ನವದೆಹಲಿ: ಕೋಳಿ ಜಗಳದಂತೆ ಆರಂಭವಾಗಿ, ಭೀಕರ ಯುದ್ಧಕ್ಕೆ ತಿರುಗಿದ ಉಕ್ರೇನ್‌ VS ರಷ್ಯಾ ನಡುವಿನ ಸಮರಕ್ಕೆ ಇಂದಿಗೆ ಭರ್ತಿ 6 ತಿಂಗಳು. ಮಾತುಕತೆ ಮೂಲಕವೇ ಮುಗಿದು ಹೋಗಬೇಕಿದ್ದ ಯುದ್ಧ ಸಾವಿರಾರು ಅಮಾಯಕರ ಪ್ರಾಣತ್ಯಾಗಕ್ಕೆ ಕಾರಣವಾಗಿದೆ. ಲೆಕ್ಕವಿಲ್ಲದಷ್ಟು ಶವಗಳು ಅನಾಥವಾಗಿ ಉಕ್ರೇನ್‌ ಕಟ್ಟಡಗಳ ಒಳಗೆ ಕೊಳೆಯುತ್ತಿದ್ದರೆ, ಮತ್ತೊಂದು ಕಡೆ ಅಂತಾರಾಷ್ಟ್ರೀಯ ರಾಜಕೀಯ ಲೆಕ್ಕಾಚಾರಗಳು ಭರದಿಂದ ಸಾಗಿವೆ.


COMMERCIAL BREAK
SCROLL TO CONTINUE READING

ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿಯ ಪ್ರತಿಷ್ಠೆಗಾಗಿ ಯುದ್ಧ ಆರಂಭವಾಯಿತು ಎಂಬ ಆಕ್ರೋಶ ಜಗತ್ತಿನಾದ್ಯಂತ ವ್ಯಕ್ತವಾಗುತ್ತಿದೆ. ಅದೇ ರೀತಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ ವಿರುದ್ಧವೂ ಜನರ ಮುನಿಸು ಮುಂದುವರೆದಿದೆ. ಈವರೆಗೂ ಯುದ್ಧ ಮುಗಿದಿಲ್ಲ, ಆದರೆ ಇಲ್ಲಿಯವರೆಗೂ ಸುಮಾರು 8 ಸಾವಿರ ನಾಗಿಕರು ಹಾಗೂ 10 ಸಾವಿರ ಉಕ್ರೇನ್‌ ಯೋಧರು ಮೃತಪಟ್ಟಿದ್ದಾರೆ. ರಷ್ಯಾ ಕೂಡ ಸುಮಾರು 6 ಸಾವಿರ ಯೋಧರನ್ನು ಕಳೆದುಕೊಂಡಿದೆ. ಜೊತೆಗೆ 30 ಸಾವಿರ ಉಕ್ರೇನ್‌ನ ಸೈನಿಕರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.


ಇದನ್ನೂ ಓದಿ: Snake Attack: ಕಿರುಕುಳ ನೀಡಿದ ವ್ಯಕ್ತಿಯ ಕೈಗೆ ಪದೇ ಪದೇ ದಾಳಿ ಇಟ್ಟ ಹಾವು... ವಿಡಿಯೋ ನೋಡಿ


ಶೇ.20ರಷ್ಟು ಮಾತ್ರ ವಶ


6 ತಿಂಗಳಿಂದ ಉಕ್ರೇನ್‌ ನೆಲದ ಮೇಲೆ ರಷ್ಯಾ ಭೀಕರ ದಾಳಿ ನಡೆಸುತ್ತಿದ್ದರೂ ವಸೂಲಿ ಆಗಿರುವುದು ಕೇವಲ ಶೇ.20ರಷ್ಟು ಭೂಮಿ ಮಾತ್ರ. ಈವರೆಗೂ ರಷ್ಯಾ ಸೇನೆ ಉಕ್ರೇನ್‌ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಆಗಿಲ್ಲ. ಶೇ.20ರಷ್ಟು ಜಾಗದ ಮೇಲೆ ಮಾತ್ರ ರಷ್ಯಾ ಹಿಡಿತ ಸಾಧಿಸಿದೆ ಅಷ್ಟೇ. ಆದರೆ ಆರಂಭದಲ್ಲಿ ಇದ್ದ ಹುಮ್ಮಸ್ಸು ನೋಡಿದರೆ ರಷ್ಯಾ ಕೆಲವೇ ದಿನಗಳಲ್ಲಿ ಇಡೀ ಉಕ್ರೇನ್‌ನ ತನ್ನ ವಶಕ್ಕೆ ಪಡೆಯುವ ಮುನ್ಸೂಚನೆ ಇತ್ತು. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲ ಹಾಗೂ ನ್ಯಾಟೋ ಸದಸ್ಯ ದೇಶಗಳ ಪರೋಕ್ಷ ಸಹಾಯವೇ ಉಕ್ರೇನ್‌ ಸೇನೆಗೆ ನೆರವಾಗುತ್ತಿದೆ. ಶಸ್ತ್ರಾಸ್ತ್ರಗಳು ಹೊರಗಿನಿಂದ ಸಿಗುತ್ತಿರುವ ಕಾರಣಕ್ಕೆ ರಷ್ಯಾ ವಿರುದ್ಧ ಉಕ್ರೇನ್‌ ಯೋಧರು ಈಗಲೂ ಹೋರಾಡುತ್ತಿದ್ದಾರೆ.


