Trending News: ಅದ್ವಿತೀಯ ಶಕ್ತಿಯುಳ್ಳ ಈ ಜೀವ ದಿಢೀರ್ ಮಾಯವಾಗುತ್ತದೆ, ಹುಡುಕಾಡಿದ್ರು ಸಿಗಲ್ಲ !
Viral News: ನಾರ್ದರ್ನ್ ಗ್ಲಾಸ್‌ಫ್ರಾಗ್ ಎಂಬ ವಿಶೇಷ ಕಪ್ಪೆ ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಕಾಡುಗಳಲ್ಲಿ ಕಂಡುಬರುತ್ತದೆ, ಇದು ದಿಢೀರ್ ಕಣ್ಮರೆಯಾಗುವ ವಿಶಿಷ್ಟ ಶಕ್ತಿಯನ್ನು ಹೊಂದಿದೆ.
Transparent Glassfrogs: ತನ್ನಷ್ಟಕ್ಕೆ ತಾನೇ ದಿಢೀರ್ ಕಣ್ಮರೆಯಾಗುವ ವಿಶಿಷ್ಟ ಶಕ್ತಿ ಹೊಂದಿರುವ ಯಾವುದೇ ಒಂದು ಜೀವಿಯ ಬಗ್ಗೆ ನೀವು ಕೇಳಿದ್ದೀರಾ? ಹೌದು ಒಂದು ವಿಶಿಷ್ಟ ಪ್ರಜಾತಿಯ ಕಪ್ಪೆ ಈ ಸಾಧನೆ ಮಾಡಲು ಸಮರ್ಥವಾಗಿದೆ ಎಂದು ನಾವು ಹೇಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು. ಹಸಿರು ಎಲೆಗಳ ಮೇಲೆ ವಾಸಿಸುವ ಈ ಕಪ್ಪೆ ತನ್ನಷ್ಟಕ್ಕೆ ತಾನೇ ದಿಢೀರ್ ಕಣ್ಮರೆಯಾಗುವ ಅದ್ಭುತ ಶಕ್ತಿಯನ್ನು ಹೊಂದಿದೆ. ಇದು ನಿದ್ದೆ ಮಾಡುವಾಗ ತನ್ನ ದೇಹದಲ್ಲಿ ಇರುವ ಕೆಂಪು ರಕ್ತ ಕಣಗಳನ್ನು ತನ್ನ ಯಕೃತ್ತಿಗೆ ಎಳೆಯುತ್ತದೆ, ಇದರಿಂದಾಗಿ ಅದು ಸಂಪೂರ್ಣವಾಗಿ ಪಾರದರ್ಶಕವಾಗುತ್ತದೆ. ಈ ಸಂಧರ್ಭದಲ್ಲಿ ಅದನ್ನು ನೀವು ನೋಡಲು ಹೋದರೆ, ಅದು ನಿಮ್ಮ ಕಣ್ಣುಗಳಿಗೆ ಗೋಚರಿಸುವುದಿಲ್ಲ.
ಇದನ್ನೂ ಓದಿ-Lion Attack: ಸಿಂಹಿಣಿಗಳ ಮಧ್ಯೆ ಸಿಲುಕಿಕೊಂಡ ಯುವಕ, ನಂತರ ನಡೆದಿದ್ದು ಎದೆ ಝಲ್ಲೆನ್ನಿಸುವಂತಿದೆ
ಬಹಳ ವಿಷಕಾರಿಯಾಗಿದೆ
ಈ ವಿಶೇಷ ಜಾತಿಯ ಕಪ್ಪೆಗಳನ್ನು ನಾರ್ದನ್ ಗ್ಲಾಸ್‌ಫ್ರಾಗ್ ಎಂದೂ ಕರೆಯುತ್ತಾರೆ. ತುಂಬಾ ಸುಂದರವಾಗಿ ಕಾಣುವ ಈ ಕಪ್ಪೆಗಳು ತುಂಬಾ ವಿಷಕಾರಿಯಾಗಿರುತ್ತವೆ ಎಂದು ಅಧ್ಯಯನವೊಂದರಲ್ಲಿ ತಿಳಿದುಬಂದಿದೆ. ಇವು ಹಾವಿನಂತೆ ಕಚ್ಚುವುದಿಲ್ಲ, ಆದರೆ ತನ್ನೊಳಗಿನ ವಿಷವನ್ನು ತನ್ನ ಬೆನ್ನಿನ ಮೂಲಕ ಬಿಡುಗಡೆ ಮಾಡುತ್ತವೆ. ಇದ್ದಕ್ಕಿದ್ದಂತೆ ಕಣ್ಮರೆಯಾಗುವ ಅದರ ಈ ಗುಣವು ಶತ್ರುಗಳಿಂದ ಅದನ್ನು ರಕ್ಷಿಸುತ್ತದೆ. ತನ್ನನ್ನು ತಾನು ಪಾರದರ್ಶಕವಾಗಿಸಲು ಈ ಕಪ್ಪೆಗಳು ತನ್ನ ದೇಹದ ಸುಮಾರು ಶೇ. 