Afghanistan: ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಾಟರ್ ಬಾಟಲಿಗೆ 3000 ರೂ., ಒಂದು ಪ್ಲೇಟ್ ಅನ್ನಕ್ಕೆ 7500 ರೂ.!

ತಾಲಿಬಾನ್‌ಗಳಿಗೆ ಹೆದರಿ ಆಫ್ಘನ್ನರು ದೇಶವನ್ನು ತೊರೆಯುವ ಭರವಸೆಯಿಂದ ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪುತ್ತಿದ್ದಾರೆ. ಆದರೆ ಇಲ್ಲಿ ಅವರು ಹೊಸ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಆಹಾರ-ಪಾನೀಯಗಳಿಗೆ ಕೇಳುತ್ತಿರುವ ಬೆಲೆ ಎಷ್ಟೆಂದು ತಿಳಿದರೆ ಆಘಾತವಾಗುತ್ತದೆ.

Written by - Yashaswini V | Last Updated : Aug 26, 2021, 02:19 PM IST
  • ಒಂದು ಪ್ಲೇಟ್ ಪುಲಾವ್ ಬೆಲೆ 7500 ರೂ.
  • ಜನರು ಹಸಿವಿನಿಂದ ಮತ್ತು ಬಾಯಾರಿಕೆಯಿಂದ ಪರದಾಡುವಂತಾಗಿದೆ
  • ಸೈನಿಕರಿಗೆ ಎಲ್ಲರಿಗೂ ಸಹಾಯ ಮಾಡುವುದು ಸಾಧ್ಯವಾಗುತ್ತಿಲ್ಲ
Afghanistan: ಕಾಬೂಲ್ ವಿಮಾನ ನಿಲ್ದಾಣದಲ್ಲಿ  ವಾಟರ್ ಬಾಟಲಿಗೆ 3000 ರೂ., ಒಂದು ಪ್ಲೇಟ್ ಅನ್ನಕ್ಕೆ 7500 ರೂ.! title=
Kabul Airport

ಕಾಬೂಲ್: ತಾಲಿಬಾನ್ ಭಯೋತ್ಪಾದನೆಯಿಂದ ತಪ್ಪಿಸಿಕೊಳ್ಳಲು ಅಫ್ಘಾನಿಸ್ತಾನವನ್ನು ತೊರೆಯುವ ಭರವಸೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣವನ್ನು ತಲುಪಿರುವ ಜನರು ಹಸಿವು ಮತ್ತು ಬಾಯಾರಿಕೆಯಿಂದ ಸಾಯುವಂತಾಗಿದೆ. ವಿಮಾನ ನಿಲ್ದಾಣದ ಹೊರಗೆ ಆಹಾರ ಮತ್ತು ಪಾನೀಯ ವಸ್ತುಗಳನ್ನು ಹಲವು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದು ಮಾತ್ರವಲ್ಲ, ಅಂಗಡಿಯವರು ಅಫಘಾನ್ ಕರೆನ್ಸಿಯ ಬದಲಾಗಿ ಡಾಲರ್‌ಗಳನ್ನು ಬೇಡುತ್ತಿದ್ದಾರೆ. ಅಮೇರಿಕನ್ ಮತ್ತು ಬ್ರಿಟಿಷ್ ಸೈನಿಕರು ಅಫ್ಘಾನರಿಗೆ ಸಹಾಯ ಮಾಡುತ್ತಿದ್ದರೂ, ಪ್ರತಿಯೊಬ್ಬ ವ್ಯಕ್ತಿಗೂ ಆಹಾರ ಮತ್ತು ನೀರನ್ನು ಪಡೆಯುವುದು ಕಷ್ಟಕರವಾಗಿದೆ.

