Citizen Journalism ಜಾರಿಗೆ ಪ್ರಮುಖ ಮಾಧ್ಯಮಗಳು ತಡೆಗೋಡೆಯಾಗಿವೆ ಎಂದ ಎಲೋನ್ ಮಸ್ಕ್...!

ನಾಗರಿಕ ಪತ್ರಿಕೋದ್ಯಮದ ಪ್ರಖರ ಧ್ವನಿ ಟ್ವಿಟ್ಟರ್ ಆಗಿದೆ, ಆದರೆ ಅದನ್ನು ಜಾರಿ ಗೊಳಿಸಲು ಪ್ರತಿಷ್ಠಿತ ಮಾಧ್ಯಮಗಳು ತಡೆಗೋಡೆಯಾಗಿವೆ ಎಂದು ಟ್ವಿಟ್ಟರ್ ಮುಖ್ಯಸ್ಥ ಎಲೋನ್ ಮಸ್ಕ್ ಟೀಕಿಸಿದ್ದಾರೆ.

Written by - Zee Kannada News Desk | Last Updated : Nov 12, 2022, 03:55 PM IST
  • ಇನ್ನು ಮುಂದುವರೆದು "ಮುಖ್ಯವಾಹಿನಿಯ ಮಾಧ್ಯಮವು ಇನ್ನೂ ಅಭಿವೃದ್ಧಿ ಹೊಂದುತ್ತದೆ,
  • ಆದರೆ ನಾಗರಿಕರಿಂದ ಹೆಚ್ಚಿದ ಸ್ಪರ್ಧೆಯು ಮಾಹಿತಿಯ ಮೇಲಿನ ಅವರ ನಿಯಂತ್ರಣಕ್ಕೆ ತಡೆಯಾಗುತ್ತದೆ,
  • ಇದರಿಂದಾಗಿ ಅದು ಹೆಚ್ಚು ನಿಖರವಾಗಿಸಲು ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.
Citizen Journalism ಜಾರಿಗೆ ಪ್ರಮುಖ ಮಾಧ್ಯಮಗಳು ತಡೆಗೋಡೆಯಾಗಿವೆ ಎಂದ ಎಲೋನ್ ಮಸ್ಕ್...! title=
file photo

ನ್ಯೂಯಾರ್ಕ್: ನಾಗರಿಕ ಪತ್ರಿಕೋದ್ಯಮದ ಪ್ರಖರ ಧ್ವನಿ ಟ್ವಿಟ್ಟರ್ ಆಗಿದೆ, ಆದರೆ ಅದನ್ನು ಜಾರಿ ಗೊಳಿಸಲು ಪ್ರತಿಷ್ಠಿತ ಮಾಧ್ಯಮಗಳು ತಡೆಗೋಡೆಯಾಗಿವೆ ಎಂದು ಟ್ವಿಟ್ಟರ್ ಮುಖ್ಯಸ್ಥ ಎಲೋನ್ ಮಸ್ಕ್ ಟೀಕಿಸಿದ್ದಾರೆ.

ನಾಗರಿಕ ಪತ್ರಿಕೋದ್ಯಮದ ಕುರಿತಾಗಿ ಟ್ವೀಟ್ ಮಾಡಿರುವ ಮಸ್ಕ್ 'ಟ್ವಿಟರ್ ನಾಗರಿಕ ಪತ್ರಿಕೋದ್ಯಮವನ್ನು ಉನ್ನತೀಕರಿಸುವ ಗುರಿಯನ್ನು ಅನುಸರಿಸುತ್ತಿದ್ದಂತೆ,  ಪ್ರತಿಷ್ಠಿತ ಮಾಧ್ಯಮಗಳು ಅದು ಸಂಭವಿಸುವುದನ್ನು ತಡೆಯಲು ಎಲ್ಲ ಪ್ರಯತ್ನವನ್ನೂ ಮಾಡುತ್ತಿವೆ." ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: IAS ಅಧಿಕಾರಿ ಟೀನಾ ದಾಬಿ ನ್ಯೂ ಲುಕ್‌ : ಯಾವ ಹಿರೋಯಿನ್‌ಗೂ ಕಮ್ಮಿ ಇಲ್ಲ ಇವರು..!

