ಜೋರ್ಡಾನ್‌ನ ಅಕಾಬಾ ಬಂದರಿನಲ್ಲಿ ವಿಷಕಾರಿ ಅನಿಲ ಸೋರಿಕೆಯು 13 ಜನರನ್ನು ಬಲಿ ತೆಗೆದುಕೊಂಡಿದೆ. ಅಲ್ಲದೇ ಸುಮಾರು 251 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ವಿಷಕಾರಿ ಅನಿಲವು ಮನೆಗಳಿಗೆ ಪ್ರವೇಶಿಸುವುದನ್ನು ತಡೆಯಲು ಹತ್ತಿರದ ಪ್ರದೇಶಗಳಲ್ಲಿ ವಾಸಿಸುವ ಜನರು ಮನೆಯೊಳಗೆ ಇರಲು ಮತ್ತು ಎಲ್ಲಾ ಕಿಟಕಿಗಳನ್ನು ಮುಚ್ಚಲು ಅಧಿಕಾರಿಗಳು ಕೇಳಿಕೊಂಡಿದ್ದಾರೆ ಎಂದು ರಾಜ್ಯ ದೂರದರ್ಶನ ವರದಿ ಮಾಡಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Birmingham explosion: ಬರ್ಮಿಂಗ್​​ಹ್ಯಾಮ್​ನಲ್ಲಿ ಭಾರೀ ಸ್ಫೋಟ


ಸರ್ಕಾರಿ ವಕ್ತಾರರಾದ ಫೈಸಲ್ ಅಲ್-ಶಾಬೌಲ್, ಆರಂಭದಲ್ಲಿ ಐದು ಜನರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಬಳಿಕ ಈ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸುದ್ದಿ ಸಂಸ್ಥೆ ಪೆಟ್ರಾ ಸಾರ್ವಜನಿಕ ಭದ್ರತಾ ನಿರ್ದೇಶನಾಲಯದ ವಕ್ತಾರರನ್ನು ಉಲ್ಲೇಖಿಸಿ, ವಿಷಕಾರಿ ಅನಿಲ ತುಂಬಿದ ಟ್ಯಾಂಕ್ ಸೋರಿಕೆಯಾಗಿದೆ ಎಂದು ಹೇಳಿದರು.  


ಹಸುಗಳಿಗಾಗಿ ಬಾಲ್ಯ ವಿವಾಹ! ಇಲ್ಲಿ ವಧು ದಕ್ಷಿಣೆ ರೂಪದಲ್ಲಿ ಸಿಗುತ್ತೆ ಹಸುಗಳು


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.