Russia-Ukraine Crisis: ಉಕ್ರೇನ್ ಮತ್ತು ರಷ್ಯಾ ಸಂಘರ್ಷದ ನಡುವಿನ ಜಾಡನ್ನು ಹುಡುಕುತ್ತಾ...

Written by - Manjunath N | Last Updated : Feb 25, 2022, 07:02 PM IST
  • ರಷ್ಯಾ ದೇಶವು ಉಕ್ರೇನ್ ಮೇಲಿನ ದಾಳಿ ನಡೆಸಿರುವುದು ಇತ್ತೀಚಿನ ವಿದ್ಯಮಾನವಾಗಿದ್ದರೂ ಕೂಡ, ಎರಡು ದೇಶಗಳ ನಡುವಿನ ಸಂಘರ್ಷ ಮತ್ತು ಸಂಕೀರ್ಣತೆಗೆ ಸಂಬಂಧಿಸಿದಂತೆ ಸಾವಿರಾರು ವರ್ಷಗಳ ಇತಿಹಾಸವಿದೆ.
 Russia-Ukraine Crisis: ಉಕ್ರೇನ್ ಮತ್ತು ರಷ್ಯಾ ಸಂಘರ್ಷದ ನಡುವಿನ ಜಾಡನ್ನು ಹುಡುಕುತ್ತಾ... title=
File Photo (Reuters)

ರಷ್ಯಾ ದೇಶವು ಉಕ್ರೇನ್ ಮೇಲಿನ ದಾಳಿ ನಡೆಸಿರುವುದು ಇತ್ತೀಚಿನ ವಿದ್ಯಮಾನವಾಗಿದ್ದರೂ ಕೂಡ, ಎರಡು ದೇಶಗಳ ನಡುವಿನ ಸಂಘರ್ಷ ಮತ್ತು ಸಂಕೀರ್ಣತೆಗೆ ಸಂಬಂಧಿಸಿದಂತೆ ಸಾವಿರಾರು ವರ್ಷಗಳ ಇತಿಹಾಸವಿದೆ.

ಕಳೆದ ಶತಮಾನದಲ್ಲಿ ಯುರೋಪ್‌ನ ಬ್ರೆಡ್‌ಬಾಸ್ಕೆಟ್ ಎಂದು ಕರೆಯಲ್ಪಡುವ ಉಕ್ರೇನ್ ಹಿಂದಿನ ಯುಎಸ್‌ಎಸ್‌ಆರ್‌ನಲ್ಲಿ ಹೆಚ್ಚು ಜನಸಂಖ್ಯೆ ಮತ್ತು ಶಕ್ತಿಯುತ ಗಣರಾಜ್ಯಗಳಲ್ಲಿ ಒಂದಾಗಿತ್ತು ಮತ್ತು 1991 ರಲ್ಲಿ ಸ್ವಾತಂತ್ರ್ಯವನ್ನು ಘೋಷಿಸುವವರೆಗೂ ಕೃಷಿ ಪ್ರಧಾನವಾಗಿತ್ತು ಎಂದು ಕೌನ್ಸಿಲ್ ಆನ್ ಫಾರಿನ್ ರಿಲೇಶನ್ಸ್ ತಿಳಿಸಿದೆ.

ಆದರೆ ರಷ್ಯಾ (Russia-Ukraine Crisis) ಅಂದಿನಿಂದ ತನ್ನ ನೆರೆಯ ಪಶ್ಚಿಮದ ಮೇಲೆ ನಿಕಟವಾಗಿ ಕಣ್ಣಿಟ್ಟಿದೆ, ಆದರೆ ಉಕ್ರೇನಿಯನ್ನರು ತಮ್ಮ ಸ್ವಾತಂತ್ರ್ಯವನ್ನು ಕೆಲವೊಮ್ಮೆ ಪ್ರತಿಭಟನೆಗಳು ಮತ್ತು ಸರ್ಕಾರದ ಭ್ರಷ್ಟಾಚಾರದ ಅವಧಿಗಳಿಗೆ ಸಾಕ್ಷಿಯಾಗುವ ಮೂಲಕವಾಗಿ ಸ್ವಾತಂತ್ರ್ಯವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇನ್ನೊಂದೆಡೆಗೆ ಪಾಶ್ಚಿಮಾತ್ಯ ದೇಶಗಳೊಂದಿಗೆ ಇರುವ ಹೊಂದಾಣಿಕೆ ನಡೆ, ಹಾಗೂ ನ್ಯಾಟೋಗೆ ಸೇರಲು ಇಚ್ಚಿಸಿರುವ ಉಕ್ರೇನ್ ನ ಆಕಾಂಕ್ಷೆಗಳೆಲ್ಲವೂ ಕೂಡ ಸೋವಿಯತ್ ಪ್ರಭಾವದಿಂದ ವಿಮುಖವಾಗಲು ಮುಂದಾಗಿರುವ ನಡೆಗಳಾಗಿ ಕಾಣುತ್ತವೆ.

