ನವದೆಹಲಿ: ಸದ್ಯ ಇಡೀ ವಿಶ್ವಾದ್ಯಂತ ಬಹುತೇಕ ದೇಶಗಳಲ್ಲಿ ಕೊರೊನಾ ವೈರಸ್ ಬೇರೂರಿದೆ. ದಿನನಿತ್ಯ ಸಾವಿರಾರು ಜನರು ಈ ಮಾರಕ ವೈರಸ್ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಕಳೆದ ಹಲವು ದಶಕಗಳಲ್ಲಿ ಇದೆ ಮೊದಲ ಬಾರಿಗೆ ಕೊರೊನಾ ವೈರಸ್ ಅತಿದೊಡ್ಡ ವಿಪತ್ತಿನ ರೂಪದಲ್ಲಿ ಎದುರಾಗಿದೆ. ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಬಹುತೇಕ ದೇಶಗಳಲ್ಲಿನ ಸರ್ಕಾರಗಳು ಶಂಕಿತ ಜನರನ್ನು ಕ್ವಾರಂಟೀನ್ ಗೆ ಕಳುಹಿಸುತ್ತಿದೆ. ಕೇವಲ ಶಂಕೆಯ ಹಿನ್ನೆಲೆ ಹಲವು ಜನರು ಖುದ್ದಾಗಿಯೇ ಕ್ವಾರಂಟೀನ್ ಗೆ ಒಳಗಾಗುತ್ತಿದ್ದು, ವೈರಸ್ ತಮ್ಮ ಮೂಲಕ ಇತರರಿಗೆ ಪಸರಿಸಬಾರದು ಎಂಬ ಮುಂಜಾಗ್ರತೆ ವಹಿಸುತ್ತಿದ್ದಾರೆ. ಈ ಹಿನ್ನೆಲೆ ವಿಶ್ವಾದ್ಯಂತ ಅನೇಕ ದೇಶದ ಸರ್ಕಾರಗಳು ಸೋಶಿಯಲ್ ಡಿಸ್ಟನ್ಸಿಂಗ್ ಕುರಿತು ಹೇಳಿಕೆಗಳನ್ನು ಬಿಡುಗಡೆಗೊಲಿಸುತ್ತಿದ್ದು, ಏತನ್ಮಧ್ಯೆ ಪೂರ್ವ ಆಫ್ರಿಕಾದ ದೇಶವೊಂದರಿಂದ ಬೆಚ್ಚಿಬೀಳಿಸುವ ವರದಿಯೊಂಡು ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಉಗಾಂಡಾದ ಆರೋಗ್ಯ ಸಚಿವಾಲಯದ ಬಿಡುಗಡೆಗೊಳಿಸಿರುವ ಒಂದು ಹೇಳಿಕೆ ಪ್ರಕಾರ ಪ್ರಕಾರ, ಅಲ್ಲಿ ಕ್ಯಾರೆಂಟೈನ್‌ನಲ್ಲಿ ವಾಸಿಸುವ ಹಲವು ಜನರು ಇದೀಗ ದೈಹಿಕ ಸಂಬಂಧ ಬೆಸೆಯಲು ಪ್ರಾರಂಭಿಸಿದ್ದಾರೆ ಎಂದಿದೆ. ರೇಡಿಯೊ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಉಗಾಂಡದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಡಾ. ಡಯಾನಾ ಅಟ್ವಿನ್, ನಾವು ಉಗಾಂಡಾದಲ್ಲಿ ಕೊರೊನಾ ಹರಡುವಿಕೆಯನ್ನು ತಡೆಯಲು ಯತ್ನಿಸುತ್ತಿದ್ದೇವೆ. ನಾವು ಇಲ್ಲಿನ ಜನರನ್ನು ಕೊರೊನಾ ವೈರಸ್ ನಿಂದ ಕಾಪಾಡಲು ಪ್ರಯತ್ನಿಸುತ್ತಿದ್ದೇವೆ. ಒಂದು ವೇಳೆ ಜನರು ಸರ್ಕಾರ ವಿಧಿಸಿರುವ ನಿಬಂಧನೆಗಳನ್ನು ಉಲ್ಲಂಘಿಸಿದರೆ ಕೊರೊನಾ ಮಹಾಮಾರಿಯನ್ನು ತಡೆಯುವ ನಡೆಸಲಾಗುತ್ತಿರುವ ಯತ್ನಗಳು ವಿಫಲವಾಗಲಿವೆ ಎಂದು ಹೇಳಿದ್ದಾರೆ.


ಈ ಸಂದರ್ಭದಲ್ಲಿ ಮಾಹಿತಿ ನೀಡಿರುವ ಅವರು ಜನರು ಕ್ವಾರಂಟೀನ್ ಸೆಂಟರ್ ಗಳಲ್ಲಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಪರಸ್ಪರ ಭೇಟಿಯಾಗುತ್ತಿದ್ದಾರೆ ಮತ್ತು ಪರಸ್ಪರರ ಕೊಠಡಿಗಳಿಗೆ ಹೋಗಿ ಶಾರೀರಿಕ ಸಂಬಂಧ ಬೆಸೆಯುತ್ತಿದ್ದಾರೆ. ಇದರಿಂದ ಕೊರೊನಾ ಮಹಾಮಾರಿ ಇನ್ನಷ್ಟು ಪಸರಿಸಲಿದೆ ಹಾಗೂ ಸೋಂಕಿನ ಆತಂಕ ಇನ್ನಷ್ಟು ಹೆಚ್ಚಾಗಲಿದೆ. ಕ್ವಾರಂಟೀನ್ ಸೆಂಟರ್ ಗಳಲ್ಲಿ ಆಫೆಯರ್ ನಡೆಸುತ್ತಿರುವ ಈ ಜನರು ಅಲ್ಲಿಂದ ಹೊರಗೆ ಹೋಗಿ ಹೋಟೆಲ್ ಗಳಲ್ಲಿ ತಮ್ಮ ತಮ್ಮ ಸಂಬಂಧಿಕರ ಜೊತೆಗೆ ಭೇಟಿ ನಡೆಸುತ್ತಿದ್ದಾರೆ. ಇದರಿಂದ ಉಗಾಂಡ ಸರ್ಕಾರ ಕೈಗೊಳ್ಳುತ್ತಿರುವ ಎಲ್ಲ ಪ್ರಯತ್ನಗಳು ವಿಫಲವಾಗಲಿವೆ. ಹೀಗಾಗಿ ಉಗಾಂಡಾ ಜನರು ಕೊರೊನಾ ವೈರಸ್ ಅನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ.