LED Light: ಈ ಎಲ್‌ಇಡಿ ಬಲ್ಬ್‌ 25 ರೂ.ಗಿಂತ ಅಗ್ಗದ ಬೆಲೆಗೆ ಲಭ್ಯ!

LED Light: ಸೂರ್ಯಾಸ್ತದ ನಂತರ ಮನೆಯಲ್ಲಿ ವಿದ್ಯುತ್‌ ದೀಪಗಳನ್ನು ಹಚ್ಚುತ್ತೇವೆ. ಇದರಿಂದ ವಿದ್ಯುತ್‌ ಬಿಲ್‌ ಜೊತೆಗೆ ಬಲ್ಬ್‌ಗಳ ಬೆಲೆಯೂ ಕೆಲವರಿಗೆ ದುಬಾರಿ ಎನಿಸುತ್ತದೆ. ಆದರೆ ಕಡಿಮೆ ಕರೆಂಟ್‌ ಬಳಸಿ ಉರಿಯುವ ಜೊತೆಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ಬಲ್ಬ್‌ ಬಗ್ಗೆ ಹೇಳಲಿದ್ದೇವೆ. ಇದು ಮಾರುಕಟ್ಟೆಯಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದೆ. ಅದರ ಬೆಲೆ ಕೂಡ ತುಂಬಾ ಕಡಿಮೆಯಾಗಿದೆ.  

Written by - Chetana Devarmani | Last Updated : Nov 25, 2022, 07:49 PM IST
  • ಕಡಿಮೆ ಬೆಲೆಗೆ ನೈಟ್‌ ಲ್ಯಾಂಪ್‌
  • ವಿದ್ಯುತ್‌ ಬಿಲ್‌ ಕೂಡ ಕಡಿಮೆ
  • ಈ ಬಲ್ಬ್‌ ಬೆಲೆಯೂ ಕಡಿಮೆ
LED Light: ಈ ಎಲ್‌ಇಡಿ ಬಲ್ಬ್‌ 25 ರೂ.ಗಿಂತ ಅಗ್ಗದ ಬೆಲೆಗೆ ಲಭ್ಯ!   title=
ವಿದ್ಯುತ್‌ ದೀಪ

LED Light: ನಿಮ್ಮ ಮನೆಗೆ ನೀವು ವಿದ್ಯುತ್‌ ದೀಪಗಳನ್ನು ಖರೀದಿಸುತ್ತಿದ್ದರೆ ಅವು ದುಬಾರಿಯಾಗಿರುತ್ತವೆ. ಅದರಲ್ಲೂ ನೈಟ್‌ ಲ್ಯಾಂಪ್‌ಗಳಂತೂ ₹1000 ರಿಂದ ₹2000 ರ ನಡುವೆ ಇರುತ್ತವೆ. ಆದರೆ ಇದೀಗ ನೀವು ಅತ್ಯಂತ ಕಡಿಮೆ ಬೆಲೆಯಲ್ಲಿ ಈ ಬಲ್ಬ್‌ ಖರೀದಿಸಬಹುದು. ಇದು ಮಾರುಕಟ್ಟೆಯಲ್ಲಿ ಟ್ರೆಂಡ್‌ ಆಗಿದೆ. ಇದನ್ನು ಜನರು ಅತಿ ಹೆಚ್ಚು ಖರೀದಿಸುತ್ತಿದ್ದಾರೆ. ಅದರ ಬೆಲೆ ಕೇಳಿದರೆ ನೀವು ನಂಬುವುದಿಲ್ಲ. ಇದನ್ನು Amazon ನಿಂದ ಖರೀದಿಸಬಹುದು. 

