Tour Package Offer: ಕೊರೊನಾ ಕಾಲದಲ್ಲೊಂದು ವಿಶಿಷ್ಟ ಆಫರ್ , 24 ದಿನಗಳ ರಷ್ಯಾ ಟೂರ್ ಜೊತೆಗೆ Sputnik V ಲಸಿಕೆ Free
Tour Package With Sputnik V Vaccine - ದೆಹಲಿಯಲ್ಲಿರುವ ಟ್ರಾವೆಲ್ ಕಂಪನಿಯೊಂದು ದೆಹಲಿಯಿಂದ ಮಾಸ್ಕೋಗೆ 24 ದಿನಗಳ ಟೂರ್ ಪ್ಯಾಕೇಜ್ ಆರಂಭಿಸಿದೆ. ಈ ಪ್ಯಾಕೇಜ್ ಅಡಿ ಯಾತ್ರಿಗಳನ್ನು ರಷ್ಯಾ ಕಳುಹಿಸಲಾಗುವುದು ಮತ್ತು Sputnik V ಲಸಿಕೆಯ ಎರಡು ಡೋಸ್ ಉಚಿತ ನೀಡಲಾಗುವುದು.
ನವದೆಹಲಿ: Tour Package With Sputnik V Vaccine - ಒಂದು ವೇಳೆ ನಿಮಗೂ ಕೂಡ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಸ್ಲಾಟ್ ಸಿಗುತ್ತಿಲ್ಲ ಹಾಗೂ ಹಣ ಖರ್ಚು ಮಾಡಲು ನೀವು ಸಿದ್ಧರಿದ್ದರೆ, ದೆಹಲಿಯ Tour & Travel Company ನಿಮಗಾಗಿ ಒಂದು ವಿಶಿಷ್ಟ ಕೊಡುಗೆಯೊಂದನ್ನು (Tour Offer) ಹೊತ್ತು ತಂದಿದೆ. ಈ ಕೊಡುಗೆಯ ಅಡಿ ನೀವು ವ್ಯಾಕ್ಸಿನ್ ಕೂಡ ಹಾಕಿಸಿಕೊಳ್ಳಬಹುದು ಹಾಗೂ ಹಾಲಿಡೇಯನ್ನು ಕೂಡ ಆನಂದಿಸಬಹುದು.
ಕೊರೊನಾ ಕಾಲದಲ್ಲೊಂದು (Corona Era) ವಿಶಿಷ್ಟ ಕೊಡುಗೆ
ಕೊರೊನಾ ಮಹಾಮಾರಿಯ ಅತಿ ದೊಡ್ಡ ಹೊಡೆತ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಿದ್ದಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಏಕೆಂದರೆ ಹಲವು ದೇಶಗಳು ತಮ್ಮ ಗಡಿಗಳನ್ನು ಮುಚ್ಚಿವೆ ಹಾಗೂ ದೇಶದ ಹೊರಗೆ ಸಂಚಾರ ಒಂದು ಕನಸಾಗಿ ಮಾರ್ಪಟ್ಟಿದೆ. ಕೊರೊನಾ (Covid-19) ಮೇಲೆ ಹಿಡಿತ ಸಾಧಿಸಲು ವಿಶ್ವಾದ್ಯಂತ ವ್ಯಾಕ್ಸಿನೆಶನ್ ಕಾರ್ಯಕ್ರಮದ ಮೇಲೆ ಒತ್ತು ನೀಡಲಾಗುತ್ತಿದೆ. ಹೀಗಿರುವಾಗ ಟ್ರಾವೆಲ್ ಕಂಪನಿಯೊಂದು ವ್ಯಾಕ್ಸಿನ್ ಹಾಗೂ ಪ್ರವಾಸೋದ್ಯಮವನ್ನು ಒಟ್ಟಿಗೆ ತಂದು ವಿಶಿಷ್ಟ ಕೊಡುಗೆಯೊಂದನ್ನು ಪ್ರಕಟಿಸಿದೆ.
Sputnik V ಲಸಿಕೆಯ ಎರಡು ಡೋಸ್ ಹಾಕಲಾಗುವುದು
ದೆಹಲಿಯಲ್ಲಿರುವ ಟ್ರಾವೆಲ್ ಕಂಪನಿಯೊಂದು ದೆಹಲಿಯಿಂದ ಮಾಸ್ಕೋಗೆ 24 ದಿನಗಳ ಟೂರ್ ಪ್ಯಾಕೇಜ್ (Tour Package) ಆರಂಭಿಸಿದೆ. ಈ ಪ್ಯಾಕೇಜ್ ಅಡಿ ಯಾತ್ರಿಗಳನ್ನು ರಷ್ಯಾ ಕಳುಹಿಸಲಾಗುವುದು ಮತ್ತು Sputnik V ಲಸಿಕೆಯ ಎರಡು ಡೋಸ್ ಉಚಿತ ನೀಡಲಾಗುವುದು ಹಾಗೂ ಜೊತೆಗೆ ಅದರ ಸರ್ಟಿಫಿಕೆಟ್ ಕೂಡ ನಿಮಗೆ ನೀಡಲಾಗುತ್ತಿದೆ.
ಪ್ಯಾಕೇಜ್ ಬೆಲೆ ಎಷ್ಟು?
