India's Favourite Snak In Covid Wave: ಮಾರಾಟದ ವಿಷಯದಲ್ಲಿ ಎಲ್ಲಾ ದಾಖಲೆಗಳನ್ನು ಪುಡಿ-ಪುಡಿ ಮಾಡಿದ Dolo-650, ಕೊರೊನಾ ಕಾಲದಲ್ಲಿ ಭಾರತೀಯರ ನೆಚ್ಚಿನ 'ಸ್ನ್ಯಾಕ್ಸ್'

Dolo 650 Tablet: ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಡೋಲೋ (Dolo 650) ಮಾತ್ರೆಗಳು ಅತಿ ಹೆಚ್ಚು ಬಳಕೆಯಾಗಿದ್ದು, ಮಾರ್ಚ್ 2020 ರಿಂದ ರೂ 567 ಕೋಟಿ ಮೌಲ್ಯದ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡಲಾಗಿದೆ.  

Written by - Nitin Tabib | Last Updated : Jan 16, 2022, 12:49 PM IST
  • ಭಾರತದಲ್ಲಿ ಕಳೆದ ಒಂದು ವರ್ಷದಲ್ಲಿ ಡೋಲೋ ಮಾತ್ರೆಗಳು ಅತಿ ಹೆಚ್ಚು ಬಳಕೆಯಾಗಿವೆ,
  • ಮಾರ್ಚ್ 2020 ರಿಂದ ರೂ 567 ಕೋಟಿ ಮೌಲ್ಯದ ಟ್ಯಾಬ್ಲೆಟ್‌ಗಳನ್ನು ಮಾರಾಟ ಮಾಡಲಾಗಿದೆ.
  • ಮಾರಾಟದ ವಿಷಯದಲ್ಲಿ ಕ್ಯಾಲ್ಪಾಲ್ ಹಾಗೂ ಸುಮೋ ಎಲ್ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
India's Favourite Snak In Covid Wave: ಮಾರಾಟದ ವಿಷಯದಲ್ಲಿ ಎಲ್ಲಾ ದಾಖಲೆಗಳನ್ನು ಪುಡಿ-ಪುಡಿ ಮಾಡಿದ Dolo-650, ಕೊರೊನಾ ಕಾಲದಲ್ಲಿ ಭಾರತೀಯರ ನೆಚ್ಚಿನ 'ಸ್ನ್ಯಾಕ್ಸ್' title=
India's Favourite Snak In Covid Wave (File Photo)

Dolo 650 Sale: ಕಳೆದ ಒಂದು ವರ್ಷದಲ್ಲಿ ತಲೆನೋವು, ದೇಹ ನೋವು ಮತ್ತು ಜ್ವರವನ್ನು ನಿವಾರಿಸಲು ನೀವು ಯಾವ ಮಾತ್ರೆ ಬಳಸಿದ್ದೀರಿ? ನೆನಪಿಲ್ಲದಿದ್ದರೂ ಪರವಾಗಿಲ್ಲ. ನಿಮ್ಮ ಮನಸ್ಸಿನ ಮೇಲೆ ಹೆಚ್ಚು ಒತ್ತಡ ಹೇರುವ ಅಗತ್ಯವಿಲ್ಲ. ನೀವು ಯಾವ ಮಾತ್ರೆ ಬಳಸಿರಬೇಕು ಎಂದು ನಾವು ನಿಮಗೆ ಹೇಳುತ್ತೇವೆ. ಒಂದೋ ನೀವು ಕ್ರೋಸಿನ್ (Crocine) ಅಥವಾ ಡೋಲೋ 650 ತೆಗೆದುಕೊಂಡಿರಬೇಕು. ಈ ಅವಧಿಯಲ್ಲಿ ಇಡೀ ಭಾರತ ಯಾವ ಮಾತ್ರೆ ಬಳಸಿದೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ. ಹೌದು, ಸ್ನೇಹಿತರೇ, ಡೊಲೊ 650 ಕಳೆದ ಒಂದು ವರ್ಷದಲ್ಲಿ ಹೆಚ್ಚು ಬಳಕೆಯಾದ ಟ್ಯಾಬ್ಲೆಟ್ ಆಗಿದೆ.

Dolo 650 ಮಾರ್ಚ್ 2020 ರಿಂದ 567 ಕೋಟಿ ರೂಪಾಯಿ ಗಳಿಸಿದೆ
567 ಕೋಟಿ ಮೌಲ್ಯದ ಡೋಲೋ 650 ಟ್ಯಾಬ್ಲೆಟ್‌ಗಳನ್ನು ಮಾರ್ಚ್ 2020 ರಿಂದ ಮಾರಾಟ ಮಾಡಲಾಗಿದೆ. ಅಷ್ಟೇ ಅಲ್ಲ, ಈ ಮಾತ್ರೆಯನ್ನು ಕರೋನಾ (Covid-19) ಅವಧಿಯಲ್ಲಿ ನೆಚ್ಚಿನ 'ಸ್ನಾಕ್' ಎಂದು ಕರೆಯಲಾಗುತ್ತಿದೆ. ಇದು ಒಂದು ವರ್ಷದಲ್ಲಿ ತುಂಬಾ ಮಾರಾಟಕ್ಕೆ ಒಳಗಾಗಿದೆ. ಕಳೆದ ವಾರ #Dolo650 ಒಂದು ಮೀಮ್ ಫೆಸ್ಟ್‌ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿತ್ತು. ಈ ಅವಧಿಯಲ್ಲಿ ಈ ಮಾತ್ರೆ ಏಕೆ ಇಷ್ಟೊಂದು ಬಳಕೆಯಾಗಿದೆ ಅಥವಾ ವೈದ್ಯರು ಏಕೆ ಈ ಮಾತ್ರೆ ತೆಗೆದುಕೊಳ್ಳುವಂತೆ ರೋಗಿಗಳಿಗೆ ಸೂಚಿಸಿದ್ದಾರೆ? ಎಂಬುದನ್ನು ನೀವು ಯೋಚಿಸುತ್ತಿರಬಹುದು.

