿನಲ್ಲಿ ತೆರಳಬೇಕು. ಈ ರೈಲ್ವೇ ನಿಲ್ದಾಣಕ್ಕೆ ತೆರಳಲು 30 ನಿಮಿಷಗಳವರೆಗೆ ತೆಗೆದುಕೊಳ್ಳುತ್ತದೆ.
4. ಮೊನಾಕೊ ಪ್ರಿನ್ಸಿಪಾಲಿಟಿ
ಈ ದೇಶದಲ್ಲಿಯೂ ವಿಮಾನ ನಿಲ್ದಾಣವಿಲ್ಲ. ಇದು ರೈಲ್ವೆ ಮೂಲಕ ಇತರ ದೇಶಗಳಿಗೆ ಸಂಪರ್ಕ ಹೊಂದಿದೆ. ಈ ದೇಶದ ಜನಸಂಖ್ಯೆ ಸುಮಾರು 40 ಸಾವಿರ. ಇಲ್ಲಿ ವಿಮಾನ ನಿಲ್ದಾಣವೂ ಇಲ್ಲ. ವಿಮಾನ ಸೇವೆಗಾಗಿ ತನ್ನ ನೆರೆಯ ರಾಷ್ಟ್ರವಾದ ನೈಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ: Smart Discount: ಭರ್ಜರಿ ಡಿಸ್ಕೌಂಟ್ ಮೇಳ: ಕೇವಲ 849 ರೂ.ಗೆ ಖರೀದಿಸಿ 32 ಇಂಚಿನ LED ಟಿವಿ
5. ಸ್ಯಾನ್ ಮರಿನೋ
ಸ್ಯಾನ್ ಮರಿನೋ ವ್ಯಾಟಿಕನ್ ಸಿಟಿ ಮತ್ತು ರೋಮ್‌ಗೆ ಹತ್ತಿರದಲ್ಲಿದೆ. ಈ ದೇಶವು ಇಟಲಿಯಿಂದ ಸುತ್ತುವರೆದಿದೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಇದು ಸಮುದ್ರ ಮಾರ್ಗ ಅಥವಾ ವಾಯು ಮಾರ್ಗದ ಮೂಲಕ ಸಂಪರ್ಕ ಹೊಂದಿಲ್ಲ. ಈ ದೇಶದ ಪರಿಧಿಯು 40 ಕಿಲೋಮೀಟರ್‌ಗಿಂತ ಕಡಿಮೆಯಿರುವುದರಿಂದ ವಿಮಾನ ನಿಲ್ದಾಣವನ್ನು ನಿರ್ಮಿಸಲು ಸ್ಥಳವಿಲ್ಲ. ದೇಶಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ 16 ಕಿಲೋಮೀಟರ್ ದೂರದಲ್ಲಿರುವ ರಿಮಿನಿ. ಇದಲ್ಲದೆ, ಜನರು ವೆನಿಸ್, ಪಿಸಾ, ಫ್ಲಾರೆನ್ಸ್ ಮತ್ತು ಬೊಲೊಗ್ನಾ ವಿಮಾನ ನಿಲ್ದಾಣಗಳ ಆಯ್ಕೆಯನ್ನು ಸಹ ಹೊಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