ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೋ ಬಿಡೆನ್‌ ಚುನಾಯಿತರಾಗಿದ್ದರಿಂದ ಟ್ರಂಪ್ ಪತ್ನಿ ಹಾಗೂ ಅಮೇರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮನೆಗೆ ಹೋಗಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


COMMERCIAL BREAK
SCROLL TO CONTINUE READING

ಭಾರತದ ಆತಿಥ್ಯಕ್ಕೆ ಮನಸೋತು ಸರಣಿ ಟ್ವೀಟ್ ಮಾಡಿದ ಮೆಲಾನಿಯಾ ಟ್ರಂಪ್...!


ಆದರೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೋಲನ್ನು ಇದುವರೆಗೆ ಒಪ್ಪಿಲ್ಲ. ಈ ಹಿನ್ನಲೆಯಲ್ಲಿ ಅಂತಿಮ ಫಲಿತಾಂಶ ಇನ್ನೂ ಕಗ್ಗಂಟಾಗಿ ಉಳಿದಿದೆ.ಮೂಲಗಳ ಪ್ರಕಾರ, ಮೆಲಾನಿಯಾ ಬಜೆಟ್ ಮತ್ತು ಶ್ವೇತಭವನದ ನಂತರದ ಜೀವನಕ್ಕೆ ಸಿಬ್ಬಂದಿ ಹಂಚಿಕೆಯ ವಿಷಯದಲ್ಲಿ ತನಗೆ ಏನು ಲಭ್ಯವಿದೆ ಎಂಬುದನ್ನು ಪರಿಶೀಲಿಸುವುದರಲ್ಲಿ ಮುಂದಾಗಿದ್ದಾರೆ ಎನ್ನಲಾಗಿದೆ.


ಡೈವೋರ್ಸ್ ನೀಡಲು ಮುಂದಾಗಿದ್ದಾರೆಯೇ ಟ್ರಂಪ್ ಪತ್ನಿ ಮೆಲಾನಿಯಾ..? ಇಲ್ಲಿದೆ ಮಹತ್ವದ ಸುಳಿವು


'ಅವರು ಮನೆಗೆ ಹೋಗಲು ಬಯಸುತ್ತಾಳೆ"ಎಂದು ಮೆಲಾನಿಯಾಗೆ ಪರಿಚಿತವಿರುವ ಮೂಲವೊಂದು ಹೇಳಿದೆಮೆಲಾನಿಯಾ ಟ್ರಂಪ್ ತಮ್ಮ ಪರಂಪರೆಯ ಮೇಲೆ ಕೇಂದ್ರೀಕರಿಸಿದ್ದಾರೆ.ಆ ನಿಟ್ಟಿನಲ್ಲಿ ಅವರು ಫೋಟೋ ಕೇಂದ್ರಿಕ ಪುಸ್ತಕವನ್ನು ರಚಿಸುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.


ಮೆಲೆನಿಯಾ ಟ್ರಂಪ್ ಸೋಮವಾರ ಅವರು ಟೆನಿಸ್ ಪೆವಿಲಿಯನ್ ಪೂರ್ಣಗೊಳಿಸಿದ್ದಾರೆ.  ಅಷ್ಟೇ ಅಲ್ಲದೆ ಇತ್ತೀಚೆಗೆ ಅವರು ಹೊಸದಾಗಿ ನವೀಕರಿಸಿದ ರೋಸ್ ಗಾರ್ಡನ್‌ನಲ್ಲಿ ಹೊಸ ಕಲಾಕೃತಿಯನ್ನು ಅನಾವರಣಗೊಳಿಸಿದ್ದಾರೆ. ಈಗ ಅವರ ವೇಳಾ ಪಟ್ಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ಟೆಫನಿ ಗ್ರಿಶಮ್ ಅವರ 'ವೇಳಾಪಟ್ಟಿಯು ತಾಯಿ, ಹೆಂಡತಿ ಮತ್ತು ಅಮೇರಿಕಾದ ಪ್ರಥಮ ಮಹಿಳೆ ಎಂಬ ಕರ್ತವ್ಯದಿಂದ ತುಂಬಿದೆ" ಎಂದು ತಿಳಿಸಿದರು.