ನವದೆಹಲಿ: ಟರ್ಕಿಯು ಉಗ್ರ ಐಸಿಸ್ ಅಬೂಬಕರ್ ಅಲ್-ಬಾಗ್ದಾದಿ ಪತ್ನಿಯನ್ನು ಸೆರೆಹಿಡಿದಿದೆ ಎಂದು ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಬುಧವಾರ ಹೇಳಿದ್ದಾರೆ. ಯು.ಎಸ್.ವಿಶೇಷ ಪಡೆಗಳ ದಾಳಿಯಲ್ಲಿ ಮಾಜಿ ಇಸ್ಲಾಮಿಕ್ ಸ್ಟೇಟ್ ನಾಯಕ ಬಾಗ್ದಾದಿ ಹತ್ಯೆಯಾದ ನಂತರ ಟರ್ಕಿ ಅವರ ಪತ್ನಿಯನ್ನು ವಶಕ್ಕೆ ತೆಗೆದುಕೊಂಡಿದೆ.  


COMMERCIAL BREAK
SCROLL TO CONTINUE READING

'ಬಾಗ್ದಾದಿ ಸುರಂಗದಲ್ಲಿ ಕೊಂದಿರುವುದಾಗಿ ಅಮೇರಿಕಾ ಹೇಳಿದೆ. ಈ ಕುರಿತಾಗಿ ಅವರು ಸಂವಹನ ಅಭಿಯಾನವನ್ನು ಪ್ರಾರಂಭಿಸಿದ್ದರು. ಆದರೆ, ನಾನು ಅದನ್ನು ಮೊದಲ ಬಾರಿಗೆ ಇಲ್ಲಿ ಪ್ರಕಟಿಸುತ್ತಿದ್ದೇನೆ. ನಾವು ಅವನ ಹೆಂಡತಿಯನ್ನು ಸೆರೆಹಿಡಿದಿದ್ದೇವೆ ಮತ್ತು ಅವರಂತೆ ನಾವು ಸದ್ದು ಮಾಡಲಿಲ್ಲ. ಅದೇ ರೀತಿ, ನಾವು ಸಿರಿಯಾದಲ್ಲಿ ಅವರ ಸಹೋದರಿ ಮತ್ತು ಸೋದರ ಮಾವನನ್ನೂ ಸೆರೆಹಿಡಿದಿದ್ದೇವೆ ಎಂದು ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.


ಟರ್ಕಿಯ ಹಿರಿಯ ಅಧಿಕಾರಿಯೊಬ್ಬರು ಈ ವಾರದ ಆರಂಭದಲ್ಲಿ ಟರ್ಕಿ ಬಾಗ್ದಾದಿಯ ಸಹೋದರಿ, ಅವಳ ಪತಿ ಮತ್ತು ಮಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿದ್ದರು.