ಇದನ್ನೂ ಓದಿ-LPG Cylinder : LPG ಬಳಕೆದಾರರ ಗಮನಕ್ಕೆ : ಸಿಲಿಂಡರ್ ತೂಕ ಇಳಿಸಲು ಕೇಂದ್ರ ಸರ್ಕಾರ ಸಿದ್ಧತೆ!

ಜನವರಿ 2020 ರಿಂದ ಪ್ಯಾರೆಸಿಟಮಾಲ್ ಮಾರಾಟವನ್ನು ನೋಡಿದರೆ, ಡೋಲೋ 650 ಮಾರಾಟದ ವಿಷಯದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ತಿಳಿದುಬಂದಿದೆ. ಮಾರಾಟದ ವಿಷಯದಲ್ಲಿ, ಕ್ಯಾಲ್ಪಾಲ್ (Calpol) ಮತ್ತು ಸುಮೋ ಎಲ್ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿವೆ. ಭಾರತದಲ್ಲಿ ಪ್ಯಾರೆಸಿಟಮಾಲ್‌ನ ಒಟ್ಟು 37 ಬ್ರಾಂಡ್‌ಗಳಿವೆ, ಇವುಗಳ ಮಾರಾಟವು ದೇಶದ ವಿವಿಧ ಪ್ರದೇಶಗಳಲ್ಲಿ ಅತ್ಯಧಿಕವಾಗಿದೆ. ಡೋಲೋ 650 ಅನ್ನು ಬೆಂಗಳೂರಿನ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್ ತಯಾರಿಸುತ್ತದೆ. ಮತ್ತೊಂದೆಡೆ, GSK ಫಾರ್ಮಾಸ್ಯುಟಿಕಲ್ಸ್ ಕ್ಯಾಲ್ಪೋಲ್ ಅನ್ನು ಉತ್ಪಾದಿಸುತ್ತದೆ ಮತ್ತು ಈ ಎರಡೂ ಮಾತ್ರೆಗಳನ್ನು ಸಾಮಾನ್ಯವಾಗಿ ರೋಗಿಗಳಿಗೆ ವೈದ್ಯರು ಶಿಫಾರಸು ಮಾಡುತ್ತಾರೆ.

ಇದನ್ನೂ ಓದಿ-Petrol Price Today : ಹೊಸ ಪೆಟ್ರೋಲ್-ಡೀಸೆಲ್ ದರ ಬಿಡುಗಡೆ : 1 ಲೀಟರ್ ಬೆಲೆ ಎಷ್ಟು? ಇಲ್ಲಿ ಪರಿಶೀಲಿಸಿ!

ಡೊಲೊ 650 ಡಿಸೆಂಬರ್‌ನಲ್ಲಿ 28 ಕೋಟಿ ರೂ. ವಹಿವಾಟು ನಡೆಸಿದೆ
ಡಿಸೆಂಬರ್ 2021 ರಲ್ಲಿ, ಡೋಲೋ 650, ರೂ. 28.9 ಕೋಟಿಗಳನ್ನು ಮಾರಾಟ ನಡೆಸಿದೆ. ಇದು ಕಳೆದ ವರ್ಷ ಇದೇ ತಿಂಗಳ ಮಾರಾಟಕ್ಕಿಂತ ಶೇ.61.45ರಷ್ಟು ಹೆಚ್ಚಾಗಿದೆ. ಆದರೆ ಅದರ ಹೆಚ್ಚಿನ ಮಾರಾಟವು ಏಪ್ರಿಲ್-ಮೇ 2021 ರಲ್ಲಿ ಎರಡನೇ ಕೊರೊನಾ  (Coronavirus)ಅಲೆಯ ಸಂದರ್ಭದಲ್ಲಿ ನಡೆದಿದೆ.  ಏಪ್ರಿಲ್‌ನಲ್ಲಿ ಇದರ ಮಾರಾಟ 48.9 ಕೋಟಿ ಗಳಷ್ಟಾಗಿದ್ದರೆ, ಮೇ ತಿಂಗಳಲ್ಲಿ ಅದು 44.2 ಕೋಟಿ ಗಳಿಸಿದೆ.

ಇದನ್ನೂ ಓದಿ-GAIL ನಿರ್ದೇಶಕನ ನಿವಾಸದಿಂದ 1.30 ಕೋಟಿ ರೂ.ವಶಪಡಿಸಿಕೊಂಡ ಸಿಬಿಐ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News