ಲಕ್ಷಾಂತರ ಚೀನಾ ಬೆಂಬಲಿಗರ ಖಾತೆಗಳನ್ನು ಬ್ಲಾಕ್ ಮಾಡಿದ Twitter, ಕಾರಣ Coronavirusಗೆ ಸಂಬಂಧಪಟ್ಟಿದೆ
ಈ ಕುರಿತು ಸ್ಪಷ್ಟಪಡಿಸಿರುವ ಟ್ವಿಟ್ಟರ್ ಈ ಖಾತೆಗಳ ಮೂಲಕ ಕೊರೊನಾ ವೈರಸ್ ಕುರಿತು ಪ್ರಚಾರ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ.
ನವದೆಹಲಿ: ಟ್ವಿಟ್ಟರ್ ಚೀನಾ, ರಷ್ಯಾ ಹಾಗೂ ತುರ್ಕಿಗೆ ಸೇರಿದ ಸುಮಾರು 1,50,000 ಕ್ಕೂ ಅಧಿಕ ಖಾತೆಗಳನ್ನು ಬಂದ್ ಮಾಡಿದೆ. ಈ ಖಾತೆಗಳ ಮೂಲಕ ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಚೀನಾದ ಪ್ರಚಾರ ನಡೆಸಲಾಗುತ್ತಿತ್ತು ಎಂದು ಟ್ವಿಟ್ಟರ್ ಹೇಳಿದೆ. ಈ ಅಕೌಂಟ್ಸ್ ಗಳಿಂದ ಚೀನಾ ಸರ್ಕಾರವನ್ನು ಬೆಂಬಲಿಸಿ ಒಂದು ರೀತಿಯ ಅಭಿಯಾನ ನಡೆಸಲಾಗುತ್ತಿತ್ತು ಎನ್ನಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಟ್ವಿಟ್ಟರ್, " ಈ ಖಾತೆಗಳು ಚೀನಾ ಭಾಷೆಯಲ್ಲಿ ಮುಖ್ಯವಾಗಿ ಟ್ವೀಟ್ ಗಳನ್ನು ಮಾಡುತ್ತಿದ್ದವು ಹಾಗೂ ಚೀನಾದ ಕಮ್ಯೂನಿಸ್ಟ್ ಪಾರ್ಟಿ ಅಜೆಂಡಾ ಹಬ್ಬಿಸುತ್ತಿದ್ದವು" ಎಂದಿದೆ. ವರದಿಗಳ ಪ್ರಕಾರ ಈ ಖಾತೆಗಳು ಹಾಂಗ್ ಕಾಂಗ್ ವಿರೋಧಕ್ಕೂ ಕೂಡ ಸಂಬಂಧಿಸಿವೆ. ಅಲ್ಲದೆ ಈ ಟ್ವೀಟ್ ಗಳಲ್ಲಿ ಕೊರೊನಾ ವೈರಸ್ ಕುರಿತು ಚೀನಾ ನೀಡುತ್ತಿರುವ ಪ್ರತಿಕ್ರಿಯೆಗಳಿಗೆ ಪ್ರಶಂಸೆ ವ್ಯಕ್ತಪಡಿಸಲಾಗುತ್ತಿತ್ತು.
ಚೀನಾದಲ್ಲಿ ಟ್ವಿಟ್ಟರ್, ಫೇಸ್ಬುಕ್, ಗೂಗಲ್ ಹಾಗೂ ಯುಟ್ಯೂಬ್ ಸೇರಿದಂತೆ ಇತರೆ ಅಮೆರಿಕಾದ ಸೈಟ್ ಗಳ ಮೇಲೆ ನಿರ್ಬಂಧನೆ ವಿಧಿಸಲಾಗಿದೆ. ಅಲ್ಲಿನ ಜನರು VPN ಅಂದರೆ ವರ್ಚ್ಯುಅಲ್ ಪ್ರೈವೇಟ್ ನೆಟ್ವರ್ಕ್ ಕನೆಕ್ಷನ್ ಮೂಲಕ ಸಾಮಾಜಿಕ ಮಾಧ್ಯಮ ಸೈಟ್ ಗಳಿಗೆ ತಲುಪುತ್ತಾರೆ. ಇದಲ್ಲದೆ ಟ್ವಿಟ್ಟರ್ ತುರ್ಕಿಯ 7340 ಹಾಗೂ ರಷ್ಯಾದ 1,152 ಖಾತೆಗಳನ್ನೂ ಕೂಡ ಬಂದ್ ಮಾಡಿದೆ.
ಕೊರೊನಾ ವೈರಸ್ ಗೆ ಸಂಬಂಧಿಸಿದ ಪ್ರಕರಣಗಳು ವಿಶ್ವಾದ್ಯಂತ ಏರಿಕೆಯಾಗುತ್ತಲೇ ಇವೆ. ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಅಂಕಿ ಅಂಶಗಳ ಪ್ರಕಾರ ವಿಶ್ವಾಧ್ಯಂತ 7 ಲಕ್ಷಕ್ಕೂ ಅಧಿಕ ಜನರು ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ ಹಾಗೂ ಇದುವರೆಗೆ 4 ಲಕ್ಷಕ್ಕೂ ಅಧಿಕ ಜನರು ಈ ಮಹಾಮಾರಿಗೆ ತನ್ನ ಪ್ರಾಣ ಕಳೆದುಕೊಂಡಿದ್ದಾರೆ.