ಇದನ್ನೂ ಓದಿ : ನೂತನ ಇನ್ನೋವಾ ಹೈಕ್ರಾಸ್ ಬಿಡುಗಡೆ ಮಾಡಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್

ನಾವು ಮಾತನಾಡುತ್ತಿರುವ ನೈಟ್‌ ಲ್ಯಾಂಪ್‌ ಹೆಸರು DASITON Plug in LED Night Light Mini USB LED Light. ಅಮೆಜಾನ್‌ನಿಂದ ಗ್ರಾಹಕರು ಸುಲಭವಾಗಿ ಖರೀದಿಸಬಹುದು. ಇದರ ಬೆಳಕು ಎಷ್ಟು ಅದ್ಭುತವಾಗಿದೆ ಎಂದರೆ ನೀವು ಊಹಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಮನೆ ಅಥವಾ ಕೋಣೆಯಲ್ಲಿ ಸರಿಯಾದ ಬೆಳಕು ಇರುತ್ತದೆ. ಈ ಬಲ್ಬ್‌ ಎರಡು ಬಣ್ಣಗಳಲ್ಲಿ ಬರುತ್ತದೆ. ಒಂದು ಬಿಳಿ ಮತ್ತು ಇನ್ನೊಂದು ಹಳದಿ ಬೆಳಕನ್ನು ಒದಗಿಸುತ್ತದೆ. ನೀವು ಎರಡು ಆಯ್ಕೆಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು.

ವಿಶೇಷತೆ ಏನು ಮತ್ತು ಎಷ್ಟು ವೆಚ್ಚವಾಗಿದೆ? 

ಇದು ಸಾಮಾನ್ಯ ದೀಪವಲ್ಲ, ಆದರೆ ಇದು ಯುಎಸ್ಬಿ ಎಲ್ಇಡಿ ರಾತ್ರಿ ದೀಪವಾಗಿದೆ. ಇದನ್ನು ಸ್ಮಾರ್ಟ್‌ಫೋನ್ ಚಾರ್ಜರ್, ಲ್ಯಾಪ್‌ಟಾಪ್‌ನೊಂದಿಗೆ ಪವರ್ ಬ್ಯಾಂಕ್ ಅಥವಾ ಪವರ್ ಸಾಕೆಟ್‌ಗೆ ಸುಲಭವಾಗಿ ಸಂಪರ್ಕಿಸಬಹುದು. ಹೀಗಾಗಿ ಈ ಬಲ್ಬ್‌ನ್ನು ನೀವು ಆರಾಮವಾಗಿ ಬಳಸಬಹುದು. ಇದು ಗಾತ್ರದಲ್ಲಿಯೂ ತುಂಬಾ ಚಿಕ್ಕದಾಗಿದೆ ಮತ್ತು ಅದರ ಹೊಳಪು ತುಂಬಾ ಹೆಚ್ಚಾಗಿದೆ. ಬೆಲೆಯ ಬಗ್ಗೆ ಹೇಳುವುದಾದರೆ, ಗ್ರಾಹಕರು ಒಂದೇ ಬಲ್ಬ್‌ನ್ನು ಖರೀದಿಸಲು ಸಾಧ್ಯವಿಲ್ಲ. ನೀವು ನಾಲ್ಕು ಬಲ್ಬ್‌ಗಳನ್ನು ಒಟ್ಟಿಗೆ ಖರೀದಿಸಬೇಕು. ಅದರ ಬೆಲೆ ಕೇವಲ ₹94. ಇಂತಹ ಪರಿಸ್ಥಿತಿಯಲ್ಲಿ ಒಂದು ಬಲ್ಬ್ ಬೆಲೆ ₹25ಕ್ಕಿಂತ ಕಡಿಮೆ ಬೆಲೆಯಾದಂತಾಗುತ್ತದೆ. 

ಇದನ್ನೂ ಓದಿ : ಈ ಸೂಪರ್‌ ಸ್ಮಾರ್ಟ್ ವಾಚ್ ಅತಿ ಕಡಿಮೆ ಬೆಲೆಗೆ ಲಭ್ಯ.. ಜೇಬಿನಿಂದ ಫೋನ್ ತೆಗೆಯುವ ಅಗತ್ಯವೇ ಇಲ್ಲ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News