Triumph Motorcycles Special Edition:ಬ್ರಿಟಿಷ್ ಪ್ರೀಮಿಯಂ ಮೋಟಾರ್‌ಸೈಕಲ್ ತಯಾರಕ Triumph Motorcylces ಮಂಗಳವಾರ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಶ್ರೇಣಿಯ ಗೋಲ್ಡ್ ಲೈನ್ ಮತ್ತು ವಿಶೇಷ ಆವೃತ್ತಿಯ ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಟ್ರಯಂಫ್ ಭಾರತೀಯ ಮಾರುಕಟ್ಟೆಯಲ್ಲಿ 9 ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಿದ್ದು, ಇದರಿಂದ ಟ್ರಯಂಫ್ ಮೋಟಾರ್‌ಸೈಕಲ್ಸ್ (Motercycle) ಭಾರೆತೀಯ ದೇಶೀಯ ಮಾರುಕಟ್ಟೆ ಪೋರ್ಟ್‌ಫೋಲಿಯೊದಲ್ಲಿ ಒಟ್ಟು 27 ಮೋಟಾರ್‌ಸೈಕಲ್‌ಗಳನ್ನು ಪಡೆದುಕೊಂಡಂತಾಗಿದೆ.


COMMERCIAL BREAK
SCROLL TO CONTINUE READING

ಒಂಬತ್ತು ಹೊಸ ಬೈಕ್‌ಗಳಲ್ಲಿ, ಗೋಲ್ಡ್ ಲೈನ್ (Tirumph The Gold Line Editon) ಎಡಿಷನ್ ಶ್ರೇಣಿಯು ಆರು ಮೋಟಾರ್‌ಸೈಕಲ್‌ಗಳನ್ನು ಹೊಂದಿದ್ದರೆ, ವಿಶೇಷ ಆವೃತ್ತಿಯು ಮೂರು ಹೊಂದಿದೆ, ಇದು ಒಂದು ವರ್ಷದ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ ಎಂದು ಕಂಪನಿಯು ತನ್ನ  ಹೇಳಿಕೆಯಲ್ಲಿ ತಿಳಿಸಿದೆ.


ಬೆಲೆಗಳ ವಿವರ ಇಲ್ಲಿದೆ
ಟ್ರಯಂಫ್ ನೀಡಿರುವ ಮಾಹಿತಿ ಪ್ರಕಾರ ಗೋಲ್ಡನ್ ಎಡಿಷನ್ ಶ್ರೇಣಿಯ ಬೈಕ್‌ಗಳು ರೂ 9.55 ಲಕ್ಷದಿಂದ ಪ್ರಾರಂಭವಾಗುತ್ತವೆ ಮತ್ತು ರೂ 12.75 ಲಕ್ಷದವರೆಗೆ ಇರಲಿದೆ. ಇದರಲ್ಲಿ Street Scrambler, Bonneville T100 , Bonneville T120, Bonneville T120 black, Bonneville Bobber ಹಾಗೂ  Bonneville Speedmaster ಶಾಮೀಲಾಗಿವೆ.


Royal Enflied Super Meteor 650: ಮೈ ನವಿರೇಳಿಸುವ Royal Enfield ಕಂಪನಿಯ ಹೊಸ ಬೈಕ್ ಝಲಕ್ ಇಲ್ಲಿದೆ


ಈ ಕುರಿತು ಮಾತನಾಡಿರುವ ಟ್ರಯಂಫ್ ಮೋಟಾರ್‌ಸೈಕಲ್ಸ್ ಇಂಡಿಯಾದ ಬಿಸಿನೆಸ್ ಹೆಡ್ ಶೋಯೆಬ್ ಫಾರೂಕ್ , "ಭಾರತದಲ್ಲಿ ಗೋಲ್ಡ್ ಲೈನ್ ಮತ್ತು ವಿಶೇಷ ಆವೃತ್ತಿಯ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಲು ನಮಗೆ ತುಂಬಾ ಸಂತೋಷವಾಗುತ್ತಿದೆ.  ಗ್ರಾಹಕರಿಂದ ಕಸ್ಟಮ್ ಪೇಂಟ್ ಮೋಟಾರ್‌ಸೈಕಲ್‌ಗಳಿಗೆ ಬೇಡಿಕೆಯಲ್ಲಿ ಹೆಚ್ಚಳ ಕಂಡು ಬಂದ ಕಾರಣ ಇದು ಉಳಿದ ಬೈಕ್ ಗಳಿಂದ ನಮ್ಮನ್ನು ಭಿನ್ನವಾಗಿಸುತ್ತವೆ " ಎಂದಿದ್ದಾರೆ. 


ಇದನ್ನೂ ಓದಿ-ಭಾರತೀಯ ಮಾರುಕಟ್ಟೆಗೆ ಅತ್ಯಂತ ಅಗ್ಗದ ರಾಯಲ್ ಎನ್‌ಫೀಲ್ಡ್!: ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ


ಗೋಲ್ಡ್ ಲೈನ್ಸ್ ಮತ್ತು ವಿಶೇಷ ಆವೃತ್ತಿಯು ಒಟ್ಟು ಒಂಬತ್ತು ಮೋಟಾರ್‌ಸೈಕಲ್‌ಗಳನ್ನು ಒಳಗೊಂಡಿದ್ದು, ಇದು ಟ್ರಯಂಫ್ ಅನ್ನು ಯಾವುದೇ ಪ್ರೀಮಿಯಂ ಮೋಟಾರ್‌ಸೈಕಲ್ ತಯಾರಕರಿಗಿಂತ ಅತಿದೊಡ್ಡ ಪ್ರೊಫೈಲ್ ನೀಡುತ್ತದೆ ಎಂದು ಕಂಪನಿ ಹೇಳಿದೆ.


ಇದನ್ನೂ ಓದಿ-Upcoming Royal Enfield Motorcycle: ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿವೆ Royal Enfieldನ 4 ಬೈಕ್ ಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.