ನವದೆಹಲಿ: ಉಕ್ರೇನ್‌ನ ಕೈವ್ ಪ್ರದೇಶದ ಇರ್ಪಿನ್ ಪಟ್ಟಣದಲ್ಲಿ ರಷ್ಯಾದ ಪಡೆಗಳು ಅಮೆರಿಕದ ಪತ್ರಕರ್ತನನ್ನು ಗುಂಡಿಕ್ಕಿ ಕೊಂದಿದ್ದು, ಮತ್ತೊಬ್ಬ ಪತ್ರಕರ್ತ ಗಾಯಗೊಂಡಿದ್ದಾನೆ ಎಂದು ಕೈವ್ ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ಆಂಡ್ರಿ ನೈಬಿಟೊವ್ ಭಾನುವಾರ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮೃತಪಟ್ಟಿರುವ ಪತ್ರಕರ್ತ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು ಎಂದು ನೈಬಿಟೋವ್ ಆರಂಭದಲ್ಲಿ ಹೇಳಿದರು.ಆದರೆ ಈ ಕುರಿತಾಗಿ ಸ್ಪಷ್ಟನೆ ನೀಡಿರುವ ನ್ಯೂಯಾರ್ಕ್ ಟೈಮ್ಸ್, ಮೃತಪಟ್ಟಿರುವ ಪತ್ರಕರ್ತ ಈ ಹಿಂದೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು.ಆದರೆ ಪ್ರಸ್ತುತ ಅದರಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದೆ.ಮೃತಪಟ್ಟಿರುವ ಪತ್ರಕರ್ತನನ್ನು ಬ್ರೆಂಟ್ ರೆನಾಡ್ (Brent Renaud) ಎಂದು ಹೆಸರಿಸಲಾಗಿದೆ.


ಇದನ್ನೂ ಓದಿ: ಎಚ್.ಡಿ ದೇವೇಗೌಡ-ಕುಮಾರಸ್ವಾಮಿ ಅವರ ಜೊತೆಗಿನ ಚರ್ಚೆ ಫಲಪ್ರದ ಎಂದ ಸಿ ಎಂ ಇಬ್ರಾಹಿಂ


'ಬ್ರೆಂಟ್ ರೆನಾಡ್ ಅವರ ಸಾವಿನ ಸುದ್ದಿ ಕೇಳಿ ನಮಗೆ ಅತೀವ ದುಃಖವಾಗಿದೆ.ಬ್ರೆಂಟ್ ಪ್ರತಿಭಾವಂತ ಛಾಯಾಗ್ರಾಹಕ ಮತ್ತು ಚಲನಚಿತ್ರ ನಿರ್ಮಾಪಕ, ಅವರು ನ್ಯೂಯಾರ್ಕ್ ಟೈಮ್ಸ್‌ಗೆ ವರ್ಷಗಳಿಂದ ಕೊಡುಗೆ ನೀಡಿದ್ದಾರೆ" ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ.


Russia-Ukraine War:ತಾಯಿಗೆ ಔಷಧಿ ತರಲು ಹೋದ ಮಹಿಳೆ ರಷ್ಯಾ ದಾಳಿಗೆ ಬಲಿ


'ಅವರು ಈ ಹಿಂದೆ ನ್ಯೂಯಾರ್ಕ್ ಟೈಮ್ಸ್‌ಗೆ ಕೊಡುಗೆ ನೀಡಿದ್ದರೂ ಅವರು ಉಕ್ರೇನ್‌ನ (Ukraine) ಟೈಮ್ಸ್‌ನಲ್ಲಿ ಯಾವುದೇ ಡೆಸ್ಕ್‌ಗೆ ನಿಯೋಜನೆಯಲ್ಲಿರಲಿಲ್ಲ.ಅವರು ಹಲವು ವರ್ಷಗಳ ಹಿಂದೆ ನಿಯೋಜನೆಗಾಗಿ ನೀಡಲಾದ ಟೈಮ್ಸ್ ಪ್ರೆಸ್ ಬ್ಯಾಡ್ಜ್ ಅನ್ನು ಧರಿಸಿದ್ದರಿಂದ ಅವರು  ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಆರಂಭಿಕ ವರದಿಗಳು ಪ್ರಸಾರವಾದವು "ಎಂದು ಪತ್ರಿಕೆಯ ವಕ್ತಾರರು ತಿಳಿಸಿದ್ದಾರೆ.


ಇದನ್ನೂ ಓದಿ:Russia-Ukraine War:ತಾಯಿಗೆ ಔಷಧಿ ತರಲು ಹೋದ ಮಹಿಳೆ ರಷ್ಯಾ ದಾಳಿಗೆ ಬಲಿ


'ಇನ್ನೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ.ನಾವು ಪ್ರಸ್ತುತ ಸಂತ್ರಸ್ತರನ್ನು ಯುದ್ಧ ವಲಯದಿಂದ ಹೊರಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದೇವೆ' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.