Turkey - ಟರ್ಕಿಯಿಂದ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಲ್ಲಿ ವಾಸಿಸುವ ವ್ಯಕ್ತಿಯೊಬ್ಬರ ಕೊರೊನಾ ವರದಿ ಕಳೆದ 14 ತಿಂಗಳುಗಳಿಂದ ನಿರಂತರವಾಗಿ ಪಾಸಿಟಿವ್ (Corona Positive) ಬರುತ್ತಿದೆ ಎಂದು ಹೇಳಿಕೊಂಡಿದ್ದು, ಈ ಕಾರಣದಿಂದಾಗಿ ಅವರು ಇಲ್ಲಿಯವರೆಗೆ 78 ಬಾರಿ ಕೋವಿಡ್ (Covid-19) ಪಾಸಿಟಿವ್ ಎಂದು ಕಂಡುಬಂದಿದ್ದಾರೆ.


COMMERCIAL BREAK
SCROLL TO CONTINUE READING

ಪ್ರತಿ ಬಾರಿಯೂ ಸಕಾರಾತ್ಮಕ ವರದಿ ಬರುತ್ತದೆ
ದೊರೆತ ಮಾಹಿತಿಗಳ ಪ್ರಕಾರ, ಮುಜಾಫರ್ ಕಯಾಸನ್ (Muzaffar Kayasan) ಅವರು 2020 ರ ನವೆಂಬರ್ ತಿಂಗಳಿನಲ್ಲಿ ಮೊದಲ ಬಾರಿಗೆ ಕರೋನಾ ಸೋಂಕಿಗೆ ಒಳಗಾಗಿದ್ದಾರೆ, ಅಂದಿನಿಂದ ಅವರು ನಿರಂತರ ಐಸೊಲೆಶನ್ ನಲ್ಲಿದ್ದಾರೆ. 2020 ರಿಂದ ಇದುವರೆಗೆ ಕಯಾಸನ್ 78 ಬಾರಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾರೆ ಆದರೆ ಪ್ರತಿ ಬಾರಿ ಅವರ ವರದಿಯು ಧನಾತ್ಮಕವಾಗಿರುತ್ತದೆ ಎಂದಿದ್ದಾರೆ. 


ಇದನ್ನೂ ಓದಿ-Shocking: ಹಾರುವ ವಿಮಾನದಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ..!


ಇದುವರೆಗೆ ಕೊವಿಡ್ ಲಸಿಕೆ (Anti-Covid Vaccine) ಹಾಕಿಸಿಕೊಂಡಿಲ್ಲ
ಸಕಾರಾತ್ಮಕ ವರದಿಗಳ ಹಿನ್ನೆಲೆ, ಕಯಾಸನ್ ಆಸ್ಪತ್ರೆಯಲ್ಲಿರಲಿ ಅಥವಾ ಮನೆಯಲ್ಲಿಯೇ ಇರಲಿ ಅವರನ್ನು ಪ್ರತ್ಯೇಕವಾಗಿ (Islolation) ಇರಿಸಲಾಗುತ್ತದೆ. ನಿರಂತರ ಪ್ರತ್ಯೇಕತೆಯಿಂದಾಗಿ ಕಾಯಸನ ಸಾಮಾಜಿಕ ಜೀವನ ಅಂತ್ಯಗೊಂಡಿದೆ. ಅವರು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಅಥವಾ ಅವರ ಸ್ನೇಹಿತರೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ  ನೆಗೆಟಿವ್ ವರದಿ ಇಲ್ಲದ ಕಾರಣ ಇನ್ನೂ ಲಸಿಕೆ ಹಾಕಿಸಿಕೊಳ್ಳಲು ಕೂಡ ಅವರಿಂದ ಸಾಧ್ಯವಾಗುತ್ತಿಲ್ಲ.


ಇದನ್ನೂ ಓದಿ-Internet Star Girl: ಇಂತಹ ವಿಡಿಯೋ ಹಾಕಿ 200 ಕೋಟಿ ರೂ. ಗಳಿಸಿದ 7 ವರ್ಷದ ಬಾಲಕಿ!


ಲ್ಯುಕೇಮಿಯಾದಿಂದ ಬಳಲುತ್ತಿದ್ದಾರೆ
ಮಾಧ್ಯಮ ವರದಿಗಳ ಪ್ರಕಾರ, 56 ವರ್ಷದ ಕಯಾಸನ್ ಅವರು ಲ್ಯುಕೇಮಿಯಾ (Lukemia) ಅಂದರೆ ಒಂದು ರೀತಿಯ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯಿಂದ ಅವರ ದೇಹದಲ್ಲಿ ಬಿಳಿ ರಕ್ತ ಕಣಗಳು ಕಡಿಮೆಯಾಗುತ್ತವೆ. ಇದರಿಂದ ಕಾಯಸನ್ ಬೇಗ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಕಯಾಸನ್ ರಕ್ತದಿಂದ ಕೊರೊನಾ ವೈರಸ್ ನಿರ್ಮೂಲನೆಯೇ  ಆಗುತ್ತಿಲ್ಲ ಎನ್ನುತ್ತಾರೆ ವೈದ್ಯರು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅವರಿಗೆ ಔಷಧಿಗಳನ್ನು ನೀಡಲಾಗುತ್ತಿದೆ. ಆದರೆ ಈ ಸಂಪೂರ್ಣ ಪ್ರಕ್ರಿಯೆಯು ತುಂಬಾ ನಿಧಾನ ಮತ್ತು ದೀರ್ಘವಾಗುತ್ತಿದೆ. ಕಯಾಸನ್ ಅವರ ಪ್ರಕರಣವು ಈ ರೀತಿಯ ಮೊದಲನೆ ಪ್ರಕರಣವಾಗಿದ್ದು, ಇದರಲ್ಲಿ ರೋಗಿಯು ಇಷ್ಟು ದಿನ ಕರೋನಾ ಪಾಸಿಟಿವ್ ಆಗಿದ್ದಾರೆ.


ಇದನ್ನೂ ಓದಿ-Malala Yousafzai : ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಮಲಾಲಾ ಯೂಸುಫ್‌ಜಾಯ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.