ಈ ಪ್ಯಾಕೇಜ್ ವಿಶೇಷತೆ ಎಂದರೆ, ಯಾತ್ರಿಗಳು ಲಸಿಕೆಯ ಎರಡು ಡೋಸ್ ಗಳ ನಡುವೆ ಇರುವ ಅಂತರದಲಿ ರಷ್ಯಾದ ಹಲವು ತಾಣಗಳನ್ನು ಸುತ್ತಬಹುದು. ಈ ಪ್ಯಾಕೇಜ್ ಒಟ್ಟು ಬೆಲೆ 1 ಲಕ್ಷ 38 ಸಾವಿರ 700 ರೂ. ಇದರಲ್ಲಿ ವ್ಯಾಕ್ಸಿನ್ ಮೊತ್ತವನ್ನು ಕೂಡ ಶಾಮೀಲುಗೊಳಿಸಲಾಗಿದೆ. ಆದರೆ, ವಿಸಾ ಶುಲ್ಕ ಹಾಗೂ ತೆರಿಗೆಯನ್ನು ನೀವು ಪ್ರತ್ಯೇಕ ಪಾವತಿಸಬೇಕು.
ಪ್ಯಾಕೇಜ್ ಏನೆಲ್ಲಾ ಒಳಗೊಂಡಿದೆ
24 ರಾತ್ರಿಗಳು ಹಾಗೂ 25 ದಿನಗಳನ್ನು ಒಳಗೊಂಡಿರುವ ಈ ಪ್ಯಾಕೇಜ್ ನಲ್ಲಿ ವ್ಯಾಕ್ಸಿನ್ ನ ಎರಡು ಪ್ರಮಾಣಗಳು, ದೆಹಲಿ-ಮಾಸ್ಕೋ ವಿಮಾನಯಾನದ ಟಿಕೆಟ್ ಶುಲ್ಕ, ಸೆಂಟ್ ಪೀಟರ್ಸ್ ಬರ್ಗ್ ನ 3 ಸ್ಟಾರ್ ಹೋಟೆಲ್ ನಲ್ಲಿ 4 ದಿನಗಳ ವಾಸ, ಮಾಸ್ಕೋದಲ್ಲಿ 3 ಸ್ಟಾರ್ ಹೋಟೆಲ್ ನಲ್ಲಿ 20 ದಿನಗಳ ವಾಸದ ಸೌಲಭ್ಯ, ಮಾಸ್ಕೋ-ಸೆಂಟ್ ಪೀಟರ್ಸ್ಬರ್ಗ್ ಬಂದು ಹೋಗಲು ಟ್ರೈನ್ ಟಿಕೆಟ್ ಜೊತೆಗೆ 24 ದಿನಗಳ ಬ್ರೇಕ್ ಫಾಸ್ಟ್ ಹಾಗೂ ಡಿನ್ನರ್ ಶಾಮೀಲಾಗಿದೆ.
ಇದನ್ನೂ ಓದಿ- Corona ಸೋಂಕಿನಿಂದ ಚೇತರಿಸಿಕೊಂಡವರಿಗೆ ಎಷ್ಟು ದಿನಗಳ ಬಳಿಕ ವ್ಯಾಕ್ಸಿನ್ ಸಿಗಲಿದೆ ಗೊತ್ತಾ?
ಆರೋಗ್ಯದ ಮೇಲೆ ವಿಪರೀತ ಸಾಬೀತಾಗಲಿದೆ ಈ ಪ್ಯಾಕೇಜ್
ವ್ಯಾಕ್ಸಿನ್-ಪ್ರವಾಸೋದ್ಯಮದ ಈ ಕೊಡುಗೆ ನೋಡಲು ಆಕರ್ಷಕವಾಗಿದ್ದರೂ ಕೂಡ ಇದು ನಿಮ್ಮ ಆರೋಗ್ಯದ ಮೇಲೆ ವಿಪರೀತ ಪ್ರಭಾವ ಬೀರುವ ಸಾಧ್ಯತೆ ಇದೆ. ಶ್ವಾಸರೋಗ ತಜ್ಞ ಡಾ. ಆಶಿಶ್ ಜೈಸ್ವಾಲ್ ಪ್ರಕಾರ, ಕೊರೊನಾ ವೈರಸ್ (Coronavirus) ಮಹಾಮಾರಿ ಹರಡುವ ಈ ಕಾಲದಲ್ಲಿ ಏರ್ಪೋರ್ಟ್ ಗೆ ಹೋಗುವುದಾಗಲಿ ಅಥವಾ ಇತರ ದೇಶಗಳಿಗೆ ಪ್ರಯಾಣಬೆಳೆಸುವುದಾಗಲಿ ವಿಪರೀತ ಪ್ರಭಾವ ಬೀರುವ ಸಾಧ್ಯತೆ ಇದೆ. ಟೂರಿಸಂ ಕಂಪನಿಯ ಈ ಕೊಡುಗೆ ಜನರ ಭಾರಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ ಹಾಗೂ ಸತತವಾಗಿ ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಕಂಪನಿಗೆ ಕರೆಗಳನ್ನು ಮಾಡುತ್ತಿದ್ದಾರೆ. ಆದರೆ, ಟೂರಿಸಂ ಕಂಪನಿಯ ಈ ಕೊಡುಗೆ ನಿಮ್ಮ ಆರೋಗ್ಯವನ್ನು ಅಪಾಯಕ್ಕೆ ತಾಳುವ ಸಾಧ್ಯತೆ ಇದ್ದು, ಯೋಚಿಸಿ ನಿರ್ಧಾರ ಕೈಗೊಳ್ಳುವುದು ನಿಮಗೆ ಬಿಟ್ಟ ವಿಷಯ.
ಇದನ್ನೂ ಓದಿ-Corona ಬಳಿಕ ಮಹಾಮಾರಿ ಎಂದು ಘೋಷಿಸಲ್ಪಟ್ಟ Black Fungus, ಅಧಿಸೂಚನೆ ಜಾರಿಗೊಳಿಸಿದ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.