UN Report: ಚೀನಾದ ಕ್ರೂರ ಮುಖ ಮತ್ತೆ ಮತ್ತೆ ಜಗತ್ತಿನ ಮುಂದೆ ಬರುತ್ತಲೇ ಇದೆ. ಸದ್ಯ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವರದಿಯೊಂದು ಚೀನಾದ ಅಸಲಿ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದ್ದು, ಸಾಕಷ್ಟು ಭಯಾನಕವಾಗಿದೆ. ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಉಯಿಘರ್‌ಗಳು ಮತ್ತು ಇತರ ಅಲ್ಪಸಂಖ್ಯಾತರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಯುಎನ್ ವರದಿಯು ಹೇಳಿಕೊಂಡಿದೆ, ಇದನ್ನು ಮಾನವೀಯತೆಯ ವಿರುದ್ಧದ ಘೋರ ಅಪರಾಧ ಎಂದು ಕರೆಯಲಾಗುತ್ತದೆ. ಈ ವರದಿಯಲ್ಲಿ ಉಯಿಘರ್ ಮುಸ್ಲಿಮರ ಮೇಲಿನ ದೌರ್ಜನ್ಯವನ್ನು ಉಲ್ಲೇಖಿಸಲಾಗಿದೆ. ಈ ವರದಿಗಾಗಿ ಬಹಳ ಸಮಯದಿಂದ ಕಾಯಲಾಗಿತ್ತು, ಇದನ್ನು ಜಿನೀವಾದಲ್ಲಿ ಬಿಡುಗಡೆ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಚೀನಾದ ನೈಜ ಮುಖ ಬಯಲು ಮಾಡಿದ ವರದಿ :


ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದೆ. ಅವರ ನಾಲ್ಕು ವರ್ಷಗಳ ಅವಧಿ ಮುಗಿಯುವ ಮುನ್ನವೇ ಜಿನೀವಾದಲ್ಲಿ ಈ ವರದಿಯನ್ನು ಸಾರ್ವಜನಿಕಗೊಳಿಸಲಾಗಿದೆ, ಇದರಲ್ಲಿ ಚೀನಾದ ಸತ್ಯವು ಜಗತ್ತಿಗೆ ಬಂದಿದೆ. ಈ ವರದಿಯನ್ನು ಬಿಡುಗಡೆ ಮಾಡಿದ ಯುಎನ್ ಮಾನವ ಹಕ್ಕುಗಳ ಕಮಿಷನರ್ ಮಿಚೆಲ್ ಬ್ಯಾಚೆಲೆಟ್ ಇದನ್ನು ಸಾರ್ವಜನಿಕರಿಗೆ ತರುವುದು ಬಹಳ ಮುಖ್ಯ ಎಂದು ಹೇಳಿದರು. 


ಇದನ್ನೂ ಓದಿ : Xi Jinping: ಮಾವೋ ನಂತರ ಚೀನಾದ ಅತ್ಯಂತ ಶಕ್ತಿಶಾಲಿ ನಾಯಕ ಕ್ಸಿ ಜಿನ್‌ಪಿಂಗ್


ವಿಶ್ವಸಂಸ್ಥೆಯ ವರದಿಯಲ್ಲಿ ಏನು ಹೇಳಲಾಗಿದೆ ಗೊತ್ತಾ?


ಯುಎನ್ ಬಿಡುಗಡೆ ಮಾಡಿದ ಈ ವರದಿಯಲ್ಲಿ ಚೀನಾದಲ್ಲಿ ಉಯಿಘರ್ ಮತ್ತು ಇತರ ಮುಸ್ಲಿಂ ಸಮುದಾಯಗಳ ಮೇಲಿನ ದೌರ್ಜನ್ಯವನ್ನು ಉಲ್ಲೇಖಿಸಲಾಗಿದೆ. ಚೀನಾ ಹಲವು ವರ್ಷಗಳಿಂದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಸುಮಾರು ಒಂದು ಮಿಲಿಯನ್ ಉಯಿಘರ್ ಮುಸ್ಲಿಮರನ್ನು ಗುಲಾಮರನ್ನಾಗಿ ಮಾಡಿದೆ ಮತ್ತು ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳನ್ನು ಉಗ್ರವಾಗಿ ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ. ಈ ವರದಿಯನ್ನು ಬಿಡುಗಡೆ ಮಾಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರೇ, ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶಕ್ಕೆ ಭೇಟಿ ನೀಡಿದ್ದು, ನಂತರ ಈ ಸಂಪೂರ್ಣ ವರದಿಯನ್ನು ಸಿದ್ಧಪಡಿಸಲಾಗಿದೆ. 


ದುಷ್ಕೃತ್ಯಗಳ ಪುರಾವೆಗಳು ಲಭ್ಯ : 


ಚೀನಾದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಲೈಂಗಿಕ ಮತ್ತು ಲಿಂಗ ಆಧಾರಿತ ಹಿಂಸಾಚಾರ ನಡೆಯುತ್ತಿದೆ ಎಂದು ಈ ವರದಿ ಹೇಳಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತು ಮತ್ತು ಪುರುಷರನ್ನು ಬಲವಂತವಾಗಿ ಸಾಯಿಸಲಾಯಿತು. ಮುಸ್ಲಿಂ ಸಮುದಾಯದ ಜನರನ್ನು ಕಸ್ಟಡಿಯಲ್ಲಿಟ್ಟುಕೊಂಡು ಅನೇಕ ರೀತಿಯ ಚಿತ್ರಹಿಂಸೆಗಳನ್ನು ನೀಡಲಾಯಿತು. ತನಿಖಾಧಿಕಾರಿಗಳು "ಮಾನವೀಯತೆಯ ವಿರುದ್ಧದ ಅಪರಾಧ" ದ ದುಷ್ಕೃತ್ಯಗಳ "ವಿಶ್ವಾಸಾರ್ಹ ಪುರಾವೆಗಳನ್ನು" ಕಂಡುಕೊಂಡಿದ್ದಾರೆ ಎಂದು ಹೇಳುತ್ತಾರೆ.


ಇದನ್ನೂ ಓದಿ : Monkeypox : ಮಂಕಿಪಾಕ್ಸ್‌ಗೆ ಮೊದಲ ಬಲಿ, ಹೆಚ್ಚಿದ ಆತಂಕ


ಇದು ಮಾನಹಾನಿ ಮಾಡುವ ಪಿತೂರಿ ಎಂದ ಚೀನಾ :


ಈ ವರದಿಯ ಬಗ್ಗೆ ಚೀನಾ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದೆ. ವರದಿಯ ಮೇಲೆ ಒತ್ತಡ ಹೇರಲು ಯತ್ನಿಸಿದ್ದಲ್ಲದೆ, ಈ ವರದಿಯನ್ನು ನಿಲ್ಲಿಸುವಂತೆಯೂ ಮನವಿ ಮಾಡಿದೆ. ಇದೀಗ ವರದಿ ಬಿಡುಗಡೆಯಾದ ಬೆನ್ನಲ್ಲೇ, ತನ್ನ ಮಾನಹಾನಿ ಮಾಡಲು ಈ ಸಂಚು ಮಾಡಲಾಗಿದೆ ಎಂದು ಚೀನಾ ಆರೋಪಿಸಿದೆ. ಪಾಶ್ಚಿಮಾತ್ಯ ದೇಶಗಳು ಈ ಷಡ್ಯಂತ್ರದಲ್ಲಿ ಭಾಗಿಯಾಗಿವೆ ಎಂದು ಆರೋಪ ಮಾಡಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.