Nurse Affair: ಯುನೈಟೆಡ್ ಕಿಂಗ್‌ಡಂನ ವೇಲ್ಸ್‌ನಲ್ಲಿರುವ  ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ತನ್ನೊಂದಿಗೆ ಸಂಭೋಗದ ಸಮಯದಲ್ಲಿ ಸಾವನ್ನಪ್ಪಿದ ರೋಗಿಯೊಂದಿಗೆ ತನ್ನ ಸಂಬಂಧವನ್ನು ಆಸ್ಪತ್ರೆ ಅಧಿಕಾರಿಗಳು ಪತ್ತೆ ಮಾಡಿದ ನಂತರ ನರ್ಸ್ ವೊಬ್ಬಳು ತನ್ನ ಕೆಲಸವನ್ನು ಕಳೆದುಕೊಂಡಿದ್ದಾಳೆ. ಬಳಿಕ ನರ್ಸ್ ಮೃತಪಟ್ಟ ವ್ಯಕ್ತಿಯ ಜೊತೆಗೆ ಒಂದು ವರ್ಷಕ್ಕೂ ಅಧಿಕ ಕಾಲ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.


COMMERCIAL BREAK
SCROLL TO CONTINUE READING

ರೋಗಿಯ ಲೈಂಗಿಕ ಕ್ರೀಯೆಯ ವೇಳೆ ಮತ್ತು ಆತನ ಮರಣದ ಬಳಿಕವೂ ಕೂಡ   ಆಂಬ್ಯುಲೆನ್ಸ್‌ಗೆ ಕರೆ ಮಾಡಲಿಲ್ಲ ಎಂಬ ಆರೋಪ ನರ್ಸ್ ಮೇಲಿತ್ತು.  ವೈದ್ಯಕೀಯ ತುರ್ತು ಸಿಬ್ಬಂದಿ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ, ರೋಗಿಯು ಭಾಗಶಃ ಬೆತ್ತಲೆ ಮತ್ತು ನಿಷ್ಕ್ರೀಯನಾಗಿದ್ದ ಎಂದು ಹೇಳಲಾಗುತ್ತಿದೆ.


ರೋಗಿಯು ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು
ರೋಗಿಯು ವೇಲ್ಸ್‌ನ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ವೈದ್ಯಕೀಯ ಚಿಕಿತ್ಸೆಯ ಕಾರಣ ರೋಗಿಯು ಹೃದಯ ಸ್ತಂಭನ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ ಎಂದು ಟೈಮ್ಸ್ ಯುಕೆ ವರದಿ ಮಾಡಿದೆ.


ನರ್ಸಿಂಗ್ ಮತ್ತು ಮಿಡ್‌ವೈಫರಿ ಕೌನ್ಸಿಲ್ (ಎನ್‌ಎಂಸಿ) ಸಮಿತಿಯ ಮುಂದೆ ವಿವರವಾದ ತನಿಖೆ ಮತ್ತು ವಿಚಾರಣೆಯ ಬೇಡಿಕೆಯೂ ಇದೀಗ ಕೇಳಿಬಂದಿದೆ.


ಸಹೋದ್ಯೋಗಿಗಳ ಸಲಹೆ ನಿರ್ಲಕ್ಷಿಸಿದ ನರ್ಸ್
ಆರೋಪಿ ನರ್ಸ್‌ ಸಹೋದ್ಯೋಗಿಗಳು ಮೃತ ರೋಗಿಯೊಂದಿಗಿನ ಆಕೆಯ ಸಂಬಂಧದ ಬಗ್ಗೆ ತಿಳಿದಿದ್ದರು ಮತ್ತು ಅವರಲ್ಲಿ ಕೆಲವರು ಭೀಕರ ಪರಿಣಾಮಗಳ ಬಗ್ಗೆ ಎಚ್ಚರಿಕೆಯನ್ನು ಕೂಡ ನೀಡಿದ್ದರು ಎನ್ನಲಾಗಿದೆ. ಆದರೆ ಅವರು ಸ್ಪಷ್ಟವಾಗಿ ಈ ಸಲಹೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ


ನರ್ಸ್ ತನ್ನ ವೃತ್ತಿಯ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಲ್ಲದೆ, ಆಂಬ್ಯುಲೆನ್ಸ್ ಅನ್ನು ಕರೆಯದೆ ಓರ್ವ ನರ್ಸ್ ಆಗಿ ವಿಫಲರಾಗಿದ್ದಾರೆ. ಬದಲಾಗಿ, ತನ್ನ ಸಂಗಾತಿ ಕಾರಿನಲ್ಲಿ ಕುಸಿದು ಬಿದ್ದ ನಂತರ ಸಹೋದ್ಯೋಗಿಯನ್ನು ಕರೆದಿದ್ದಾಳೆ. ಸಹೋದ್ಯೋಗಿಗಳು ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಕೇಳಿಕೊಂಡರೂ ಕೂಡ ಅವರು ನಿರ್ಲಕ್ಷಿಸಿದ್ದಾರೆ ಎಂದು ಹೇಳಲಾಗಿದೆ.