ಇನ್ನು ಮುಂದುವರೆದು "ಮುಖ್ಯವಾಹಿನಿಯ ಮಾಧ್ಯಮವು ಇನ್ನೂ ಅಭಿವೃದ್ಧಿ ಹೊಂದುತ್ತದೆ, ಆದರೆ ನಾಗರಿಕರಿಂದ ಹೆಚ್ಚಿದ ಸ್ಪರ್ಧೆಯು ಮಾಹಿತಿಯ ಮೇಲಿನ ಅವರ ನಿಯಂತ್ರಣಕ್ಕೆ ತಡೆಯಾಗುತ್ತದೆ, ಇದರಿಂದಾಗಿ ಅದು ಹೆಚ್ಚು ನಿಖರವಾಗಿಸಲು ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: I am a CEO : ಕೆಜಿಎಫ್‌ ಸ್ಟೈಲ್‌ನಲ್ಲಿ ಹೊಸ ಕಂಪನಿ ಹೆಸರೇಳಿದ ಡ್ರೋನ್‌ ಪ್ರತಾಪ್‌

ಮೂಲಭೂತವಾಗಿ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ನಾಗರಿಕ ಪತ್ರಿಕೋದ್ಯಮವು ಹೆಚ್ಚುತ್ತಿರುವ ಕಾರಣ ಮಾಹಿತಿಯ ನಿಖರತೆಯನ್ನು ಪರಿಶೀಲಿಸುವ ಮುಖ್ಯವಾಹಿನಿಯ ಮಾಧ್ಯಮದ ಅಗತ್ಯವು ಹೆಚ್ಚಾಗಿದೆ ಎಂದು ಟೆಕ್ ಉದ್ಯಮಿ ಸೂಚಿಸಲು ಬಯಸಿದಂತಿದೆ.

ಏತನ್ಮಧ್ಯೆ, ಟ್ವಿಟರ್ ಒಪ್ಪಂದವನ್ನು ಪೂರ್ಣಗೊಳಿಸಿದ ನಂತರ, ಟ್ವಿಟ್ಟರ್ ಮುಖ್ಯಸ್ಥರಾಗಿರುವ ಎಲೋನ್ ಮಸ್ಕ್ ಈಗ ವಿವಾದಾತ್ಮಕ ನಿರ್ಧಾರಗಳಿಂದ ಎಲ್ಲರ ಟೀಕೆಗಳಿಗೆ ಕಾರಣಕರ್ತರಾಗಿದ್ದಾರೆ.

ಅವರ ವಿವಾದಾತ್ಮಕ ಬದಲಾವಣೆಯಲ್ಲಿ ಬ್ಲೂ ಟಿಕ್ ಸೇವೆ ಪಡೆಯಲು 8 ಡಾಲರ್ ಕಡ್ಡಾಯಗೊಳಿಸಿರುವುದು ಸೇರಿದೆ.ಈ ನಿರ್ಧಾರ ಹಲವರ ಕೆಂಗಣ್ಣಿಗೆ ಕಾರಣವಾಗಿದೆ ಅದರಲ್ಲೂ ಕೆಲವು ಜಾಹಿರಾತುದಾರರು ಈಗ ಟ್ವಿಟ್ಟರ್ ನಿಂದ ಹಿಂದೆ ಸರಿದಿದ್ದಾರೆ. ಅಷ್ಟೇ ಅಲ್ಲದೆ ಇದರಿಂದಾಗಿ ಅನೇಕ ನಕಲಿ ಖಾತೆಗಳು ಸೃಷ್ಟಿಯಾಗುತ್ತಿದ್ದು, ಇದರಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News