ಇಂಗ್ಲೆಂಡಿನ ಹುಡುಗಿಯೊಬ್ಬಳು ತನ್ನ ವಿಚಿತ್ರ ಜೀವನಶೈಲಿಯಿಂದ ಸುದ್ದಿಯಲ್ಲಿದ್ದಾಳೆ. ಅವಳು ಆದಿಮಾನವನ (Modern day cave woman) ಹಾಗೆ ಬದುಕುವ ರೂಢಿ ಮಾಡಿಕೊಂಡಿದ್ದಾಳೆ. ಈ ಕಾರಣಕ್ಕಾಗಿ, ಅವಳು ದಾರಿಯಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುತ್ತಾಳೆ. ಇದಲ್ಲದೆ, ಅವಳು ಉಪಕರಣಗಳನ್ನು ತಯಾರಿಸಲು ಪ್ರಾಣಿಗಳ ಮೂಳೆಗಳನ್ನು ಬಳಸುತ್ತಾಳೆ. ಈ ಹುಡುಗಿ ಇಂಗ್ಲೆಂಡ್‌ನ ಎಸ್ಸೆಕ್ಸ್‌ನಲ್ಲಿ (Essex, England) ವಾಸಿಸುತ್ತಾಳೆ.


COMMERCIAL BREAK
SCROLL TO CONTINUE READING

ಸಾರಾ ಡೇ (Sarah Day) ಎಂಬ ಹೆಸರಿನ 34 ವರ್ಷದ ಈ ಯುವತಿ  ನೋಟದಲ್ಲಿ ಸಾಮಾನ್ಯ ಮಾನವರಂತೆಯೇ ಕಾಣುತ್ತಾಳೆ. ಅವಳು ಶಾಲೆಯಲ್ಲಿ ಮಕ್ಕಳಿಗೆ ಇತಿಹಾಸ ವಿಷಯವನ್ನು ಕಲಿಸುತ್ತಾಳೆ. ತನ್ನ ವಿದ್ಯಾರ್ಥಿಗಳಿಗೆ ಬದುಕುಳಿಯುವ ಕೌಶಲ್ಯಗಳನ್ನು ಕಲಿಸುತ್ತಾಳೆ. ಅವಳು ಮಕ್ಕಳಿಗೆ ಪುಸ್ತಕದ ಜ್ಞಾನವನ್ನು ನೀಡುವುದಲ್ಲದೆ, ಪ್ರಾಣಿಗಳನ್ನು ಬೇಟೆಯಾಡಲು ಕಲಿಸುತ್ತಾಳೆ.


ಇಲಿ-ಪಾರಿವಾಳ ಹಿಡಿದು ತಿನ್ನುವುದು:


ಇದಕ್ಕಾಗಿ ಸಾರಾ ಸ್ವತಃ ಮೊದಲು ಪ್ರಾಣಿಗಳನ್ನು ಬೇಟೆಯಾಡುತ್ತಾಳೆ. ಇದಲ್ಲದೆ, ಅವಳು ಕಾಡಿನ ಪ್ರದೇಶಗಳಲ್ಲಿ ಸಮಯ ಕಳೆಯುತ್ತಾಳೆ. ಸಾರಾ ಪ್ರಕಾರ, ಅವಳು ವಾರಕ್ಕೊಮ್ಮೆ ಬೇಟೆಯನ್ನು ಹಿಡಿಯುತ್ತಾಳೆ. ಅವಳು ಇಲಿ, ಪಾರಿವಾಳ, ಅಳಿಲುಗಳನ್ನು ಹಿಡಿದು ಕೊಂದು ನಂತರ ಅವುಗಳನ್ನು ಬೇಯಿಸಿ ತಿನ್ನುತ್ತಾಳೆ. ಸಾರಾ ಈ ಪ್ರಾಣಿಗಳ ಚರ್ಮ ಮತ್ತು ಮೂಳೆಗಳನ್ನು ಸಹ ಬಳಸುತ್ತಾಳೆ.


ಜಿಂಕೆ, ಅಳಿಲುಗಳಂತಹ ಪ್ರಾಣಿಗಳು ಚಳಿಗಾಲದಲ್ಲಿ ತನ್ನ ಫ್ರೀಜರ್‌ನಲ್ಲಿರುತ್ತವೆ ಎಂದು ಸಾರಾ ಹೇಳುತ್ತಾಳೆ. ಅವಳು ಈ ಪ್ರಾಣಿಗಳನ್ನು ಉತ್ಸಾಹದಿಂದ ತಿನ್ನುತ್ತಾಳೆ. ಇವರಿಗೆ ಅಳಿಲು ಮಾಂಸದಷ್ಟೇ ಸಿಹಿ ಇಲಿ ಮಾಂಸವೂ ಇಷ್ಟ. ಸಾರಾ ಅವರ ವಿಚಿತ್ರ ಜೀವನಶೈಲಿಯಿಂದಾಗಿ, ಜನರು ಅವಳನ್ನು ಆಧುನಿಕ 'ಆದಿ ಮಾನವ' ಎಂದು ಕರೆಯುತ್ತಾರೆ. ಸಾರಾ ಪ್ರಾಣಿಗಳ ಮೂಳೆಗಳನ್ನು ಬಳಸಿ ಉಪಕರಣಗಳನ್ನು ತಯಾರಿಸುತ್ತಾಳೆ.


ಬಾಲ್ಯದಿಂದಲೂ ಆದಿಮಾನವನಂತೆಯೇ ಜೀವನ ನಡೆಸುವ ಹವ್ಯಾಸ:


ಸಾಮಾನ್ಯ ಜನರಂತೆ, ತಾನು ಕೂಡ ಶಾಪಿಂಗ್‌ಗೆ ಹೋಗುತ್ತಾಳೆ ಮತ್ತು ನಗರದಲ್ಲಿ ಮನೆ ಹೊಂದಿದ್ದಾಳೆ. ಆದರೆ ತಾನು ಕಾಡಿನ ಪ್ರದೇಶಗಳಿಗೆ ಹೋಗುವುದನ್ನು ಇಷ್ಟಪಡುತ್ತಾಳೆ ಸಾರಾ. ಜಿಂಕೆ ಚರ್ಮವನ್ನು ಬಳಸಿ ಸಾರಾ ತನಗಾಗಿ ಸ್ಲೀಪಿಂಗ್ ಬ್ಯಾಗ್ ತಯಾರಿಸಿಕೊಂಡಿರುವುದು ಅತ್ಯಂತ ಅಚ್ಚರಿಯ ಸಂಗತಿ. ಅವರು ಬಾಲ್ಯದಿಂದಲೂ ಆದಿಮಾನವರಂತೆ (primitive) ಬದುಕಲು ಇಷ್ಟಪಡುತ್ತಿದ್ದರು.


ಇದನ್ನೂ ಓದಿ: Flipkart Big Saving Days Sale: ಫ್ಲಿಪ್‌ಕಾರ್ಟ್ ನಲ್ಲಿ ಕೇವಲ 19,445 ರೂ.ಗೆ ಪಡೆಯಿರಿ iPhone 13


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.