ನವದೆಹಲಿ: ಟರ್ಕಿಯಲ್ಲಿ ಫೆಬ್ರವರಿ 6ರಂದು ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 46 ಸಾವಿರಕ್ಕೇರಿದೆ. ಜೀವಹಾನಿಯ ಜೊತೆಗೆ ಅಪಾರ ಪ್ರಮಾಣದ ಆಶ್ತಿ-ಪಾಸ್ತಿ ನಷ್ಟವಾಗಿದೆ. ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಅನೇಕ ಪವಾಡಗಳು ನಡೆಯುತ್ತಿದೆ. ನಂಬಲು ಸಾಧ್ಯವಾಗದ ರೀತಿಯ ಘಟನೆಗಳು ನಡೆಯುತ್ತಿವೆ. ಹೌದು, ಭೂಕಂಪದ 13 ದಿನಗಳ ನಂತರ ಅವಶೇಷಗಳಡಿ ಹೂತುಹೋಗಿದ್ದ ಪತಿ ಮತ್ತು ಹೆಂಡತಿಯನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಆದರೆ ಈ ಘಟನೆಯಲ್ಲಿ ಅವರು ತಮ್ಮ ಮಗುವನ್ನು ಕಳೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

13 ದಿನಗಳ ನಂತರ ಗಂಡ-ಹೆಂಡತಿ ಜೀವಂತವಾಗಿ ಪತ್ತೆ 


ವರದಿಗಳ ಪ್ರಕಾರ ಭೂಕಂಪದ 13 ದಿನಗಳು ಅಂದರೆ 450 ಗಂಟೆಗಳ ನಂತರ, ಹೆಟೆ ಪ್ರಾಂತ್ಯದ ರಾಜಧಾನಿ ಅಂಟಾಕ್ಯಾದಲ್ಲಿ ಅವಶೇಷಗಳಡಿ ಹೂತುಹೋಗಿದ್ದ ಗಂಡ-ಹೆಂಡತಿ ಮತ್ತು ಅವರ ಮಗುವನ್ನು ಹೊರತೆಗೆಯಲಾಗಿದೆ. ಸಮೀರ್ ಮುಹಮ್ಮದ್ ಅಕ್ಕರ್ (49), ಅವರ ಪತ್ನಿ ರಗ್ದಾ (40) ಮತ್ತು ಅವರ 12 ವರ್ಷದ ಪುತ್ರನನ್ನು ಹೊರತೆಗೆಯಲಾಯಿತು. ಕೂಡಲೇ ಮೂವರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಈ ವೇಳೆ ದಂಪತಿಯ ಮಗು ಸಾವನ್ನಪ್ಪಿದೆ. ಇದೇ ವೇಳೆ ಟರ್ಕಿ-ಸಿರಿಯಾ ಭೂಕಂಪದಲ್ಲಿ ಸತ್ತವರ ಸಂಖ್ಯೆ 46,000 ದಾಟಿದೆ.


ಇದನ್ನೂ ಓದಿ: Pakistan : ಪಾಕಿಸ್ತಾನದಲ್ಲಿ ಒಂದು ಲೀಟರ್‌ ಪೆಟ್ರೋಲ್ ಬೆಲೆ 272 ರೂ..!


ಘಾನಾದ ಫುಟ್ಬಾಲ್ ಆಟಗಾರ ನಿಧನ


ಅದೇ ಅಂಟಾಕ್ಯಾ ನಗರದಲ್ಲಿ ಘಾನಾದ 31 ವರ್ಷದ ಫುಟ್‌ಬಾಲ್ ಆಟಗಾರನ ದೇಹವೂ ಅವಶೇಷಗಳಡಿ ಪತ್ತೆಯಾಗಿದೆ. ಇಂಗ್ಲಿಷ್ ಪ್ರೀಮಿಯರ್ ಲೀಗ್ ಕ್ಲಬ್‌ಗಳಾದ ಚೆಲ್ಸಿಯಾ ಮತ್ತು ನ್ಯೂಕ್ಯಾಸಲ್ ಪ್ರತಿನಿಧಿಸಿದ್ದ ಈ ಆಟಗಾರನ ಹೆಸರು ಕ್ರಿಶ್ಚಿಯನ್ ಅಟ್ಸು. ರಕ್ಷಣಾ ತಂಡಗಳು ಅಟ್ಸು ಅವರ ದೇಹವನ್ನು ಅಪಾರ್ಟ್‌ಮೆಂಟ್‌ನ ಅವಶೇಷಗಳಿಂದ ಹೊರತೆಗೆದಿವೆ. ಈ ಆಟಗಾರ ಸೆಪ್ಟೆಂಬರ್‌ನಲ್ಲಿಯೇ ಟರ್ಕಿಯ ಕ್ಲಬ್‌ನ ಹ್ಯಾಟೈಸ್‌ಪೋರ್‌ನೊಂದಿಗೆ ನಂಟು ಹೊಂದಿದ್ದರು. ಇವರು ಫೆ.5 ರಂದು ಭೂಕಂಪನಕ್ಕೆ ಕೆಲವೇ ಗಂಟೆಗಳ ಮೊದಲು ಕಾಸಿಂಪಸಾ ಎಸ್‌ಕೆ ವಿರುದ್ಧ ಗೋಲು ಗಳಿಸುವ ಮೂಲಕ ತಮ್ಮ ತಂಡಕ್ಕೆ ವಿಜಯವನ್ನು ತಂದುಕೊಟ್ಟಿದ್ದರು.   


ಫುಟ್ಬಾಲ್ ಆಟಗಾರನ ಸಾವಿಗೆ ಶೋಕ  


ಅಟ್ಸು ಅವರ ಸಾವಿಗೆ ಹ್ಯಾಟೈಸ್ಪೋರ್ ಫುಟ್ಬಾಲ್ ಕ್ಲಬ್ ಶೋಕ ವ್ಯಕ್ತಪಡಿಸಿದೆ. ಈ ದುರ್ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಲು ಪದಗಳಿಲ್ಲವೆಂದು ಕ್ಲಬ್ ಹೇಳಿಕೊಂಡಿದೆ. ‘ಅಟ್ಸು ಉತ್ತಮ ಆಟಗಾರರಾಗಿದ್ದರು ಮತ್ತು ಅವರ ಆಗಮನದಿಂದ ತಂಡದಲ್ಲಿ ಹೊಸ ಉತ್ಸಾಹ ಮೂಡಿತ್ತು’ ಎಂದು ಸಂತಾಪ ಸೂಚಿಸಿದೆ. ವರದಿಯ ಪ್ರಕಾರ ಭೂಕಂಪದ ನಂತರ ಅಟ್ಸು ನಾಪತ್ತೆಯಾಗಿದ್ದರು, ಇದರಿಂದ ಅವರು ಅವಶೇಷಗಳಡಿ ಹೂತುಹೋಗಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಕೊನೆಗೂ ರಕ್ಷಣಾ ತಂಡ ಅವರ ಶವವನ್ನು ಪತ್ತೆ ಹಚ್ಚಿದೆ.  


ಇದನ್ನೂ ಓದಿ: YouTube ಹೊಸ ಸಿಇಒ ಭಾರತೀಯ ಮೂಲದ ನೀಲ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.