ನವದೆಹಲಿ: ಪಾಕಿಸ್ತಾನ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳು ಭಾನುವಾರ (ಮೇ 31, 2020) ಭಾರತೀಯ ಅಧಿಕಾರಿಗಳನ್ನು ಬೇಹುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಸಿಕ್ಕಿ ಬಿದ್ದಿದ್ದರಿಂದಾಗಿ ಈಗ ಅವರನ್ನು 48 ಗಂಟೆಗಳಲ್ಲಿ ಭಾರತ ತೊರೆಯುವಂತೆ ಸೂಚಿಸಲಾಗಿದೆ.


COMMERCIAL BREAK
SCROLL TO CONTINUE READING

ಹೈಕಮಿಷನ್‌ನ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳಾದ ಅಬಿದ್ ಹುಸೇನ್ ಮತ್ತು ತಾಹಿರ್ ಹುಸೇನ್ ಅವರನ್ನು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿಯಲಾಯಿತು.ಇದಲ್ಲದೆ ಇಬ್ಬರು ನಕಲಿ ಭಾರತೀಯ ಗುರುತುಗಳನ್ನು ಸಿದ್ದಪಡಿಸಿ ಅದನ್ನು ಎಲ್ಲೆಡೆ ಬಳಸಿದ್ದಾರೆ ಎಂದು ಹೇಳಲಾಗಿದೆ.ಮುಂದಿನ ಎರಡು ದಿನಗಳಲ್ಲಿ ಭಾರತವನ್ನು ತೊರೆಯುವಂತೆ ಅವರಿಗೆ ಆದೇಶಿಸಲಾಗಿದೆ.


ಇದೇ ರೀತಿ 2016 ರಲ್ಲಿ, ಪಾಕಿಸ್ತಾನದ ಹೈಕಮಿಷನ್ ಅಧಿಕಾರಿಯೊಬ್ಬರು ಮೆಹಮೂದ್ ಅಖ್ತರ್ ಅವರು ಸೂಕ್ಷ್ಮ ದಾಖಲೆಗಳನ್ನು ಸ್ವೀಕರಿಸಿದ ನಂತರ ಅವರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಯಿತು.


ವಿಚಾರಣೆ ವೇಳೆ, ಅಖ್ತರ್ ಅವರು ಪಾಕಿಸ್ತಾನ ಸೇನೆಯ ಬಲೂಚ್ ರೆಜಿಮೆಂಟ್‌ಗೆ ಸೇರಿದವರು ಮತ್ತು ಪಾಕಿಸ್ತಾನದ ಗೂಢಚಾರ ಸಂಸ್ಥೆ ಇಂಟರ್-ಸರ್ವಿಸ್ ಇಂಟೆಲಿಜೆನ್ಸ್ (ಐಎಸ್‌ಐ) ಗೆ ಸೇರ್ಪಡೆಗೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಅವರನ್ನು ಸೆಪ್ಟೆಂಬರ್ 2013 ರಿಂದ ನವದೆಹಲಿಯ ಪಾಕಿಸ್ತಾನ ಹೈಕಮಿಷನ್ನಲ್ಲಿ ನೇಮಿಸಲಾಯಿತು.