ಕೀವ್‌ (ಉಕ್ರೇನ್‌): ಉಕ್ರೇನ್‌ನಿಂದ 2,00,000 ಮಕ್ಕಳನ್ನು ಬಲವಂತವಾಗಿ ರಷ್ಯಾಗೆ ಕೊಂಡೊಯ್ದಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ‌ಝೆಲೆನ್ಸ್ಕಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Monkeypox: ಮಂಕಿಪಾಕ್ಸ್ ಸಮುದಾಯ ಹರಡುವಿಕೆ ಆತಂಕ..


ಈ ಕ್ರಿಮಿನಲ್ ನೀತಿಯ ಉದ್ದೇಶವು ಜನರನ್ನು ಕದಿಯುವುದು ಮಾತ್ರವಲ್ಲ, ಗಡೀಪಾರು ಮಾಡಿದವರು ಉಕ್ರೇನ್ ಅನ್ನು ಮರೆತು ಹಿಂತಿರುಗಲು ಸಾಧ್ಯವಾಗದಂತೆ ಮಾಡುವುದು ಎಂದು ಝೆಲೆನ್ಸ್ಕಿ ಆರೋಪಿಸಿದ್ದಾರೆ. 


ಉಕ್ರೇನ್ ಜವಾಬ್ದಾರರನ್ನು ಶಿಕ್ಷಿಸುತ್ತದೆ. ಉಕ್ರೇನ್ ಅನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಜನರು ಶರಣಾಗುವುದಿಲ್ಲ ಮತ್ತು ನಮ್ಮ ಮಕ್ಕಳು ಆಕ್ರಮಣಕಾರರ ಆಸ್ತಿಯಾಗುವುದಿಲ್ಲ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. 


ಯುದ್ಧದಲ್ಲಿ ಇದುವರೆಗೆ 243 ಮಕ್ಕಳು ಸಾವನ್ನಪ್ಪಿದ್ದಾರೆ. 446 ಮಂದಿ ಗಾಯಗೊಂಡಿದ್ದಾರೆ ಮತ್ತು 139 ಮಂದಿ ಕಾಣೆಯಾಗಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. 


ಇದನ್ನೂ ಓದಿ: ರೈಲು ಚಲಿಸುವಾಗಲೇ ಹಳಿ ದಾಟಿದ ಪುಟ್ಟ ಬಾಲಕರು: ವಿಡಿಯೋ ನೋಡಿದ್ರೆ ಶಾಕ್‌ ಆಗ್ತೀರಾ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.