ಒಸಾಮಾ ಬಿನ್ ಲ್ಯಾಡನ್ ಪುತ್ರನ ಬಗ್ಗೆ ಮಾಹಿತಿ ನೀಡಿದ್ರೆ 7 ಕೋಟಿ ರೂ. ಬಹುಮಾನ!
ಒಸಾಮಾ ಬಿನ್ ಲಾಡನ್ ಪುತ್ರನ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೇರಿಕಾ ಘೋಷಿಸಿದೆ.
ವಾಷಿಂಗ್ಟನ್: ಅಮೆರಿಕಾದ ವೈಮಾನಿಕಾ ದಾಳಿಯಲ್ಲಿ ಹತ್ಯೆಯಾಗಿದ್ದ ಭಯೋತ್ಪಾದಕ ಸಂಘಟನೆ ಆಲ್ ಖಲೀದಾದ ಮಾಸ್ಟರ್ ಮೈಂಡ್ ಒಸಾಮಾ ಬಿನ್ ಲಾಡನ್ ಪುತ್ರನ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೇರಿಕಾ ಘೋಷಿಸಿದೆ.
ತನ್ನ ತಂದೆ ಒಸಾಮಾ ಬಿನ್ ಲಾಡೆನ್ ಹಾಗೂ ಸಹೋದರ ಖಾಲಿದ್ ಬಿನ್ ಲಾಡೆನ್ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳುತ್ತೇನೆಂದು ಕೆಲ ದಿನಗಳ ಹಿಂದೆ ವೀಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದ ಒಸಮಾ ಬಿನ್ ಲ್ಯಾಡನ್ ಪುತ್ರ ಹಮ್ಜಾ ಬಿನ್ ಲಾಡೆನ್ (30) ಆಲ್ ಖೈದಾ ಸಂಘಟನೆಯ ದೊಡ್ಡ ನಾಯಕನಾಗುವ ಎಲ್ಲಾ ಲಕ್ಷಣಗಳೂ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಮೇರಿಕಾ ಈ ಘೋಷಣೆ ಮಾಡಿದೆ.
2001 ಸೆಪ್ಟೆಂಬರ್ 11ರ ಈ ದಾಳಿಯಲ್ಲಿ ಅಮೇರಿಕಾದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ವರ್ಲ್ಡ್ ಟ್ರೇಡ್ ಸೆಂಟರ್ ಸರ್ವನಾಶ ಮಾಡಿದ್ದ ಒಸಾಮಾ ಬಿನ್ ಲ್ಯಾಡನ್ ಅನ್ನು ಅಮೇರಿಕಾ ಕೊಂದು ಹಾಕಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಆತ ಸಂಚು ರೂಪಿಸುತ್ತಿದ್ದಾನೆ ಎನ್ನಲಾಗಿದೆ. ಆದರೆ, ಆಟ ಎಲ್ಲಿದ್ದಾನೆ ಎಬುದರ ಬಗ್ಗೆ ಇದುವರೆಗೂ ಮಾಹಿತಿ ಇಲ್ಲ.