ಡಾಲರ್‌ನಲ್ಲಿ ಪಾವತಿಸಬೇಕಾದ ಬೆಲೆ:
ಕಾಬೂಲ್ ವಿಮಾನ ನಿಲ್ದಾಣದ (Kabul Airport) ಹೊರಗೆ, ನೀರಿನ ಬಾಟಲಿಯನ್ನು $ 40 ಕ್ಕೆ ಅಂದರೆ ಸುಮಾರು 3000 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ, ಒಂದು ಪ್ಲೇಟ್ ಅನ್ನದ ಬೆಲೆ $ 100 ಕ್ಕೆ ಏರಿದೆ. ಇದು ಭಾರತೀಯ ಕರೆನ್ಸಿಯ ಪ್ರಕಾರ ಸುಮಾರು 7500 ರೂಪಾಯಿಗಳು. ಅತ್ಯಂತ ಅಚ್ಚರಿಯ ವಿಷಯವೆಂದರೆ ಅಂಗಡಿಯವರು ಅಫ್ಘಾನಿಸ್ತಾನದ ಕರೆನ್ಸಿಗೆ ಬದಲಾಗಿ ಡಾಲರ್‌ಗಳಲ್ಲಿ ಪಾವತಿ ಮಾಡಲು ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ- Taliban-ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕ ದಾಳಿ ಬೆದರಿಕೆ ಬಗ್ಗೆ ಯುಎಸ್ ಎಚ್ಚರಿಸಿದೆ

ಜನಸಾಮಾನ್ಯರಿಗೆ ಸಹಾಯ ಮಾಡುತ್ತಿರುವ ಸೈನ್ಯ:
ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೂರಾರು ಜನರು ಅಫ್ಘಾನಿಸ್ತಾನವನ್ನು(Afghanistan) ತೊರೆಯಲು ಕಾಯುತ್ತಿದ್ದಾರೆ. ಈಗ ಈ ಜನರು ಹಸಿವು ಮತ್ತು ಬಾಯಾರಿಕೆಯಿಂದ ಸಾಯುವವಂತಾಗಿದೆ. ಅವರು ಏನನ್ನೂ ತಿನ್ನದೆ ಅಥವಾ ಕುಡಿಯದೆ ಬಿಸಿಲಿನಲ್ಲಿ ಹೆಣಗಾಡುತ್ತಿದ್ದಾರೆ. ಇದರಿಂದಾಗಿ ಕೆಲವರು ಪ್ರಜ್ಞಾಹೀನರಾಗುತ್ತಿದ್ದಾರೆ. ಇದರ ಹೊರತಾಗಿಯೂ, ತಾಲಿಬಾನ್ ಅವರಿಗೆ ಸಹಾಯ ಮಾಡುವ ಬದಲು ಅವರ ಸಂಕಷ್ಟವನ್ನು ಹೆಚ್ಚಿಸಿದೆ. ಈ ಕಷ್ಟದ ಸಮಯದಲ್ಲಿ ಅಮೆರಿಕ ಮತ್ತು ಬ್ರಿಟಿಷ್ ಸೈನಿಕರು ಆಫ್ಘನ್ನರಿಗೆ ಸಹಾಯ ಮಾಡುತ್ತಿದ್ದಾರೆ. ಸೈನಿಕರು ವಿಮಾನ ನಿಲ್ದಾಣದ ಬಳಿ ತಾತ್ಕಾಲಿಕ ಮನೆಗಳನ್ನು ನಿರ್ಮಿಸುವ ಮೂಲಕ ನಿವಾಸಿಗಳಿಗೆ ನೀರಿನ ಬಾಟಲಿಗಳು ಮತ್ತು ಆಹಾರವನ್ನು ನೀಡುತ್ತಿದ್ದಾರೆ. ಇದಲ್ಲದೇ, ಸೈನಿಕರು ಅಫ್ಘಾನಿಸ್ತಾನದ ಚಿಕ್ಕ ಮಕ್ಕಳಿಗೆ ಚಿಪ್ಸ್ ಪ್ಯಾಕೆಟ್ಗಳನ್ನು ವಿತರಿಸುವ ದೃಶ್ಯಗಳು ಕಂಡು ಬರುತ್ತಿವೆ.

