ನವದೆಹಲಿ: ಈಜಿಪ್ಟ್ ನ  (Egypt) ಅಸ್ವಾನ್ (Aswan) ನಗರದಲ್ಲಿ ಚೇಳುಗಳ ಭೀತಿ ಆವರಿಸಿದೆ. ಚಂಡಮಾರುತ ಮತ್ತು ನಂತರದ ಭೀಕರ ಮಳೆಯೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಭೀಕರ ಬಿರುಗಾಳಿ ಮತ್ತು ಮಳೆಯ ನಂತರ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಚೇಳುಗಳು 500 ಕ್ಕೂ ಹೆಚ್ಚು ಜನರನ್ನು ಕಚ್ಚಿ (Scorpion Mass Attack In Egypt) ಅಸ್ವಸ್ಥಗೊಳಿಸಿವೆ.


COMMERCIAL BREAK
SCROLL TO CONTINUE READING

ಜನರ ಸಾವಿನಿಂದ ಕಲಕಿದೆ
ಚೇಳುಗಳ ದಾಳಿಗೆ ಇದುವರೆಗೆ ಅಲ್ಲಿ ಮೂವರು (3 Killed 500 Stung In Egypt) ಮೃತಪಟ್ಟಿದ್ದಾರೆ. ಈ ಸಾವುಗಳ ಹಿನ್ನೆಲೆ ನಗರದಲ್ಲಿ ಭೀತಿಯ ವಾತಾವರಣ ನಿರ್ಮಾಣಗೊಂಡಿದೆ.  ಜನರು ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಉಳಿಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಚಂಡಮಾರುತ, ಭಾರೀ ಮಳೆ ಮತ್ತು ಪ್ರವಾಹದಿಂದಾಗಿ ಚೇಳುಗಳು ನೆಲದಡಿಯಿಂದ ಹೊರಬಂದು ರಸ್ತೆಗಳು, ಮನೆಗಳು, ಕಚೇರಿಗಳು, ಮಾರುಕಟ್ಟೆಗಳು ಮತ್ತು ಪ್ರವಾಸಿ ಸ್ಥಳಗಳಲ್ಲಿ ಹರಡಿವೆ. ಪ್ರಕೃತಿ ವಿಕೋಪದ ನಂತರ ತಮ್ಮನ್ನು ರಕ್ಷಿಸಿಕೊಳ್ಳಲು ಹೊರಬಂದ ಈ ವಿಷಕಾರಿ ಜೀವಿಗಳು ಯಾವುದೇ ಅಪಾಯಕ ಕಂಡುಬಂದರೆ , ಅವು ತಕ್ಷಣವೇ ಅವುಗಳನ್ನು ಕಚ್ಚುತ್ತವೆ.


ಇದನ್ನೂ ಓದಿ-China: ಹೊಸ ಸಮಸ್ಯೆಯಲ್ಲಿ ಸಿಲುಕಿದ ಚೀನಾ: ಉದ್ವಿಗ್ನತೆ ಹೆಚ್ಚಿಸಿದ ಡ್ರ್ಯಾಗನ್ ದೇಶದ ಈ ವರದಿ..!


ಗಾಬರಿಯ ನಡುವೆ ಹೊಸ ಭಯ
ಬಿಬಿಸಿಯಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ನಗರದಲ್ಲಿ ಭೀತಿಯ ವಾತಾವರಣದ ನಡುವೆ ಪ್ರಸ್ತುತ 80 ಕ್ಕೂ ಹೆಚ್ಚು ಜನರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಇದೆ ವೇಳೆ  3000 ಕ್ಕೂ ಹೆಚ್ಚು ಆಂಟಿವೆನಮ್ ಔಷಧಿಗಳನ್ನು ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ. ಈ ಚೇಳುಗಳ ದಾಳಿ ಬಹುತೇಕ ನಗರಣ ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ. ಈ ಪ್ರದೇಶಗಳಲ್ಲಿ ಹಾವು ಕಡಿತದ ಮತ್ತೊಂದು ಭೀತಿ ಕೂಡ ನಿರ್ಮಾಣಗೊಂಡಿದೆ. ಆದರೆ, ಇದುವರೆಗೆ ಯಾವುದೇ ಹಾವು ಕಡಿತದ ಪ್ರಕರಣಗಳು ವರದಿಯಾಗಿಲ್ಲ.


ಇದನ್ನೂ ಓದಿ-Alert! Last Road on Earth: ಇದುವೇ ಭೂಮಿಯ ಕೊನೆಯ ದಾರಿ, ಅಪ್ಪಿ-ತಪ್ಪಿಯೂ ಒಂಟಿಯಾಗಿ ಹೋದರೆ ?


ಚೇಳುಗಳ ಸಾಮೂಹಿಕ ದಾಳಿಯಿಂದ ತೊಂದರೆಗೊಳಗಾದ ಜನರು ಆಸ್ಪತ್ರೆಯನ್ನು ತಲುಪಲು ಪ್ರಾರಂಭಿಸಿದಾಗ, ಇದು ನಗರದ ಆರೋಗ್ಯ ಸೇವೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಇದೆ ಸಮಯದಲ್ಲಿ ಸ್ಥಳೀಯ ಪರಿಸರ ತಜ್ಞರು ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ ಹಠಾತ್ ಚಂಡಮಾರುತ ಮತ್ತು ಮಳೆ ಇದಾಗಿದೆ ಎನ್ನುತ್ತಾರೆ. ಈ ಪ್ರದೇಶ ಸಾಮಾನ್ಯವಾಗಿ ಒಂದು ಒಣ ಪ್ರದೇಶ ಎನ್ನುವುದು ಅವರ ಅಭಿಮತವಾಗಿದೆ.


ಇದನ್ನೂ ಓದಿ-Viral News: ಮದುವೆಯಲ್ಲಿ ಸುಂದರವಾಗಿ ಕಾಣಲು ವರ ಮಾಡಿಕೊಂಡ ಈ ಯಡವಟ್ಟು..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