World Population: ಮುಂದಿನ 2 ದಿನಗಳಲ್ಲಿ 800 ಕೋಟಿ ತಲುಪಲಿದೆ ವಿಶ್ವದ ಜನಸಂಖ್ಯೆ!
World Population: ಈ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯು ಬಿಡುಗಡೆ ಮಾಡಿದ ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯೆಯ ನಿರೀಕ್ಷೆಗಳು 2022 ರಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ
World Population: ವಿಶ್ವಸಂಸ್ಥೆಯು ನವೆಂಬರ್ 15 ರ ವೇಳೆಗೆ ವಿಶ್ವದ ಜನಸಂಖ್ಯೆಯು ಎಂಟು ಬಿಲಿಯನ್ (800 ಮಿಲಿಯನ್) ತಲುಪುತ್ತದೆ ಎಂದು ಅಂದಾಜಿಸಿದೆ. ವರದಿಯ ಪ್ರಕಾರ, 2023 ರಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ. 1950 ರ ನಂತರ ಮೊದಲ ಬಾರಿಗೆ 2020 ರಲ್ಲಿ ಜಾಗತಿಕ ಜನಸಂಖ್ಯೆಯ ಬೆಳವಣಿಗೆಯು ಶೇಕಡಾ ಒಂದಕ್ಕಿಂತ ಕಡಿಮೆಯಿರುತ್ತದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ: Citizen Journalism ಜಾರಿಗೆ ಪ್ರಮುಖ ಮಾಧ್ಯಮಗಳು ತಡೆಗೋಡೆಯಾಗಿವೆ ಎಂದ ಎಲೋನ್ ಮಸ್ಕ್...!
ಈ ವರ್ಷ ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯು ಬಿಡುಗಡೆ ಮಾಡಿದ ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯೆಯ ನಿರೀಕ್ಷೆಗಳು 2022 ರಲ್ಲಿ ಇದನ್ನು ಬಹಿರಂಗಪಡಿಸಲಾಗಿದೆ.
ಯುಎನ್ ಅಂದಾಜಿನ ಪ್ರಕಾರ, ವಿಶ್ವದ ಜನಸಂಖ್ಯೆಯು 2030 ರಲ್ಲಿ 850 ಕೋಟಿ, 2050 ರಲ್ಲಿ 970 ಕೋಟಿ ಮತ್ತು 2080 ರಲ್ಲಿ ಸುಮಾರು 1,400 ಕೋಟಿ ತಲುಪುತ್ತದೆ. ಅದರ ನಂತರ ಇದು ಇನ್ನೂ ಇಪ್ಪತ್ತು ವರ್ಷಗಳವರೆಗೆ ಅಂದರೆ 2100 ರವರೆಗೆ ಸ್ಥಿರವಾಗಿ ಮುಂದುವರಿಯುತ್ತದೆ. 2050 ರ ವೇಳೆಗೆ ಯೋಜಿತ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಬೆಳವಣಿಗೆಯು ಕೇವಲ ಎಂಟು ದೇಶಗಳಲ್ಲಿ ಕೇಂದ್ರೀಕೃತವಾಗಿರುತ್ತದೆ ಎಂದು ವರದಿ ಹೇಳಿದೆ. ಅವುಗಳೆಂದರೆ. ಕಾಂಗೋ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪೈನ್ಸ್ ಮತ್ತು ತಾಂಜಾನಿಯಾ.
ಇದನ್ನೂ ಓದಿ: ಸೂರ್ಯ ಹೇಗೆ ಮತ್ತು ಯಾವಾಗ ಸಾಯುತ್ತಾನೆ ಗೊತ್ತಾ? ಇಲ್ಲಿದೆ ವಿಜ್ಞಾನಿಗಳ ಉತ್ತರ...!
ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಹೆಚ್ಚುತ್ತಿರುವ ಜನಸಂಖ್ಯೆಯನ್ನು ಮನುಷ್ಯನ ಮಹತ್ವದ ಹೆಜ್ಜೆ ಎಂದು ಕರೆದಿದ್ದಾರೆ. ಸಾರ್ವಜನಿಕ ಆರೋಗ್ಯ, ವೈಯಕ್ತಿಕ ನೈರ್ಮಲ್ಯ, ಪೋಷಣೆ ಮತ್ತು ಔಷಧದಲ್ಲಿನ ಸುಧಾರಣೆಗಳಿಂದಾಗಿ ಮಾನವನ ಜೀವಿತಾವಧಿಯಲ್ಲಿ ಕ್ರಮೇಣ ಹೆಚ್ಚಳವಾಗಿದ್ದು ಈ ಅಭೂತಪೂರ್ವ ಬೆಳವಣಿಗೆಗೆ ಕಾರಣವಾಗಿದೆ ಎಂದು ಯುಎನ್ ಹೇಳಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.