ವೆಲಿಂಗ್ಟನ್ (ನ್ಯೂಜಿಲ್ಯಾಂಡ್): Tonga's Hunga Tonga Volcano - ಪಾಲಿನೇಷ್ಯನ್ ದೇಶದ ಟೊಂಗಾ ಬಳಿ ಸಮುದ್ರದಲ್ಲಿ ಭಾರಿ ಜ್ವಾಲಾಮುಖಿ (Most Violent Volcano) ಸ್ಫೋಟ ಸಂಭವಿಸಿದ್ದು, ನಂತರ ಭೀಕರ ಸಮುದ್ರದ ಅಲೆಗಳು ಕರಾವಳಿಯತ್ತ  ಸಾಗುತ್ತಿರುವುದನ್ನು ಗಮನಿಸಲಾಗಿದೆ. ಇದನ್ನು ತಪ್ಪಿಸಲು ಜನರು ಎತ್ತರದ ಸ್ಥಳಗಳಿಗೆ ಓಡುತ್ತಿರುವುದು ಕಂಡು ಬಂದಿದೆ. ಸಮುದ್ರದಲ್ಲಿ ಭೀಕರ ಜ್ವಾಲಾಮುಖಿ ಸ್ಫೋಟದ ನಂತರ ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿದೆ. ಸೈರನ್ ಎಚ್ಚರಿಕೆ ವ್ಯವಸ್ಥೆ ಕೆಲಸ ಮಾಡದಿದ್ದಾಗ ಚರ್ಚ್‌ನಿಂದ ಗಂಟೆ ಬಾರಿಸುವ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗಿದೆ.


COMMERCIAL BREAK
SCROLL TO CONTINUE READING

Most Violent Volcano Eruption Captured On Satellite - ಈ ಪುಟ್ಟ ದೇಶದೊಂದಿಗೆ ಸಂಪರ್ಕ ಮತ್ತು ಸಂವಹನ ಸೇವೆಗಳು ಅಷ್ಟೊಂದು ಮುಂದುವರಿದಿಲ್ಲವಾದ್ದರಿಂದ, ಜ್ವಾಲಾಮುಖಿ ಸ್ಫೋಟ ಮತ್ತು ಸಮುದ್ರದಲ್ಲಿನ ಎತ್ತರದ ಅಲೆಗಳಿಂದ ಉಂಟಾದ ಹಾನಿಯ ಕುರಿತು ಸದ್ಯಕ್ಕೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.  ಆದರೆ ಅದರ ಅನೇಕ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಎತ್ತರದ ಅಲೆಗಳು ಏಳುತ್ತಿರುವುದನ್ನು ಸಮುದ್ರವನ್ನು ಕಾಣಬಹುದು. ಕರಾವಳಿ ಪ್ರದೇಶಗಳಲ್ಲಿನ ಮನೆಗಳು ಮತ್ತು ಇತರ ಕಟ್ಟಡಗಳ ಸುತ್ತಲೂ ನೀರಿನ ಬಲವಾದ ಅಲೆಗಳು ಗೋಚರಿಸುತ್ತಿವೆ. 


ಇದನ್ನೂ ಓದಿ-ಡಿಯೋಡ್ರೆಂಟ್ ಬಳಕೆಯಿಂದ ಬ್ರೆಸ್ಟ್ ಕ್ಯಾನ್ಸರ್! ನೀವೂ ಬಳಸುತ್ತಿದ್ದರೆ ಈ ವಿಷಯ ನಿಮಗೆ ತಿಳಿದಿರಲಿ


... ಮತ್ತು ಏಕಾಏಕಿ ಕತ್ತಲೆ ಆವರಿಸಿ ಬಿಟ್ಟಿದೆ
Dr. Fakyloetong Taumoefolau ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಜ್ವಾಲಾಮುಖಿ ಸ್ಫೋಟದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಸಮುದ್ರದ ಅಲೆಗಳು ಕರಾವಳಿಯನ್ನು ದಾಟಿ ವಸತಿ ಪ್ರದೇಶಗಳಿಗೆ ಚಲಿಸುವುದನ್ನು ಕಾಣಬಹುದು. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡ ಅವರು 'ನಿಜವಾಗಿಯೂ ಜ್ವಾಲಾಮುಖಿ ಸ್ಫೋಟದ ಶಬ್ದವನ್ನು ಕೇಳಬಹುದು, ಅದು ತುಂಬಾ ಉಗ್ರವಾಗಿ ಧ್ವನಿಸುತ್ತದೆ. ಬೂದಿ ಮತ್ತು ಸಣ್ಣ ಉಂಡೆಗಳು ಸುರಿಯುತ್ತಿವೆ, ಆಕಾಶದಲ್ಲಿ ಕತ್ತಲೆ ಆವರಿಸಿದೆ' ಎಂದಿದ್ದಾರೆ. 


ಮಾರಾಟದ ವಿಷಯದಲ್ಲಿ ಎಲ್ಲಾ ದಾಖಲೆ ಮುರಿದ Dolo-650 ಕೊವಿಡ್ ಕಾಲದ ಭಾರತೀಯರ ನೆಚ್ಚಿನ ಸ್ನಾಕ್ಸ್


ಸ್ಥಳೀಯ ಮಾಧ್ಯಮಗಳು ಪ್ರಕಟಿಸಿರುವ ವರದಿಗಳ ಪ್ರಕಾರ ಸಮುದ್ರದಲ್ಲಿ ಈ ಜ್ವಾಲಾಮುಖಿ ಸ್ಫೋಟ ಸಂಭವಿಸುತ್ತಿದ್ದಂತೆ. ಟೊಂಗಾ ಪೊಲೀಸರು ಮತ್ತು ಭದ್ರತಾ ಪಡೆಗಳ ಒಂದು ತಂಡ ಸಮುದ್ರದ ಕಡಲ ತೀರದಲ್ಲಿರುವ ದೇಶದ ರಾಜ ಟೌಪೋ VI ನನ್ನು ರಕ್ಷಿಸಿ. ಎತ್ತರದಲ್ಲಿರುವ ಒಂದು ಸುರಕ್ಷಿತ ಪ್ರದೇಶಕ್ಕೆ ಸಾಗಿಸಿದ್ದಾರೆ. ಶುಕ್ರವಾರ ಮುಂಜಾನೆ ಜ್ವಾಲಾಮುಖಿ ಸಕ್ರಿಯಗೊಂಡ ನಂತರ, ಭಾರೀ ಸ್ಫೋಟ, ಗುಡುಗು ಮತ್ತು ಸಿಡಿಲಿನ ಘಟನೆಗಳು ಸಂಭವಿಸಿವೆ. ಉಪಗ್ರಹದಿಂದ ಪಡೆದ ಚಿತ್ರಗಳು ಆಕಾಶದಲ್ಲಿ ಸುಮಾರು 20 ಕಿಲೋಮೀಟರ್ ಎತ್ತರದವರೆಗೆ ಹೊಗೆಯನ್ನು ತೋರಿಸಿವೆ.


ಇದನ್ನೂ ಓದಿ-EPF Withdrawal: ಈಗ ನೀವು ತುರ್ತು ಪರಿಸ್ಥಿತಿಯಲ್ಲಿ ಎರಡು ಬಾರಿ ನಿಮ್ಮ EPF ಖಾತೆಯಿಂದ ಹಣ ಪಡೆಯಬಹುದು, ಇಲ್ಲಿದೆ ಸಂಪೂರ್ಣ ವಿವರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.