ನವದೆಹಲಿ: ಯುಎಸ್ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಭಾರತದಲ್ಲಿ ಸ್ವೀಕರಿಸಿದ ಆತ್ಮೀಯ ಸ್ವಾಗತಕ್ಕಾಗಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರಿಗೆ ಧನ್ಯವಾದಗಳನ್ನು ಟ್ವೀಟ್ ಮಾಡಿದ್ದಾರೆ.
It was great meeting the U.S. Embassy staff @USAndIndia and their families in #India. @POTUS and I are thankful for your commitment to representing the #USA 🇮🇳🇺🇸 pic.twitter.com/SkT6C4wnUV
— Melania Trump (@FLOTUS) February 28, 2020
'ರಾಷ್ಟ್ರಪತಿ ಅರಮನೆಗೆ ಆತ್ಮೀಯ ಸ್ವಾಗತಕ್ಕಾಗಿ ರಾಷ್ಟ್ರಪತಿ ಮತ್ತು ಪ್ರಥಮ ಮಹಿಳೆ ಸವಿತಾ ಕೋವಿಂದ್ ಅವರಿಗೆ ಧನ್ಯವಾದಗಳು. ಇದು ನಮ್ಮ ಎರಡು ರಾಷ್ಟ್ರಗಳ ನಡುವಿನ ಸ್ನೇಹವನ್ನು ಆಚರಿಸುವ ಸುಂದರ ದಿನವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ಪತಿ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪಿಎಂ ಮೋದಿ ಅವರನ್ನು ಟ್ಯಾಗ್ ಮಾಡಿ "ನನ್ನನ್ನು ಮತ್ತು ಡೊನಾಲ್ಡ್ ಟ್ರಂಪ್ ರನ್ನು ನಿಮ್ಮ ಸುಂದರ ದೇಶಕ್ಕೆ ಸ್ವಾಗತಿಸಿದ್ದಕ್ಕಾಗಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಿಮ್ಮಿಂದ ಮತ್ತು ಭಾರತದ ಜನರಿಂದ ಅಂತಹ ಆತ್ಮೀಯ ಸ್ವಾಗತವನ್ನು ನಾವು ಸ್ವೀಕರಿಸಿದ್ದೇವೆ! ಎಂದು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
Thank you @narendramodi for welcoming me and @POTUS to your beautiful country. We were delighted to receive such a warm welcome from you and the people of India! pic.twitter.com/lWyndlcpI7
— Melania Trump (@FLOTUS) February 28, 2020
ಯುಎಸ್ ಗೆ ತೆರಳುವ ಮೊದಲು, ಟ್ರಂಪ್ ದಂಪತಿಗಳು ದೆಹಲಿಯ ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಭೇಟಿ ನೀಡಿದ್ದರು.'ಸುಂದರವಾದ ರಾಜ್ ಘಾಟ್ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುವುದು ಮತ್ತು ಮಹಾತ್ಮ ಗಾಂಧಿಯವರ ಜೀವನ ಮತ್ತು ಪರಂಪರೆಯನ್ನು ನೆನಪಿಟ್ಟುಕೊಳ್ಳಲು ಒಂದು ಮರವನ್ನು ನೆಡುವುದು ಒಂದು ಗೌರವವಾಗಿದೆ" ಎಂದು ಮೆಲಾನಿಯಾ ಟ್ರಂಪ್ ಟ್ವೀಟ್ ಮಾಡಿದ್ದಾರೆ.
It was an honor to lay a wreath at the beautiful Raj Ghat Memorial & plant a tree to remember the life & legacy of Mahatma Gandhi. pic.twitter.com/uFazAL7pO5
— Melania Trump (@FLOTUS) February 28, 2020
'ಸಂತೋಷದ ತರಗತಿಗೆ" ಹಾಜರಾಗಲು ಶಾಲೆಯ ಪ್ರವಾಸದ ಸಮಯದಲ್ಲಿ ಮಾರ್ಗದರ್ಶನ ನೀಡಿದ ದೆಹಲಿ ಸರ್ಕಾರಿ ಶಾಲಾ ಶಿಕ್ಷಕಿ ಮನು ಗುಲಾಟಿ ಅವರಿಗೆ ಅವರು ಧನ್ಯವಾದ ಅರ್ಪಿಸಿದರು.ಟ್ರಂಪ್ ದಂಪತಿ ಕಳೆದ ವಾರ ಎರಡು ದಿನಗಳ ಕಾಲ ಭಾರತದಲ್ಲಿದ್ದರು. ಅವರು ಪ್ರಧಾನಿ ಮೋದಿಯವರ ತವರು ರಾಜ್ಯವಾದ ಗುಜರಾತ್‌ನ ಅಹಮದಾಬಾದ್‌ಗೆ ಬಂದಿಳಿದರು, ಅಲ್ಲಿಂದ ಅವರು ಆಗ್ರಾದ ತಾಜ್‌ಮಹಲ್ ನೋಡಲು ಹೋದರು. ಮರುದಿನ ಅಧ್ಯಕ್ಷ ಟ್ರಂಪ್ ಮತ್ತು ಪಿಎಂ ಮೋದಿ ಅವರು ದೆಹಲಿಯಲ್ಲಿ ವ್ಯಾಪಾರ ಮತ್ತು ರಕ್ಷಣಾ ಕುರಿತು ಮಾತುಕತೆ ನಡೆಸಿ ಎರಡೂ ರಾಷ್ಟ್ರಗಳ ನಡುವೆ ಒಪ್ಪಂದಗಳಿಗೆ ಸಹಿ ಹಾಕಿದವು.