ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸಾರ್ವತ್ರಿಕವಾಗಿ ಉತ್ತರ ಕೊರಿಯಾದ ಮೇಲೆ ಆರ್ಥಿಕ ದಿಗ್ಭಂದನ ವಿಧಿಸಿದೆ. ಶುಕ್ರವಾರದಂದು ಬಹುತೇಕ ರಾಷ್ಟ್ರಗಳು ಈ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿವೆ.


COMMERCIAL BREAK
SCROLL TO CONTINUE READING

ಈ ಭದ್ರತಾ ಮಂಡಳಿಯಲ್ಲಿ ವಿಶೇಷವಾಗಿ ಉತ್ತರ ಕೊರಿಯಾಗೆ ಹತ್ತಿರವಿರುವ ಚೀನಾದ ಬೆಂಬಲವನ್ನು ಗಳಿಸುವಲ್ಲಿ  ಅಮೇರಿಕಾ ಯಶಸ್ವಿಯಾಗಿದೆ. ಆ ಮೂಲಕ ಎಲ್ಲ ದೇಶಗಳ ಬೆಂಬಲದ ಫಲವಾಗಿ ಇಂಧನ ಮತ್ತು ಹಲವಾರು ವಸ್ತುಗಳನ್ನು ಉತ್ತರ ಕೊರಿಯಾಗೆ ಕಡಿತಗೊಳಿಸುವ ಮೂಲಕ ಅಂತರಾಷ್ಟ್ರೀಯ ಸಮುದಾಯದಲ್ಲಿ ಉತ್ತರ ಕೊರಿಯಾವನ್ನು ಒಬ್ಬಂಟಿಯನ್ನಾಗಿ ಮಾಡಲಾಗಿದೆ.


ಇತ್ತೀಚೆಗಷ್ಟೇ ಜೆರುಸೇಲಂ ಘೋಷಣೆಗೆ ಸಂಬಂಧಿಸಿದಂತೆ ಭದ್ರತಾ ಮಂಡಳಿಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಅಮೇರಿಕಾವು  ಈಗ ಉತ್ತರ ಕೊರಿಯಾದ ಮೇಲೆ ದಿಗ್ಭಂದನ ವಿಧಿಸುವುದಕ್ಕೆ ಬಹುತೇಕ ರಾಷ್ಟ್ರಗಳ ಬೆಂಬಲವನ್ನು ಪಡೆದಿರುವುದಕ್ಕೆ ಅಮೇರಿಕಾ ಸಮಾಧಾನಗೊಂಡಿದೆ ಎಂದು ಹೇಳಬಹುದು.


ಅಣ್ವಸ್ತ್ರ ಪರೀಕ್ಷೆ ಹಾಗೂ ಖಂಡಾಂತರ ಕ್ಷಿಪಣಿಗಳನ್ನು ಪರೀಕ್ಷೆಗೊಳಪಡಿಸುವ ಮೂಲಕ  ಅಂತರಾಷ್ಟ್ರೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಉತ್ತರಕೊರಿಯಾ ಈಗ ಭದ್ರತಾ ಮಂಡಳಿಯ ನಿರ್ಧಾರದಿಂದಾಗಿ ಅದು ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿದೆ ಎಂದು ಹೇಳಬಹುದು.