Kabul Airport: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮೂರನೇ ಸ್ಫೋಟ, 10 ಯುಎಸ್ ಕಮಾಂಡೋಗಳು ಸೇರಿದಂತೆ 64 ಸಾವು
ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಬಳಿ ಮೂರನೇ ಬಾಂಬ್ ಸ್ಫೋಟ ವರದಿಯಾಗಿದೆ. ಈ ಬಾಂಬ್ ಸ್ಫೋಟಗಳಲ್ಲಿ 64 ಜನರು ಸಾವನ್ನಪ್ಪಿದ್ದಾರೆ.
ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಬಳಿ ಮೂರನೇ ಬಾಂಬ್ ಸ್ಫೋಟ ವರದಿಯಾಗಿದೆ. ಈ ಬಾಂಬ್ ಸ್ಫೋಟಗಳಲ್ಲಿ 10 ಅಮೆರಿಕನ್ ಸೈನಿಕರು ಸೇರಿದಂತೆ ಒಟ್ಟು 64 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಬಾಂಬ್ ಸ್ಫೋಟದಲ್ಲಿ 52 ಜನರು ಗಾಯಗೊಂಡಿದ್ದಾರೆ ಎಂದು ದೃಢಪಡಿಸಿದರು. ಕಾಬೂಲ್ ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ.
ಅಬ್ಬೆ ಗೇಟ್ ಬಳಿ ದಾಳಿ:
ಅಫಘಾನ್ ಮಾಧ್ಯಮದ ಪ್ರಕಾರ, ಮೊದಲ ಎರಡು ಬಾಂಬ್ ಸ್ಫೋಟಗಳು ಕಾಬೂಲ್ ವಿಮಾನ ನಿಲ್ದಾಣದ ಅಬ್ಬೆ ಗೇಟ್ (Abbey Gate) ಬಳಿ ನಡೆದಿವೆ. ಘಟನೆಯನ್ನು ದೃಢೀಕರಿಸಿದ ಯುಎಸ್ ರಕ್ಷಣಾ ಸಚಿವಾಲಯದ ವಕ್ತಾರರು, ಕಾಬೂಲ್ ವಿಮಾನ ನಿಲ್ದಾಣದ ಬಳಿ ಈ ಸ್ಫೋಟವನ್ನು ನಾವು ದೃಢೀಕರಿಸಿದ್ದೇವೆ. ಪ್ರಸ್ತುತ, ಘಟನೆಯಲ್ಲಿ ಸಾವುನೋವುಗಳ ಬಗ್ಗೆ ಮಾಹಿತಿ ಸ್ಪಷ್ಟವಾಗಿಲ್ಲ. ವಿವರಗಳನ್ನು ಪಡೆದ ನಂತರ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ.
ISIS-K Terror) ಗುಂಪು ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಈ ದಾಳಿ ನಡೆಸಿದೆ. ಈ ಘಟನೆಯ ನಂತರ, ನೆದರ್ಲ್ಯಾಂಡ್ಸ್ ತನ್ನ ನಾಗರಿಕರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಅದೇ ಸಮಯದಲ್ಲಿ, ಪರಿಸ್ಥಿತಿಯನ್ನು ಪರಿಶೀಲಿಸಲು ಬ್ರಿಟನ್ ಹಿರಿಯ ಸಚಿವರು ಮತ್ತು ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದೆ.
ಇದನ್ನೂ ಓದಿ- Afghanistan: ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಾಟರ್ ಬಾಟಲಿಗೆ 3000 ರೂ., ಒಂದು ಪ್ಲೇಟ್ ಅನ್ನಕ್ಕೆ 7500 ರೂ.!
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಈ ಬಾಂಬ್ ಸ್ಫೋಟದ (Kabul Airport Bomb Blast) ಪರಿಣಾಮವು ಪ್ರಪಂಚದಾದ್ಯಂತ ಗೋಚರಿಸುತ್ತದೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಇಸ್ರೇಲ್ ಪ್ರಧಾನಿ ನಾಫ್ತಾಲಿ ಬೆನೆಟ್ ಅವರ ಭೇಟಿಯನ್ನು ಮುಂದೂಡಿದ್ದಾರೆ ಮತ್ತು ಅವರ ರಕ್ಷಣಾ ಸಲಹೆಗಾರರೊಂದಿಗೆ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ತನ್ನ ಇಸ್ರೇಲ್ ಭೇಟಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ. ಕಾಬೂಲ್ ಬಾಂಬ್ ಸ್ಫೋಟದ ನಂತರ ಅಫ್ಘಾನಿಸ್ತಾನದಿಂದ ತನ್ನ ರಾಯಭಾರ ಕಚೇರಿಯನ್ನು ಸ್ಥಳಾಂತರಿಸುವುದಾಗಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಘೋಷಿಸಿದ್ದಾರೆ.