ಭಾರತದ ಜಾಣ ನಡೆ..!


ಅಂತಾರಾಷ್ಟ್ರೀಯ ವಿಚಾರಗಳು ದೇಶದ ಆರ್ಥಿಕತೆ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಅದರಲ್ಲೂ ರಷ್ಯಾ-ಉಕ್ರೇನ್‌ ಯುದ್ಧ ತೀವ್ರ ಕಗ್ಗಂಟಾಗಿತ್ತು. ಏಕೆಂದರೆ ಒಂದೆಡೆ ರಷ್ಯಾ ನಮಗೆ ಅಂದರೆ ಭಾರತಕ್ಕೆ ಆಪ್ತ ರಾಷ್ಟ್ರ. ಇನ್ನೊಂದು ಕಡೆ ಉಕ್ರೇನ್‌ ವಿರೋಧ ಕಟ್ಟಿಕೊಂಡರೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಬೆಂಕಿ ಬಿದ್ದಂತೆ ಆಗುತ್ತದೆ. ಇದೇ ಕಾರಣಕ್ಕೆ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ವಾಗ್ದಂಡನೆಗೆ ಅಮೆರಿಕ ಬೆಂಬಲಿತ ನ್ಯಾಟೋ ರಾಷ್ಟ್ರಗಳು ಮುಂದಾದಾಗ ಭಾರತ ಜಾಣ ನಡೆ ಅನುಸರಿಸಿತ್ತು. ಯಾರ ಪರವೂ ವೋಟ್ ಮಾಡದೆ ಭಾರತ ತಟಸ್ಥವಾಗಿತ್ತು. ಚೀನಾ ಕೂಡ ಇದೇ ಹಾದಿ ಅನುಸರಿಸುವ ಮೂಲಕ ಸೇಫ್‌ ಆಗಿತ್ತು. ಭಾರತದ ಈ ನಡೆಗೆ ಖುದ್ದು ರಷ್ಯಾ ಖುಷಿಯಾಗಿತ್ತು, ರಷ್ಯಾ ಅಧಿಕಾರಿಗಳು ಭಾರತದ ಸಹಾಯ ನೆನೆದು ಸಂದೇಶ ಕಳುಹಿಸಿದ್ದರು.


ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! ಮತ್ತೆ ವಿದ್ಯಾರ್ಥಿ ವೀಸಾ ನೀಡಲಿದೆ ಚೀನಾ


ಜಗತ್ತಿನಲ್ಲಿ ಲಕ್ಷಾಂತರ ಯುದ್ಧಗಳು ನಡೆದಿವೆ, ಮುಗಿದಿವೆ. ಆದರೆ ಆಧುನಿಕ ಕಾಲಘಟ್ಟದಲ್ಲಿ 3ನೇ ಮಹಾಯುದ್ಧದ ಭೀತಿ ಹುಟ್ಟುಹಾಕಿದ್ದ ಉಕ್ರೇನ್‌ & ರಷ್ಯಾ ಯುದ್ಧ ಇನ್ನೂ ಮುಗಿದಿಲ್ಲ. ಇದು ಪರಿಸ್ಥಿತಿಯನ್ನು ಬೂದಿ ಮುಚ್ಚಿದ ಕೆಂಡದಂತೆ ಬಿಸಿಯಾಗಿ ಇಟ್ಟಿದ್ದು, ಯಾರದ್ದೋ ಪ್ರತಿಷ್ಠೆಗೆ ಸಾವಿರಾರು ಜನ ಜೀವ ಕಳೆದುಕೊಂಡಿದ್ದಾರೆ. ಅನಾಥ ಶವಗಳಿಗೆ ಸಂಸ್ಕಾರ ಮಾಡುವುದಕ್ಕೂ ಆಗುತ್ತಿಲ್ಲ. ಇನ್ನಾದರೂ ಶಾಂತಿ ಮಾತುಕತೆ ಮೂಲಕ ಯುದ್ಧ ನಿಲ್ಲಬೇಕಿದೆ ಎಂಬುದೇ ಕೋಟಿ ಕೋಟಿ ಜನರ ಬಯಕೆಯಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.