ನರ್ಸ್ ಆರಂಭದಲ್ಲಿ ನಿರಾಕರಿಸಿದ್ದಾಳೆ
ಫಾಕ್ಸ್ ನ್ಯೂಸ್ ಪ್ರಕಾರ, ನರ್ಸ್ ಆರಂಭದಲ್ಲಿ ಪೊಲೀಸರಿಗೆ ತಾನು ರೋಗಿಯನ್ನು ಭೇಟಿ ಮಾಡಲು ಹೋಗಿದ್ದಾಗಿ ಹೇಳಿದ್ದು, ಆತನು ತನ್ನ ವೈದ್ಯಕೀಯ ಸ್ಥಿತಿಯ ಬಗ್ಗೆ ಫೇಸ್‌ಬುಕ್‌ನಲ್ಲಿ ಸಂದೇಶವನ್ನು ಕಳುಹಿಸಿದ್ದನು ಎಂದಿದ್ದಾಳೆ. ಆತನಿಗೆ ಅಸ್ವಸ್ಥತೆ ಇದೆ ಎಂದು ಹೇಳಿದಾಗ  ರೋಗಿಯನ್ನು ಭೇಟಿಯಾಗಲು ಹೋಗಿರುವುದಾಗಿ ಆಕೆ ಹೇಳಿದ್ದಾಳೆ. 


ಇದನ್ನೂ ಓದಿ-ಇದೆ ನೋಡಿ ಕಿಸ್ ನಲ್ಲಿ ನಿರ್ಮಾಣಗೊಂಡ ವಿಶ್ವ ದಾಖಲೆ, ಬರೋಬ್ಬರಿ ಇಷ್ಟು ಗಂಟೆ ಕಿಸ್ಸ್ ಮಾಡಿದ ದಂಪತಿ ಜೋಡಿ!


ದಿ ಟೆಲಿಗ್ರಾಫ್ ಪ್ರಕಾರ, ನರ್ಸ್ ಅವರು ಕಾರಿನ ಹಿಂಭಾಗದಲ್ಲಿ ಕೇವಲ 30 ರಿಂದ 45 ನಿಮಿಷಗಳ ಕಾಲ ಕಳೆದಿದ್ದು,  ಕೇವಲ ತಾವು ಮಾತನಾಡುತ್ತಿದ್ದೆವು ಎಂದು ಹೇಳಿದ್ದಾಳೆ.


ಇದನ್ನೂ ಓದಿ-ಪರಸ್ಪರ ಕಾದಾಟಕ್ಕಿಳಿದ ಕಾಳಿಂಗ ಸರ್ಪ-ಹೆಬ್ಬಾವು, ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರ ವೈರಲ್


ಫೆಬ್ರವರಿಯಲ್ಲಿ ಸಮಿತಿಯ ಮುಂದೆ ವಿಚಾರಣೆಯ ಸಮಯದಲ್ಲಿ, ರೋಗಿಯು ಇದ್ದಕ್ಕಿದ್ದಂತೆ ನರಳಲು ಆರಂಭಿಸಿದರು ಮತ್ತು ಮೃತಪಟ್ಟರು ಎಂದು ನರ್ಸ್ ಹೇಳಿದ್ದಳು. ಬಳಿಕ ಆಕೆ ಆ ವ್ಯಕ್ತಿಯೊಂದಿಗೆ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ ಮತ್ತು ಆ ರಾತ್ರಿ ಲೈಂಗಿಕತೆಗಾಗಿ ಆತನನ್ನು ಭೇಟಿಯಾಗಿದ್ದಾಗಿ ಒಪ್ಪಿಕೊಂಡಿದ್ದಾಳೆ. ಮೇ ತಿಂಗಳಲ್ಲಿ ನಂತರದ ವಿಚಾರಣೆಯ ಸಮಯದಲ್ಲಿ, ಆಕೆ ಮೃತಪಟ್ಟ ವ್ಯಕ್ತಿಯ ಜೊತೆಗೆ ತನ್ನ ಸಂಬಂಧವನ್ನು ಒಪ್ಪಿಕೊಂಡಿದ್ದಾಳೆ, ಪರಿಣಾಮವಶಾತ್ ಆಕೆಯನ್ನು ಆಕೆಯ ಕರ್ತವ್ಯದಿಂದ ವಜಾಗೊಳಿಸಲಾಗಿದೆ. ವರದಿಗಳ ಪ್ರಕಾರ, ನರ್ಸ್ 'ಶುಶ್ರೂಷಾ ವೃತ್ತಿಗೆ ಅಪಖ್ಯಾತಿ ತಂದಿದ್ದಾರೆ' ಎಂದು ಆಸ್ಪತ್ರೆ ಒಪ್ಪಿಕೊಂಡಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.