ಕಳೆದ ಒಂದು ವಾರದಿಂದ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸಾವಿರಾರು ಅಫ್ಘಾನ್ ನಾಗರಿಕರನ್ನು ಸ್ಥಗಿತಗೊಳಿಸಲಾಗಿದೆ. ಆದರೆ ವೀಸಾ ಮತ್ತು ಪಾಸ್‌ಪೋರ್ಟ್ ಕೊರತೆಯಿಂದಾಗಿ, ಅವರು ವಿಮಾನ ನಿಲ್ದಾಣದ ಒಳಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ, ತಾಲಿಬಾನ್ ಕೂಡ ಯಾವುದೇ ಅಫ್ಘಾನ್ ಪ್ರಜೆ ದೇಶವನ್ನು ತೊರೆಯಲು ಅನುಮತಿಸುವುದಿಲ್ಲ ಮತ್ತು ಅವರು ತಮ್ಮ ಮನೆಗಳಿಗೆ ಮರಳಬೇಕಾಗುತ್ತದೆ ಎಂದು ಘೋಷಿಸಿದೆ.
ಮೊದಲೇ ದಾಳಿ ಎಚ್ಚರಿಗೆ ನೀಡಿದ್ದ ಅಮೆರಿಕ:
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಈ ಬಾಂಬ್ ಸ್ಫೋಟಕ್ಕೆ (Bomb Blast) 24 ಗಂಟೆಗಳ ಮೊದಲು, ಅಲ್ಲಿ ಭಯೋತ್ಪಾದಕ ದಾಳಿಯ ಸಾಧ್ಯತೆಯ ಬಗ್ಗೆ ಅಮೆರಿಕ (America) ಎಚ್ಚರಿಕೆ ನೀಡಿತ್ತು. ಆಗಸ್ಟ್ 25 ರಂದು, ವಿಮಾನ ನಿಲ್ದಾಣದ ಹೊರಗೆ ಪ್ರಮುಖ ಭದ್ರತಾ ಬೆದರಿಕೆಗಳಿವೆ ಎಂದು ಎಚ್ಚರಿಸಿದ್ದ ಯುಎಸ್ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ತನ್ನ ಎಲ್ಲಾ ನಾಗರಿಕರನ್ನು ವಿಮಾನ ನಿಲ್ದಾಣದಿಂದ ಆದಷ್ಟು ಬೇಗ ಹೊರಹೋಗುವಂತೆ ಸೂಚಿಸಿತು.
ಇದನ್ನೂ ಓದಿ- Taliban-ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ದಾಳಿ ಬೆದರಿಕೆ ಬಗ್ಗೆ ಯುಎಸ್ ಎಚ್ಚರಿಸಿದೆ
ಅದೇ ಸಮಯದಲ್ಲಿ, ಗುರುವಾರ ಸಂಜೆ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಬಾಂಬ್ ಸ್ಫೋಟದ ನಂತರ, ಅಲ್ಲಿ ಹೆಚ್ಚು ಸ್ಫೋಟಗಳು ಸಂಭವಿಸಬಹುದು ಎಂದು ಫ್ರಾನ್ಸ್ ಕೂಡ ಎಚ್ಚರಿಸಿತ್ತು. ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅಫ್ಘಾನಿಸ್ತಾನದ ಫ್ರೆಂಚ್ ರಾಯಭಾರಿ ಹೇಳಿದ್ದಾರೆ. ಅಲ್ಲಿ ಇನ್ನೊಂದು ಸ್ಫೋಟ ಸಂಭವಿಸಬಹುದು ಎಂದೂ ಕೂಡ ಹೇಳಿತ್ತು. ಫ್ರೆಂಚ್ ರಾಯಭಾರಿ ಎಚ್ಚರಿಕೆಯ ಕೆಲವೇ ನಿಮಿಷಗಳಲ್ಲಿ, ವಿಮಾನ ನಿಲ್ದಾಣದ ಹೊರಗೆ ಎರಡನೇ ಸ್ಫೋಟ ಸಂಭವಿಸಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