90 ರಷ್ಟು ರಕ್ತವನ್ನು ಯಕೃತ್ತಿನಲ್ಲಿ ಸೆಳೆಯುತ್ತವೆ ಮತ್ತು ಎಲೆಗಳ ನಡುವೆ ತಮ್ಮನ್ನು ಮರೆಮಾಡುತ್ತವೆ. ಒಂದು ಸಂಶೋಧನೆಯ ಪ್ರಕಾರ, ಈ ಕಪ್ಪೆ ಇಡೀ ಭೂಮಿಯ ಮೇಲೆ ತನ್ನಷ್ಟಕ್ಕೆ ತಾನೇ ದಿಢೀರ್ ಕಣ್ಮರೆಯಾಗಿಸುವ ಸಾಮರ್ಥ್ಯ ಹೊಂದಿರುವ ಏಕೈಕ ಜೀವಿಯಾಗಿದೆ.
ಇದನ್ನೂ ಓದಿ-Viral Video: ಸ್ಟಂಟ್ ಮಾಡಲು ಹೋಗಿ ಮೊಸಳೆ ಬಾಯಿಗೆ ಕೈಹಾಕಿದ ವ್ಯಕ್ತಿ, ನಂತರ ಏನಾಯ್ತು ನೀವೇ ನೋಡಿ
ಮನುಷ್ಯರಿಗೆ ಸಹಾಯಕ ಸಾಬೀತಾಗಬಹುದು
ಈ ವಿಷಪೂರಿತ ಕಪ್ಪೆ ಮನುಷ್ಯನಿಗೆ ಹೇಗೆ ಉಪಯೋಗಕಾರಿಯಾಗಬಹುದು ಎಂದು ನೀವೂ ಕೂಡ ಯೋಚಿಸುತ್ತಿರಬಹುದು? ಈ ಕಪ್ಪೆ ಯಕೃತ್ತಿಗೆ ರಕ್ತವನ್ನು ಎಳೆಯುವ ರೀತಿಯಲ್ಲಿ, ರಕ್ತ ಹೆಪ್ಪುಗಟ್ಟುವಿಕೆಗೆ ಅನುಗುಣವಾಗಿ ರೂಪುಗೊಳ್ಳಬೇಕು ಎಂದು ಸಂಶೋಧಕರು ನಂಬುತ್ತಾರೆ, ಆದರೆ ಇದು ಸಂಭವಿಸುವುದಿಲ್ಲ. ಕಪ್ಪೆಯ ಈ ವಿಶಿಷ್ಟ ಮಾದರಿಯನ್ನು ಅರ್ಥಮಾಡಿಕೊಂಡರೆ ಅದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು ಎಂಬುದು ಅವರ ಅಭಿಪ್ರಾಯ. ನಾರ್ದನ್ ಗ್ರಾಸ್ ಫ್ರಾಗ್ ಉದ್ದವು ಸುಮಾರು 1 ಇಂಚು ಆಗಿರುತ್ತದೆ. ಕೆಲವೊಮ್ಮೆ ಇದು ಇದಕ್ಕಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಈ ಕಪ್ಪೆಗಳು ಹೆಚ್ಚಾಗಿ ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಕಾಡುಗಳಲ್ಲಿ ಕಂಡುಬರುತ್ತವೆ. ಅವು ತಮ್ಮ ಜೀವನದ ಪ್ರಮುಖ ಭಾಗ ಮರಗಳ ಹಸಿರು ಎಲೆಗಳ ಮೇಲೆ ಕಳೆಯುತ್ತವೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.