UK COVID-19 Travel Advisory: ಭಾರತದ ನೀಡಿದ ಎಚ್ಚರಿಕೆಯ ಬಳಿಕ  ಬ್ರಿಟನ್ ಮತ್ತೆ ತನ್ನ ಲಸಿಕೆ (Corona Vaccine) ನೀತಿಯನ್ನು ಬದಲಾಯಿಸಿದೆ. ಬ್ರಿಟನ್ ಇದೀಗ ತನ್ನ ಹೊಸ ಪ್ರಯಾಣ ನಿಯಮಗಳಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕರೋನಾ ಲಸಿಕೆ 'ಕೋವಿಶೀಲ್ಡ್' ಗೆ (Covishield) ಅನುಮೋದನೆ ನೀಡಿದೆ. ಆದರೆ ಯುಕೆಗೆ ಹೋಗುವ ಭಾರತೀಯರು ಭಾರತದ ಲಸಿಕೆ ಪ್ರಮಾಣಪತ್ರವನ್ನು ಅನುಮೋದಿಸದ ಕಾರಣ, ಇನ್ನೂ ನಿರ್ಬಂಧಿತರಾಗಿರಬೇಕಾಗುತ್ತದೆ. ಈ ಮೊದಲು, ಲಸಿಕೆ ನೀತಿಯಲ್ಲಿ ಬದಲಾವಣೆಗಳನ್ನು ಮಾಡುವಂತೆ ಭಾರತ ಬ್ರಿಟನ್‌ಗೆ ಎಚ್ಚರಿಕೆ ನೀಡಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Interesting Fact of Beer: ಸಾವಿರಾರು ವರ್ಷಗಳ ಬಳಿಕವೂ ಕೂಡ ಬಿಯರ್ ಬಾಟಲಿ ಬಣ್ಣ ಏಕೆ ಬದಲಾಗಿಲ್ಲ?


ಬ್ರಿಟನ್ ಗೆ ಎಚ್ಚರಿಕೆ ನೀಡಿದ್ದ ಭಾರತ
ಇದಕ್ಕೂ ಮೊದಲು ಲಸಿಕೆ ನೀತಿಯ ಬಗ್ಗೆ ಭಾರತ ಬ್ರಿಟನ್‌ಗೆ  (UK Government)ಎಚ್ಚರಿಕೆ ನೀಡಿತ್ತು. ಭಾರತದ ಆತಂಕವನ್ನು ಅಕ್ಟೋಬರ್ 4 ರೊಳಗೆ ಪರಿಹರಿಸದಿದ್ದರೆ, ಬ್ರಿಟನ್‌ನಿಂದ ಬರುವ ಪ್ರಯಾಣಿಕರ ಬಗ್ಗೆಯೂ ಇದೇ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದರು. ಹರ್ಷವರ್ಧನ್ ಶೃಂಗ್ಲಾ ಬ್ರಿಟನ್‌ನ ಈ ನೀತಿಯನ್ನು ತಾರತಮ್ಯದಿಂದ ಕೂಡಿದೆ ಎಂದು ಹೇಳಿದ್ದರು.


ಇದನ್ನೂ ಓದಿ-Harvest Moon : ಆಗಸದಲ್ಲಿಕಾಣಿಸಲಿದೆ ಚಂದ್ರನ ಅದ್ಭುತ ನೋಟ , ಇನ್ನೂ ಎರಡು ದಿನಗಳವರೆಗೆ ಕಾಣಬಹುದು ಈ ಅಮೋಘ ದೃಶ್ಯ


ಹೊಸ ನೀತಿಯ ಪರಿಷ್ಕರಣೆಯ ಒತ್ತಡ ಬ್ರಿಟನ್ ಮೇಲಿತ್ತು
ಭಾರತದಿಂದ ಬರುವ ಪ್ರಯಾಣಿಕರಿಗೆ ತನ್ನ ಕೋವಿಡ್ -19 (Covid-19) ಲಸಿಕೆಯ ನಿಯಮಗಳನ್ನು ಪರಿಶೀಲಿಸಲು ಯುಕೆ ಸರ್ಕಾರದ ಮೇಲೆ ಒತ್ತಡವಿತ್ತು. ಈ ಕುರಿತು ಹೇಳಿಕೆ ನೀಡಿದ್ದ UKಯ ರಾಷ್ಟ್ರೀಯ ಭಾರತೀಯ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ಒಕ್ಕೂಟದ (AISAU) ಅಧ್ಯಕ್ಷರಾದ ಸನಮ್ ಅರೋರಾ,  "ಭಾರತೀಯ ವಿದ್ಯಾರ್ಥಿಗಳು ತಮ್ಮನ್ನು ತಾರತಮ್ಯದ  ಕ್ರಮವೆಂದು ಭಾವಿಸಿ ಅಸಮಾಧಾನಗೊಂಡಿದ್ದಾರೆ, ಏಕೆಂದರೆ ಅವರನ್ನು US ಮತ್ತು EU ನಲ್ಲಿರುವ ತಮ್ಮ ಸಹವರ್ತಿಗಳಿಗೆ ತುಲನೆಯಲ್ಲಿ ತಮಗೆ ವಿಭಿನ್ನ ಟ್ರೀಟ್ಮೆಂಟ್ ನೀಡಲಾಗುತ್ತಿದೆ"  ಎಂದು ಹೇಳಿದ್ದರು.


ಇದನ್ನೂ ಓದಿ-Harley-Davidson Electric Bicycle: ಶೀಘ್ರದಲ್ಲಿಯೇ ಮಾರುಕಟ್ಟೆಗಿಳಿಯಲಿದೆ ಹಾರ್ಲೆ ಡೇವಿಡ್ ಸನ್ ಕಂಪನಿಯ ಈ e-Bicycle


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.