ಕೆಲವೇ ದಿನಗಳಲ್ಲಿ ಮಿಷನ್ ಹೇಗೆ ಪೂರ್ಣಗೊಳ್ಳುತ್ತದೆ?
ಮಾಹಿತಿಯ ಪ್ರಕಾರ, ಯುಎಸ್ ಕಳೆದ ಹತ್ತು ದಿನಗಳಲ್ಲಿ 70,700 ಜನರನ್ನು ಅಫ್ಘಾನಿಸ್ತಾನದಿಂದ ಸ್ಥಳಾಂತರಿಸಿದೆ. ಇದರ ಹೊರತಾಗಿಯೂ, ಹೆಚ್ಚಿನ ಸಂಖ್ಯೆಯ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇನ್ನೂ ಸಿಲುಕಿಕೊಂಡಿದ್ದಾರೆ. ಅಫ್ಘಾನಿಸ್ತಾನದ 2.5 ಲಕ್ಷ ಜನರು ತಾಲಿಬಾನ್‌ನಿಂದ ಹೆಚ್ಚು ಅಪಾಯದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಕೇವಲ 60 ಸಾವಿರ ಜನರು ಅದರ ಹಿಡಿತದಿಂದ ಪಾರಾಗಲು ಸಾಧ್ಯವಾಗಿದೆ. ಆಗಸ್ಟ್ 31 ರೊಳಗೆ ಕಾಬೂಲ್ ನಿಂದ ಹೊರಹೋಗುವಂತೆ ವಿದೇಶಿ ಪಡೆಗಳಿಗೆ ತಾಲಿಬಾನ್ ಆದೇಶಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಕೆಲವೇ ದಿನಗಳಲ್ಲಿ ಸುಮಾರು 2 ಲಕ್ಷ ಜನರನ್ನು ಅಲ್ಲಿಂದ ಸ್ಥಳಾಂತರಿಸುವುದು ಕಷ್ಟ.

ಇದನ್ನೂ ಓದಿ- Operation Devi Shakti: IAF ವಿಮಾನದಲ್ಲಿ ಕಾಬೂಲ್‌ನಿಂದ ದೆಹಲಿಗೆ ಪ್ರಯಾಣಿಸಿದ 24 ಭಾರತೀಯರು ಮತ್ತು 11 ನೇಪಾಳ್ ನಾಗರೀಕರು

ತಾಲಿಬಾನಿ ಅವರನ್ನು ವಿಮಾನ ನಿಲ್ದಾಣ ತಲುಪದಂತೆ ತಡೆದರು:
ಅಫ್ಘಾನಿಸ್ತಾನದ ಆಕ್ರಮಣದೊಂದಿಗೆ, ತಾಲಿಬಾನ್ ಕ್ರೌರ್ಯದ ಕಥೆಗಳು ಪ್ರತಿದಿನ ಮುಂಚೂಣಿಗೆ ಬರುತ್ತಿವೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ತಾಲಿಬಾನ್ ನಿಂದ ಹೆಚ್ಚು ಕಿರುಕುಳಕ್ಕೊಳಗಾಗುತ್ತಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಅಮೆರಿಕ ಮತ್ತು ಬ್ರಿಟನ್‌ನ ಸೈನಿಕರು ಇದ್ದರೂ, ಅದನ್ನು ಹೊರಗಿನಿಂದ ತಾಲಿಬಾನ್‌ಗಳು ಸುತ್ತುವರಿದಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ತಾಲಿಬಾನ್ ಹೋರಾಟಗಾರರು ಕೂಡ ಇದ್ದಾರೆ. ಅವರು ಜನರನ್ನು ವಿಮಾನ ನಿಲ್ದಾಣ ತಲುಪದಂತೆ ತಡೆಯುತ್ತಿದ್ದಾರೆ ಮತ್ತು ಅಲ್ಲಿಗೆ ತಲುಪಿದವರಿಗೂ ಬೆದರಿಕೆ ಹಾಕಲಾಗುತ್ತಿದೆ ಎಂದು ವರದಿಯಾಗಿದೆ. ನೀವು ಅಮೆರಿಕದಿಂದ ಸಹಾಯ ಪಡೆಯುವ ಮೂಲಕ ಸಮುದಾಯವನ್ನು ಏಕೆ ಅಪಖ್ಯಾತಿಗೊಳಿಸುತ್ತಿದ್ದೀರಿ? ಎಂದು ಭಯೋತ್ಪಾದಕರು ಜನರಿಗೆ ಹೇಳುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News