ಎಚ್.ಡಿ ದೇವೇಗೌಡ-ಕುಮಾರಸ್ವಾಮಿ ಅವರ ಜೊತೆಗಿನ ಚರ್ಚೆ ಫಲಪ್ರದ ಎಂದ ಸಿ ಎಂ ಇಬ್ರಾಹಿಂ

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಸಿಎಂ ಇಬ್ರಾಹಿಮ್ ಜೆಡಿಎಸ್ ಸೇರಲು ಮುಂದಾಗಿದ್ದಾರೆ.

Written by - Zee Kannada News Desk | Last Updated : Mar 12, 2022, 09:18 PM IST
  • ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಸಿಎಂ ಇಬ್ರಾಹಿಮ್ ಜೆಡಿಎಸ್ ಸೇರಲು ಮುಂದಾಗಿದ್ದಾರೆ.
ಎಚ್.ಡಿ ದೇವೇಗೌಡ-ಕುಮಾರಸ್ವಾಮಿ ಅವರ ಜೊತೆಗಿನ ಚರ್ಚೆ ಫಲಪ್ರದ ಎಂದ ಸಿ ಎಂ ಇಬ್ರಾಹಿಂ title=

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಸಿಎಂ ಇಬ್ರಾಹಿಮ್ ಜೆಡಿಎಸ್ ಸೇರಲು ಮುಂದಾಗಿದ್ದಾರೆ.

ಇಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ (HD Devegowda) ಮತ್ತು ಕುಮಾರಸ್ವಾಮಿ ಜೊತೆ ಅವರ ನಿವಾಸಗಳಲ್ಲಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಇಬ್ರಾಹಿಮ್ "ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ಜೊತೆ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಫಲಪ್ರದ ಚರ್ಚೆ ಮಾಡಿದ್ದೇನೆ.ಮಾತುಕತೆಯಿಂದ ನಾನು ಸಂತೋಷವಾಗಿದ್ದೇನೆ" ಎಂದು ಇಂದು ಮಧ್ಯಾಹ್ನ ಕಾಂಗ್ರೆಸ್‌ ವತಿಯಿಂದ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಸಿ.ಎಂ.ಇಬ್ರಾಹಿಂ (CM Ibrahim) ಹೇಳಿದ್ದಾರೆ. 

ಇದನ್ನೂ ಓದಿ: ಏಕಾಏಕಿ Twitter ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಟ್ರೆಂಡಿಂಗ್ ಆಗಿದ್ದೇಕೆ?

''ನಾಳೆ ನಮ್ಮ ಸಮಾಜದ ಗುರುಗಳು ಮತ್ತು ಕೆಲವು ಪೀಠಾಧಿಪತಿಗಳ ಜೊತೆ ಚರ್ಚೆ ಮಾಡುವುದು ಇದೆ.ಅವರ ಜೊತೆ ಚರ್ಚೆ ಮಾಡಿ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ.ನಮ್ಮ ಸಮಾಜದ ಗುರುಗಳ ಅಪ್ಪಣೆ ಪಡೆಯಬೇಕಾಗುತ್ತದೆ.ಯಾವಾಗ ಜಾತ್ಯಾತೀತ ಜನತಾದಳ ಸೇರ್ಪಡೆ ಎಂಬ ಬಗ್ಗೆ ಇವತ್ತು ಚರ್ಚೆ ಮಾಡಿದ್ದೇವೆ. ಸುತ್ತೂರು ಶ್ರೀ ಮತ್ತು ಇತರ ಕೆಲವು ಸ್ವಾಮೀಜಿಗಳ ಜೊತೆ ಚರ್ಚೆ ಮಾಡುತ್ತೇನೆ.ಅವರ ಜೊತೆ ಎಲ್ಲಾ ಚರ್ಚೆ ಮಾಡಿದ ಬಳಿಕ ಸೇರ್ಪಡೆ ದಿನಾಂಕ ನಿಗದಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News