ಇದನ್ನೂ ಓದಿ: Russia-Ukraine War: ರಷ್ಯಾ ವಿರುದ್ಧ ಉಕ್ರೇನ್ ಬಳಿ ಕೇವಲ 3 ಆಯ್ಕೆಗಳಿವೆ, ಮುಂದಿನ 24 ಗಂಟೆಗಳಲ್ಲಿ ಉಕ್ರೇನ್ ಅಧ್ಯಕ್ಷರ ಗತಿ ಏನಾಗಲಿದೆ?

ಯಾವಾಗ ರಷ್ಯಾದ ಪರವಾದ ಒಲವನ್ನು ಹೊಂದಿರುವ ಅಧ್ಯಕ್ಷರನ್ನು 2014 ರಲ್ಲಿ ಪದಚ್ಯುತಗೊಳಿಸಲಾಯಿತೋ ಅಂದಿನಿಂದ ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಆಗಾಗ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಲೇ ಇತ್ತು, ರಷ್ಯಾ - ಜನಾಂಗೀಯ ರಷ್ಯನ್ನರು ಮತ್ತು ರಷ್ಯನ್ ಭಾಷಿಕರನ್ನು ಉಕ್ರೇನಿಯನ್ ಕಿರುಕುಳದಿಂದ ರಕ್ಷಿಸುವ ಸಂಶಯಾಸ್ಪದ ನಿಲುವು ಇದನ್ನು ಇನ್ನಷ್ಟು ಸ್ಪಷ್ಟಪಡಿಸಿತು.ಇದರ ಭಾಗವಾಗಿ ಉಕ್ರೇನ್ ನ ಕ್ರೈಮಿಯಾ ಪ್ರದೇಶದ ಮೇಲೆ ಸ್ವಾಧೀನವನ್ನು ಸಾಧಿಸುವ ಪ್ರಯತ್ನಕ್ಕೆ ಮುಂದಾಯಿತು.ಆದರೆ ರಷ್ಯಾದ ಈ ಕ್ರಮವನ್ನು ಅಂತರಾಷ್ಟ್ರೀಯ ಸಮುದಾಯವು ತೀವ್ರವಾಗಿ ಖಂಡಿಸಿತು.

ಇದೆ ವೇಳೆ ರಷ್ಯಾ ಪೂರ್ವ ಉಕ್ರೇನ್‌ನ ಡಾನ್‌ಬಾಸ್ ಪ್ರದೇಶದಲ್ಲಿ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕಿತು, ಕಾಲಾಂತರದಲ್ಲಿ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಲ್ಲಿ ಪ್ರತ್ಯೇಕತಾವಾದಿ ಚಳುವಳಿಯನ್ನು ಬೆಂಬಲಿಸಿತು, ಇದು ಸಶಸ್ತ್ರ ಸಂಘರ್ಷಕ್ಕೆ ಕಾರಣವಾಯಿತು.ಇದರಿಂದಾಗಿ ಉಭಯದೇಶಗಳ ನಡುವಿನ ಸಂಘರ್ಷದಿಂದಾಗಿ 14,000 ಕ್ಕೂ ಅಧಿಕ ಜನರು ಬಲಿಯಾಗಬೇಕಾಗಿ ಬಂದಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News